Wednesday, Nov 25 2020 | Time 00:02 Hrs(IST)
Entertainment Share

ಡಿ ಬಾಸ್ ರೀತಿ ಹೆಸರು ಮಾಡ್ಬೇಕು : ಅಮೂಲ್ಯ

ಬೆಂಗಳೂರು, ಅ 31 (ಯುಎನ್‍ಐ) ರಾಜರಾಜೇಶ‍್ವರಿ ನಗರ ವಿಧನಾಸಭಾ ಕ್ಷೇತ್ರದ ಉಪ ಚುನಾವಣಾ ಕಣದ ರಂಗು ಸಿನಿಮಾ ನಟ, ನಟಿಯರ ಪ್ರಚಾರದಿಂದ ಮತ್ತಷ್ಟು ಏರಿದೆ.

ನಟ ದರ್ಶನ್ ಹಾಗೂ ನಟಿ ಅಮೂಲ್ಯ ಶುಕ್ರವಾರ ಅಭ್ಯರ್ಥಿ ಮುನಿರತ್ನ ಪರವಾಗಿ ಪ್ರಚಾರ ನಡೆಸಿದ್ದರು. ಈ ವೇಳೆ ನಟ ದರ್ಶನ್ ಗೆ ಜನರಿಂದ ದೊರೆತ ಪ್ರತಿಕ್ರಿಯೆಗೆ, ಸ್ವಾಗತಕ್ಕೆ ನಟಿ ಅಮೂಲ್ಯ ಬೆರಗಾಗಿದ್ದಾರೆ. ಹೀಗಂತ ಸ್ವತಃ ಅವರೇ ಟ್ವೀಟ್ ಮಾಡಿದ್ದಾರೆ.

“ಹೆಸರು ಗಳಿಸಿದರೆ ನಿಮ್ಮಂತೆ ಹೆಸರು ಗಳಿಸಬೇಕು ಅನಿಸಿತು ಇಂದು ನಿಮ್ಮೊಂದಿಗೆ ಕ್ಯಾಂಪೇನ್(ಪ್ರಚಾರ) ಮಾಡಿ. ನಿಮ್ಮ ಅಭಿಮಾನಿ ಬಳಗವನ್ನು ನೋಡಿ ನಾನು ಮೂಕವಿಸ್ಮಿತನಾಗಿದ್ದೇನೆ. ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹ ನನ್ನ ಮೇಲೆ ಸದಾ ಇರಲಿ” ಅಂತಾ ಬರೆದುಕೊಂಡಿದ್ದಾರೆ.

ಅಮೂಲ್ಯ ಟ್ವೀಟ್ ಗೆ ಸಾಕಷ್ಟು ಪ್ರತಿಕ್ರಿಯೆ ವ್ಯಕ್ತವಾಗಿದೆ. “ದರ್ಶನ್ ಅವರ ಗತ್ತು ಇಡೀ ಕರ್ನಾಟಕ ಅಲ್ಲ ಇಡೀ ದೇಶಕ್ಕೆ ಗೊತ್ತು ನಮ್ಮ #ಡಿಬಾಸ್ ಅಭಿಮಾನಿಗಳ ಪಾಲಿಗೆ ಅವರೇ ನಮ್ಮ ಒಡೆಯ. ಗಜ. ಜೈ ಬಾಕ್ಸ್ ಆಫೀಸ್ ಸುಲ್ತಾನ್ ಗೆ ಜೈ ಡಿ ಬಾಸ್” ಎಂದು ಓರ್ವ ಅಭಿಮಾನಿ ಉತ್ತರಿಸಿದ್ದಾರೆ.

“ಸ್ನೇಹ, ಪ್ರೀತಿ, ಸರಳತೆ, ನಂಬಿಕೆ, ಗೌರವಕ್ಕೆ ದರ್ಶನ್ ಮತ್ತೊಂದು ಹೆಸರು” ಎಂದು ಇನ್ನೋರ್ವ ಅಭಿಮಾನಿ ಹೇಳಿಕೊಂಡಿದ್ದಾರೆ.

ಯುಎನ್‍ಐ ಎಸ್‍ಎ 0830
More News
ಕೋವಿಡ್-19 ವಿರುದ್ಧ ಹೋರಾಡಲು ಜನರಿಗೆ ಪ್ರೋತ್ಸಾಹಿಸಿದ ಅಮಿತಾಬ್

ಕೋವಿಡ್-19 ವಿರುದ್ಧ ಹೋರಾಡಲು ಜನರಿಗೆ ಪ್ರೋತ್ಸಾಹಿಸಿದ ಅಮಿತಾಬ್

24 Nov 2020 | 8:50 PM

ಮುಂಬೈ, ನ.24 (ಯುಎನ್ಐ) ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ ಅವರು ಕೊರೋನಾ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಜನರಿಗೆ ಪ್ರೋತ್ಸಾಹಿಸಿದ್ದಾರೆ.

 Sharesee more..
ಜಗ್ಗೇಶ್ ಜತೆ ಡಾ  ರಾಜ್ ಚರ್ಚಿಸುತ್ತಿದ್ದ ವಿಷಯ ಯಾವುದು?

ಜಗ್ಗೇಶ್ ಜತೆ ಡಾ ರಾಜ್ ಚರ್ಚಿಸುತ್ತಿದ್ದ ವಿಷಯ ಯಾವುದು?

24 Nov 2020 | 8:45 PM

ಬೆಂಗಳೂರು, ನ 24 (ಯುಎನ್‍ಐ) ಮಧ್ಯಮ ವರ್ಗದ ಕುಟುಂಬದಿಂದ ಬಂದಂತಹ ಜಗ್ಗೇಶ್‍, ಚಿತ್ರರಂಗ ಪ್ರವೇಶಿಸಿ ತಮ್ಮೆಲ್ಲ ಕನಸುಗಳನ್ನು ನನಸಾಗಿಸಿಕೊಂಡವರು.

 Sharesee more..

ಯಾವುದದು ಪ್ಯಾನ್ ಇಂಡಿಯಾ? ಜಗ್ಗೇಶ್ ಕಿಡಿ

24 Nov 2020 | 6:30 PM

 Sharesee more..