Sunday, Nov 1 2020 | Time 01:35 Hrs(IST)
Entertainment Share

ಡ್ರಗ್ಸ್ ಪ್ರಕರಣ : ಸಿಸಿಬಿ ಅಧಿಕಾರಿಗಳಿಂದ ಐಂದ್ರಿತಾ, ದಿಗಂತ್ ವಿಚಾರಣೆ

ಬೆಂಗಳೂರು, ಸೆ 16 (ಯುಎನ್ಐ) ಸ್ಯಾಂಡಲ್ ವುಡ್ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿ ನಟ ದಿಗಂತ್ ಹಾಗೂ ಐಂದ್ರಿತಾ ರೇ ದಂಪತಿ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಅಧಿಕಾರಿಗಳ ಎದುರು ಹಾಜರಾಗಿದ್ದು, ವಿಚಾರಣೆಗೆ ಗುರಿಪಡಿಸಿದ್ದಾರೆ.

ಈಗಾಗಲೇ ಪ್ರಕರಣದ ಆರೋಪಿಯಾಗಿರುವ ರವಿಶಂಕರ್ ವಿಚಾರಣೆಯ ವೇಳೆ ದಿಗಂತ್, ಐಂದ್ರಿತಾ ತಾರಾ ದಂಪತಿಯ ಹೆಸರು ಉಲ್ಲೇಖಿಸಿದ್ದ. ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಅಧಿಕಾರಿಗಳು ಮಂಗಳವಾರ ನೋಟಿಸ್ ನೀಡಿದ್ದರು.

ಬಾಲಿವುಡ್ ನಟ ಸಲ್ಮಾನ್ ಖಾನ್ ಸೋದರ ಅರ್ಬಾಜ್ ಖಾನ್ ಅವರೊಡನೆ ಐಂದ್ರಿತಾ ರೇ ಸಂಪರ್ಕವಿದೆ ಎನ್ನಲಾಗಿದೆ. ಅಲ್ಲದೆ ಪ್ರಕರಣದ ಮತ್ತೋರ್ವ ಆರೋಪಿ ವಿರೇನ್ ಖನ್ನಾ ಸಹ ತನ್ನ ಹೇಳಿಕೆಯಲ್ಲಿ ಐಂದ್ರಿತಾ ರೈ ಹೆಸರು ಹೇಳಿದ್ದಾನೆ ಎನ್ನಲಾಗಿದೆ.

ಮುಂಬೈಯಲ್ಲಿ ಆಯೋಜಿಸುತ್ತಿದ್ದ ಭರ್ಜರಿ ಪಾರ್ಟಿಗಳಲ್ಲಿ ಐಂದ್ರಿತಾ ಭಾಗವಹಿಸುತ್ತಿದ್ದರು. ಅಲ್ಲದೆ ಪ್ರಕರಣದ ಆರೋಪಿ ಆದಿತ್ಯ ಆಳ್ವಾ ಪಾರ್ಟಿಗಳಲ್ಲೂ ಕಾಣಿಸಿಕೊಂಡಿದ್ದರು. ಹೀಗೆ ಹಲವು ಸಾಕ್ಷ್ಯಗಳನ್ನು ಸಂಗ್ರಹಿಸಿರುವ ಸಿಸಿಬಿ ಅಧಿಕಾರಿಗಳು, ಡ್ರಗ್ಸ್ ಪ್ರಕರಣದಲ್ಲಿ ದಂಪತಿಯ ಪಾತ್ರವೇನು ಎಂಬುದರ ವಿಚಾರಣೆ ನಡೆಸಲಿದ್ದಾರೆ.

ಯುಎನ್‍ಐ ಎಸ್‍ಎ 1117
More News

ನಟ, ನಿರ್ಮಾಪಕ ದಿನೇಶ್ ಗಾಂಧಿ ನಿಧನ

31 Oct 2020 | 1:53 PM

 Sharesee more..

ಕಮಲ ಹಾಸನ್ ಜನ್ಮದಿನದಂದು 232ನೇ ಫಸ್ಟ್ ಲುಕ್

31 Oct 2020 | 12:15 PM

 Sharesee more..

ಡಿ ಬಾಸ್ ರೀತಿ ಹೆಸರು ಮಾಡ್ಬೇಕು : ಅಮೂಲ್ಯ

31 Oct 2020 | 8:32 AM

 Sharesee more..

ಕಾಜಲ್ - ಕಿಚ್ಲು ಕಲ್ಯಾಣ

30 Oct 2020 | 3:03 PM

 Sharesee more..