Friday, Feb 28 2020 | Time 09:42 Hrs(IST)
  • ದೀರ್ಘಾವಧಿ ಬಳಿಕ ರಾಷ್ಟ್ರೀಯ ಫುಟ್ಬಾಲ್ ಶಿಬಿರಕ್ಕೆ ಮರಳಿದ ಸಂದೇಶ್‌, ಜೆಜೆ
  • ದಕ್ಷಿಣ ಕೊರಿಯಾದಲ್ಲಿ ಮತ್ತೆ 256 ಕೊರೊನಾ ಸೋಂಕು ಪ್ರಕರಣ ದಾಖಲು
  • ಕೊರೊನಾ ಸೋಂಕು : ಹಜ್ ಯಾತ್ರೆಗೆ ನಿರ್ಬಂಧ
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
Entertainment Share

ಡಾರ್ಲಿಂಗ್ ಕೃಷ್ಣ ‘ಲೋಕಲ್ ಟ್ರೈನ್’ ಹಾಡುಗಳಿಗೆ ‘ಪವರ್ ಹಸಿರು ನಿಶಾನೆ

ಬೆಂಗಳೂರು, ಜ 24 (ಯುಎನ್‍ಐ) ಡಾರ್ಲಿಂಗ್ ಕೃಷ್ಣ ಅಭಿನಯದ ‘ಲೋಕಲ್ ಟ್ರೈನ್’ ಚಿತ್ರದ ಮೂರು ಸುಂದರ ಹಾಗೂ ಕಲರ್‍ಫುಲ್ ಹಾಡುಗಳು ಬಿಡುಗಡೆಯಾಗಿವೆ

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಧ್ವನಿಸಾಂದ್ರಿಕೆ ಬಿಡುಗಡೆಗೊಳಿಸಿ ಲೋಕಲ್ ಟ್ರೈನ್ ಯಶಸ್ವಿಯಾಗಲಿ ಎಂದು ಚಿತ್ರತಂಡಕ್ಕೆ ಶುಭ ಕೋರಿದರು
‘ಪುನೀತ್ ರಾಜ್‍ಕುಮಾರ್ ನನ್ನ ದೊಡ್ಡಣ್ಣನ ಹಾಗೆ ಮುಂಚಿನಿಂದಲೂ ನನ್ನೆಲ್ಲ ಸಿನೆಮಾಗಳಿಗೆ ಪ್ರೋತ್ಸಾಹ ನೀಡುತ್ತ ಬಂದಿದ್ದಾರೆ’ ಎಂದ ಡಾರ್ಲಿಂಗ್ ಕೃಷ್ಣ, ಈ ಚಿತ್ರದಲ್ಲಿ ಕಾಲೇಜು ಯುವಕನ ಪಾತ್ರದಲ್ಲಿ ಕಾಣಿಸಿಕೊಂಡಿರುವೆ ವಿದ್ಯಾಭ್ಯಾಸಕ್ಕೆ ಹಳ್ಳಿಯಿಂದ ಬೆಂಗಳೂರಿಗೆ ನಿತ್ಯ ರೈಲಿನಲ್ಲಿ ಬರುತ್ತಿರುತ್ತಾನೆ ಚಿತ್ರದ ಬಹುತೇಕ ದೃಶ್ಯಗಳು ರೈಲಿನಲ್ಲೇ ನಡೆಯುವ ಕಾರಣ ‘ಲೋಕಲ್ ಟ್ರೈನ್’ ಅಂತ ಹೆಸರಿಟ್ಟಿದ್ದೇವೆ ಟ್ರೈನ್ ಲೋಕಲ್ ಆದ್ರೂ ಪ್ರೊಡಕ್ಷನ್ ಹೈ ಕ್ಲಾಸ್ ಇಬ್ಬರು ನಾಯಕಿಯರಿದ್ದಾರೆ ಎಂದರು

ಚಿತ್ರಕ್ಕೆ ರುದ್ರಮಣಿ ನಿರ್ದೇಶನವಿದೆಯಾದರೂ, ಕೆಲ ಭಿನ್ನಾಭಿಪ್ರಾಯಗಳಿಂದಾಗಿ ಅವರು ಚಿತ್ರತಂಡದಿಂದ ಹೊರನಡೆದರು ಹೀಗಾಗಿ ಪೋಸ್ಟ್ ಪ್ರೊಡಕ್ಸನ್ ಕೆಲಸದ ಹೊಣೆಯನ್ನು ನಿರ್ದೇಶಕ ಮಾರುತಿ ವಹಿಸಿಕೊಂಡಿದ್ದಾರೆ ಎಂದು ನಿರ್ಮಾಪಕ ಸುಬ್ರಾಯ ವಾಲ್ಕಿ ತಿಳಿಸಿದರು.

ಇದು ಸ್ವಮೇಕ್ ಚಿತ್ರವಾಗಿದ್ದು, ಬಂಡವಾಳ ಹೂಡಿರುವ ಸುಬ್ರಾಯ ವಾಲ್ಕಿಯವರೇ ಕಥೆ ಬರೆದಿದ್ದಾರೆ. 5 ಹಾಡುಗಳಿದ್ದು, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ

ತಾರಾಗಣದಲ್ಲಿ ಡಾರ್ಲಿಂಗ್ ಕೃಷ್ಣ, ಮೀನಾಕ್ಷಿ ದೀಕ್ಷಿತ್, ಈಸ್ಟಾರ್ ನರೋನ, ಭಜರಂಗಿ ಲೋಕಿ, ಸಾಧು ಕೋಕಿಲ, ಮೈಸೂರು ಗೋಪಿ ಮೊದಲಾದವರಿದ್ದಾರೆ.

ಯುಎನ್‍ಐ ಎಸ್‍ಎ ವಿಎನ್ 0705
More News
’99 ಲಕ್ಷಕ್ಕೊಬ್ಬ’ ಪ್ರಥಮ್ ಹೊಸ ಚಿತ್ರದ ಟೈಟಲ್ ಲಾಂಚ್

’99 ಲಕ್ಷಕ್ಕೊಬ್ಬ’ ಪ್ರಥಮ್ ಹೊಸ ಚಿತ್ರದ ಟೈಟಲ್ ಲಾಂಚ್

27 Feb 2020 | 9:00 PM

ಬೆಂಗಳೂರು, ಫೆ 27 (ಯುಎನ್‍ಐ) ಬಿಗ್ ಬಾಸ್ ವಿನ್ನರ್ ಪ್ರಥಮ್ ಅಭಿನಯದ ಹೈ ವೋಲ್ಟೇಜ್ ಕಾಮಿಡಿ ಹಾರರ್ ‘ನಟ ಭಯಂಕರ’ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು ಪರೀಕ್ಷೆಗಳು ಮುಗಿದ ನಂತರ ರಿಲೀಸ್ ಆಗಲಿದೆ

 Sharesee more..
‘ಎಂಆರ್ ಪಿ  ಚಿತ್ರದ ತುಣುಕು-ಹಾಸ್ಯದ ಮಿಣುಕು

‘ಎಂಆರ್ ಪಿ ಚಿತ್ರದ ತುಣುಕು-ಹಾಸ್ಯದ ಮಿಣುಕು

26 Feb 2020 | 10:25 PM

ಬೆಂಗಳೂರು, ಫೆ 26 (ಯುಎನ್‍ಐ) ಹಾಸ್ಯ ಲೇಪನದೊಡನೆ ಸಂದೇಶವನ್ನೂ ಒಳಗೊಂಡಿರುವ ಮನರಂಜನಾತ್ಮಕ ಚಿತ್ರ ‘ಎಂಆರ್‍ಪಿ’ ಯ ಟ್ರೇಲರ್ ಬಿಡುಗಡೆಯಾಗಿದೆ

 Sharesee more..