Friday, Dec 6 2019 | Time 01:11 Hrs(IST)
Sports Share

ಡೆವಿಸ್ ಕಪ್: ಪಾಕ್ ವಿರುದ್ಧದ ಪಂದ್ಯಕ್ಕಿಲ್ಲ ಬೋಪಣ್ಣ

ನವದೆಹಲಿ, ನ 18 (ಯುಎನ್‌ಐ) ಭುಜದ ಗಾಯದಿಂದಾಗಿ ಭಾರತದ ಹಿರಿಯ ಡಬಲ್ಸ್‌ ಆಟಗಾರ ರೋಹನ್ ಬೋಪಣ್ಣ ಅವರು ಪಾಕಿಸ್ತಾನ ವಿರುದ್ಧ ಡೆವಿಸ್ ಕಪ್ ಪಂದ್ಯಕ್ಕೆೆ ಅಲಭ್ಯರಾಗಿದ್ದಾರೆ. ಇವರ ಅನುಪಸ್ಥಿತಿಯಲ್ಲಿ ಜೀವನ್‌ಗೆ ಅವಕಾಶ ಸಿಗಲಿದೆ.
39ರ ಪ್ರಾಯದ ರೋಹನ್ ಬೋಪಣ್ಣ ಅವರು ಸೋಮವಾರ ಎಂ.ಆರ್.ಐ ಸ್ಕ್ಯಾನ್‌ಗೆ ಒಳಗಾಗಿದ್ದರು. ಅವರ ಭುಜದ ಗಾಯ ಗಂಭೀರವಾಗಿರುವುದು ತಿಳಿದುಬಂದಿದೆ. ಈ ಹಿನ್ನೆೆಲೆಯಲ್ಲಿ ಅವರ ಅಲಭ್ಯತೆ ಉಂಟಾಗಿದೆ. ನ. 29 ಮತ್ತು 30 ರಂದು ಡೆವಿಸ್ ಕಪ್ ಟೂರ್ನಿಯ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಭಾರತ ತಂಡ ಎದುರಿಸಲಿದೆ. ಡಬಲ್ಸ್‌ ವಿಭಾಗದಲ್ಲಿ ಲಿಯಾಂಡರ್ ಪೇಸ್ ಜತೆ ರೋಹನ್ ಬೋಪಣ್ಣ ಸೆಣಸಬೇಕಾಗಿತ್ತು. ಆದರೆ, ಅವರು ಗಾಯಕ್ಕೆೆ ಒಳಗಾಗಿರುವ ಹಿನ್ನೆೆಲೆಯಲ್ಲಿ ಎಡಗೈ ಆಟಗಾರ ಜೀವನ್ ಆಡಲಿದ್ದಾರೆ.
‘‘ರೋಹನ್ ಬೋಪಣ್ಣ ಅವರ ಅನುಪಸ್ಥಿತಿ ತಂಡಕ್ಕೆೆ ಭಾರಿ ನಷ್ಟವಾಗಿದೆ. ಆದರೆ, ಅವರ ಭುಜವನ್ನು ರಕ್ಷಿಸುವ ಅಗತ್ಯವಿದೆ. ಅವರಿಗೆ ಚಿಕಿತ್ಸೆೆ ನೀಡಲಾಗುತ್ತಿದೆ. ಬೋಪಣ್ಣ ಸ್ಥಾನಕ್ಕೆೆ ಜೀವನ್ ಲಭ್ಯರಿದ್ದಾರೆ. ಎಡಗೈ ಆಟಗಾರ ಈ ಹಿಂದೆ ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ. ಇದೀಗ ಡಬಲ್ಸ್‌ ನಲ್ಲಿ ಎಡಗೈ ಹಾಗೂ ಬಲಗೈ ಆಟದ ಮಿಶ್ರಮ ಉತ್ತಮವಾಗಿದೆ.’’ ಎಂದು ರಾಜ್‌ಪಾಲ್ ತಿಳಿಸಿದ್ದಾರೆ.
ರೋಹನ್ ಬೋಪಣ್ಣ ಭಾರತದ ಡಬಲ್ಸ್‌ ಅಗ್ರ ಆಟಗಾರ. ಇವರನ್ನು ಬಿಟ್ಟರೆ ಡಿವಿಜ್ ಶರಣ್ ಕೂಡ ಡಬಲ್ಸ್‌ ಅತ್ಯುತ್ತಮ ಆಟಗಾರ. ಆದರೆ, ಅವರು ತಮ್ಮ ವಿವಾಹದ ಹಿನ್ನೆೆಲೆಯಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆೆ ಅಲಭ್ಯರಾಗಿದ್ದಾರೆ.
ಯುಎನ್‌ಐ ಆರ್ ಕೆ 2134
More News

ಆರ್ಥರ್ ಶ್ರೀಲಂಕಾ ತಂಡದ ಕೋಚ್

05 Dec 2019 | 10:02 PM

 Sharesee more..

ಎಸ್ಎ ಜಿ: ಕರ್ನಾಟಕದ ಲಿಖಿತ್ ಗೆ ಬಂಗಾರ

05 Dec 2019 | 9:42 PM

 Sharesee more..

ಸೂಪರ್ ಡಿವಿಜನ್: ಡ್ರೀಮ್ ಯುನೈಟೆಡ್ ಎಫ್ ಸಿಗೆ ಜಯ

05 Dec 2019 | 9:40 PM

 Sharesee more..

ದಿಗ್ಗಜ ಬೌಲರ್ ಬಾಬ್ ವಿಲ್ಲೀಸ್ ನಿಧನ

05 Dec 2019 | 8:05 PM

 Sharesee more..