Friday, Sep 25 2020 | Time 17:00 Hrs(IST)
 • ಧೋನಿ ಬಳಿಕ ರೋಹಿತ್‌ ಶರ್ಮಾ ಐಪಿಎಲ್‌ ಟೂರ್ನಿಯ ಉತ್ತಮ ನಾಯಕ: ವಿರೇಂದ್ರ ಸೆಹ್ವಾಗ್‌
 • ನ ರಿಂದ ಕಾಲೇಜು ತರಗತಿ ಆರಂಭ, ಯುಜಿಸಿ ಹೊಸ ಮಾರ್ಗಸೂಚಿ
 • ಎಸ್ ಪಿ ಬಾಲಸುಬ್ರಮಣ್ಯಂ ಕೊನೆಯ ಆಸೆ ಇದೇ !
 • ಕೃಷಿ ಕಾಯ್ದೆಯ ಮೂಲಕ ರೈತರನ್ನು ಗುಲಾಮರನ್ನಾಗಿಸಲು ಹುನ್ನಾರ : ರಾಹುಲ್
 • ಎಸ್‌ಪಿಬಿ ನಮ್ಮ ಮನಸ್ಸಿನಲ್ಲಿಯೇ ಉಳಿಯಲಿದ್ದಾರೆ; ಅಮಿತ್‌ ಶಾ
 • ರಿಲಯನ್ಸ್ ಡಿಜಿಟಲ್‌ನಲ್ಲಿ ಆಪಲ್ ಐಪ್ಯಾಡ್ ಮತ್ತು ವಾಚ್ ಪ್ರೀ ಬುಕಿಂಗ್‌ ಆರಂಭ
 • ಗಾನಗಾರುಡಿಗ ಎಸ್ ಬಿ ಬಾಲಸುಬ್ರಹ್ಮಣ್ಯಂ ನಿಧನಕ್ಕೆ ಗಣ್ಯರ ಸಂತಾಪ
 • ಆರ್ಥಿಕ ಹೊಣೆಗಾರಿಕೆ ವಿಧೇಯಕದ ಮೇಲೆ ಮಾತನಾಡಲು ಅವಕಾಶ ಕೋರಿ ಜೆಡಿಎಸ್ ಶಾಸಕರಿಂದ ಧರಣಿ
 • ಡಾ ಎಸ್ ಪಿ ಬಾಲಸುಬ್ರಮಣ್ಯಂ ಬದುಕನ್ನೇ ಬದಲಿಸಿದ್ದ ‘ಶಂಕರಾಭರಣಂ’ !
 • ಪ್ರಿಯಾಂಕ ಖರ್ಗೆಗೆ ಕರೋನಾ ಬಗ್ಗೆ ಸಚಿವರ ಕಳವಳ : ವಿಧಾನ ಸಭೆಯಲ್ಲಿ ಪ್ರತಿಧ್ವನಿ
 • ಶಾಸಕ ಬಿ ನಾರಾಯಣರಾವ್ ನಿಧನಕ್ಕೆ ಸಂತಾಪ ಸೂಚಿಸಿದ ವಿಧಾನ ಪರಿಷತ್
 • ರಾಜ್ಯವನ್ನು ಸಾಲದ ಸುಳಿಯಲ್ಲಿ ಸಿಲುಕಿಸಿ ದಿವಾಳಿಯಾಗಿಸಬೇಡಿ; ಸರ್ಕಾರಕ್ಕೆ ಸಿದ್ದರಾಮಯ್ಯ ಸಲಹೆ
 • ಪರಿಷತ್ ನಲ್ಲಿ ಹಾರಾಡಿದ ಪಕ್ಷಿಗಳ ಹೆಸರು ; ಕಡತದಿಂದ ಹೆಸರು ತೆಗೆಸಿ ಸಭಾಪತಿ ರೂಲಿಂಗ್
 • ಬಸವಕಲ್ಯಾಣ ಕ್ಷೇತ್ರದ ಶಾಸಕ ಬಿ ನಾರಾಯಣ ರಾವ್ ಗೆ ಕೆಪಿಸಿಸಿ ಕಚೇರಿಯಲ್ಲಿ ಶ್ರದ್ಧಾಂಜಲಿ ಸಲ್ಲಿಕೆ
 • ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ನಿಧನಕ್ಕೆ ಡಿ ಕೆ ಶಿವಕುಮಾರ್ ಸಂತಾಪ
business economy Share

ಡಿ 16 ರಿಂದ ದಿನದ 24 ಗಂಟೆಯೂ ನೆಫ್ಟ್ ಸೌಲಭ್ಯ

ಮುಂಬೈ, ಡಿ 7 (ಯುಎನ್ಐ) ಡಿಜಿಟಲ್ ವಹಿವಾಟಿಗೆ ಉತ್ತೇಜನ ನೀಡಲು ಡಿಸೆಂಬರ್ 16 ರಿಂದ ದಿನದ 24 ಗಂಟೆಯೂ ರಾಷ್ಟ್ರೀಯ ವಿದ್ಯುನ್ಮಾನ ಹಣ ವರ್ಗಾವಣೆ (ಎನ್ ಇ ಎಫ್ ಟಿ – ನೆಫ್ಟ್) ಸೌಲಭ್ಯವಿರಲಿದೆ ಎಮದು ಭಾರತೀಯ ರಿಸರ್ವ್ ಬ್ಯಾಂಕ್ ಆರ್ ಬಿ ಐ ತಿಳಿಸಿದೆ.

ರಜೆಯ ದಿನಗಳೂ ಸೇರಿದಂತೆ ವರ್ಷವಿಡೀ ದಿನಪೂರ್ತಿ ನೆಫ್ಟ್ ಸೌಲಭ್ಯ ಗ್ರಾಹಕರಿಗೆ ಸಿಗಲಿದೆ ಎಂದು ಆರ್ ಬಿ ಐ ತಿಳಿಸಿದೆ.

ನೆಫ್ಟ್ ಪಾವತಿಗಳನ್ನು ಬ್ಯಾಚ್ ರೂಪದಲ್ಲಿ ಒದಗಿಸಲಾಗುತ್ತಿದ್ದು ವಾರದ ದಿನಗಳಲ್ಲಿ ಬೆಳಗ್ಗೆ 8 ರಿಂದ ಸಂಜೆ 7 ವರೆಗೆ ಬ್ಯಾಚ್ ಗಳಿರಲಿವೆ. ಮೊದಲ ಮತ್ತು ಮೂರನೇ ಶನಿವಾರ ಬ್ಯಾಚ್ ಪಾವತಿಗಳು ಬೆಳಗ್ಗೆ 8 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಇರಲಿದೆ.

ಪ್ರಸ್ತುತ ನೆಫ್ಟ್ ಸೌಲಭ್ಯ ಕೇವಲ ಬ್ಯಾಂಕ್ ವೇಳೆಯಲ್ಲಿ ಮಾತ್ರ ಲಭ್ಯವಿದೆ. ಬ್ಯಾಂಕ್ ರಜಾ ದಿನಗಳಂದು ಮತ್ತು ಬ್ಯಾಂಕ್ ಅವಧಿ ಮುಗಿದ ನಂತರ ಗ್ರಾಹಕರಿಗೆ ನೆಫ್ಟ್ ಸೌಲಭ್ಯ ಲಭ್ಯವಾಗಿರಲಿಲ್ಲ.

ಗ್ರಾಹಕರು ನಿಗದಿತ ಮಿತಿಯ ಮೊತ್ತ ವರ್ಗಾವಣೆಗೆ ಐ ಎಮ್ ಪಿ ಎಸ್ ಸೌಲಭ್ಯ ಮಾತ್ರ ಬಳಸಬಹುದಾಗಿದ್ದು ಇನ್ನು ಕೆಲವೇ ದಿನಗಳಲ್ಲಿ ನೆಫ್ಟ್ ಸೌಲಭ್ಯ ಸಿಗಲಿದೆ.
ಯುಎನ್ಐ ಜಿಎಸ್ಆರ್ 0945