Wednesday, Sep 23 2020 | Time 02:54 Hrs(IST)
Entertainment Share

ತಮಿಳು ಚಿತ್ರೋದ್ಯಮಕ್ಕೆ ಮೊದಲ ಕೊರೋನಾಘಾತ : ನಿರ್ಮಾಪಕ ಸ್ವಾಮಿನಾಥನ್ ನಿಧನ

ಚೆನ್ನೈ, ಆ 10 (ಯುಎನ್‌ಐ) ಜನಪ್ರಿಯ ತಮಿಳು ಚಲನಚಿತ್ರ ನಿರ್ಮಾಪಕ, ಲಕ್ಷ್ಮಿ ಮೂವಿ ಮೇಕರ್ಸ್ ನ ವಿ ಸ್ವಾಮಿನಾಥನ್ ಕೋವಿಡ್ 19 ಸೊಂಕಿಗೆ ಬಲಿಯಾಗಿದ್ದಾರೆ.
ತಮಿಳು ಚಲನಚಿತ್ರೋದ್ಯಮದಲ್ಲಿ ಕೊರೋನಾಗೆ ಬಲಿಯಾದ ಮೊದಲ ವ್ಯಕ್ತಿ ಸ್ವಾಮಿನಾಥನ್ ಆಗಿದ್ದು, ಸೋಮವಾರ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಕೆ ಮುರಳೀಧರನ್ ಅವರೊಂದಿಗೆ ಸ್ವಾಮಿನಾಥನ್ ಮತ್ತು ಜಿ ವೇಣುಗೋಪಾಲ್ ಕಳೆದ 25 ವರ್ಷಗಳಲ್ಲಿ ಹಲವಾರು ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ.
ಅವರ ನಿರ್ಮಾಣದ ಜನಪ್ರಿಯ ಚಿತ್ರಗಳಲ್ಲಿ 'ಉನ್ನೈತೇಡಿ’ ಮತ್ತು 'ಉನ್ನಿದಾತಿಲ್ ಎನ್ನೈ ಸೇರಿವೆ. 'ಪ್ರಿಯಮುದನ್', 'ಮಿಸ್ಟರ್ ಮದ್ರಾಸ್',
'ಉನ್ನರುಗೆ ನಾನಿರುಂಧಲ್', 'ಉಲ್ಲಮ್ ಕೊಲ್ಲೈ ಪೊಗುಥೆ', ಕಮಲ್ ಹಾಸನ್ ಅಭಿನಯದ 'ಅನ್ಬೆ ಶಿವಂ', ಧನುಷ್ ಅವರ 'ಪುದುಪೆಟ್ಟೈ', ಮತ್ತು ಸಿಂಬು ಅವರ 'ವಲ್ಲವನ್' ಮತ್ತು 'ಸಿಲಂಬಟ್ಟಂ' ಮೊದಲಾದ ಚಿತ್ರಗಳು ಅಭಿಮಾನಿಗಳನ್ನು ತಣಿಸಿವೆ.
ಅವರ ಪುತ್ರ ಅಶ್ವಿನ್ ರಾಜ ಅವರು 'ಕುಮ್ಕಿ' ಚಿತ್ರದಲ್ಲಿ ನಟಿಸಿದ್ದಾರೆ.
ಸ್ವಾಮಿನಾಥನ್ ತಮ್ಮದೇ ಚಿತ್ರಗಳಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಯುಎನ್‍ಐ ಎಸ್‍ಎ 1647