Monday, Aug 10 2020 | Time 21:45 Hrs(IST)
 • ಕೆಎಎಸ್ ಪರೀಕ್ಷೆ ಅನುಮಾನಕ್ಕೆ ಕಾರಣ: ಸಿದ್ದರಾಮಯ್ಯ
 • 1 ಲಕ್ಷದ ಗಡಿಯತ್ತ ಕೋವಿಡ್‌ ಚೇತರಿಕೆಯ ಸಂಖ್ಯೆ; 5218 ಮಂದಿ ಗುಣಮುಖ; ಸೋಂಕಿತರ ಸಂಖ್ಯೆ 1 82 ಲಕ್ಷಕ್ಕೇರಿಕೆ
 • 2021ರ ಐಪಿಎಲ್‌ ಟೂರ್ನಿಗೆ ಆಟಗಾರರ ಹರಾಜು ನಡೆಯುವ ಸಾಧ್ಯತೆ ಕಡಿಮೆ
 • ಸಾರಿಗೆ ಕ್ಷೇತ್ರದ ಅನುಕೂಲಕ್ಕಾಗಿ ಸಾಫ್ಟ್‌ವೇರ್‌ ಪರಿಹಾರ
 • ಟ್ರಿಬ್ಯುನಲ್ ಮತ್ತು ಬೆಳೆಗಳಿಗೆ,ಕುಡಿಯುವ ನೀರಿಗೆ ಅಗತ್ಯ ನೀರನ್ನು ಹರಿಸಲಾಗುವುದು:ಸಚಿವ ಜೆ ಸಿ ಮಾಧುಸ್ವಾಮಿ
 • ಕನ್ನಡ ಸಂಘಗಳ ಗುತ್ತಿಗೆ ಅವಧಿ ನವೀಕರಿಸಲು ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲಿ ನಿರ್ಣಯ
 • ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವಕ್ಕೆ ಬಿಡ್ ಆಹ್ವಾನಿಸಿದ ಬಿಸಿಸಿಐ
 • ಪ್ರವಾಸೋದ್ಯಮ ಇಲಾಖೆಯಿಂದ ಹಿರೇಕೊಳಲೆ ಕೆರೆ ಅಭಿವೃದ್ಧಿಗೆ 2 ಕೋಟಿ ಬಿಡುಗಡೆ: ಸಿ ಟಿ ರವಿ
 • ದೇಶದ ಜಿಡಿಪಿಗೆ ಸಣ್ಣ ಕೈಗಾರಿಕಾ ಕೊಡುಗೆ ಪಾಲು ಹೆಚ್ಚಿಸಲು ಮಹತ್ವದ ಗುರಿ : ನಿತಿನ್ ಗಡ್ಕರಿ
 • ಚಿತ್ರದುರ್ಗ ಸರ್ಕಾರಿ ಪದವಿ ಕಾಲೇಜು ಉಳಿಸಿಕೊಳ್ಳಲು ಬೆಂಗಳೂರು ಚಲೋ; ಶಾಸಕ ಟಿ ರಘುಮೂರ್ತಿ ಸೇರಿ ಹಲವರ ಬಂಧನ
 • ಕಲಬುರಗಿಯಲ್ಲಿ ಪ್ಲಾಸ್ಮಾ‌ಥೆರಪಿ ಚಿಕಿತ್ಸಾ ಕೇಂದ್ರ ಸ್ಥಾಪನೆಗೆ ಆಗ್ರಹಿಸಿ ಪ್ರಿಯಾಂಕ್ ಖರ್ಗೆ ಪತ್ರ
 • ಕೊಹ್ಲಿ-ಧೋನಿ ನಾಯಕತ್ವದಲ್ಲಿ ಹೆಚ್ಚು ವ್ಯತ್ಯಾಸವಿಲ್ಲ: ಮಾಜಿ ಆಯ್ಕೆಗಾರ
 • ಆ 15ರಂದು ತುಂಗಭದ್ರಾ ಉದ್ಯಾನವನಗಳು ಬಂದ್
 • ಆಗಸ್ಟ್ 20 ರಂದು ಕೆಪಿಸಿಸಿಯಿಂದ “ಜನಧ್ವನಿ” ಹೆಸರಿನಲ್ಲಿ ಹೋರಾಟ; ನೆರೆ ಅಧ್ಯಯನಕ್ಕೆ ಆರು ತಂಡ ರಚನೆ
 • ಆರ್‌ಸಿಬಿ ಪ್ರಶಸ್ತಿ ಜಯಿಸಲು ಕೊಹ್ಲಿ ಒತ್ತಡ ಮುಕ್ತರಾಗಿ ಆಡಬೇಕು: ಬ್ರೆಟ್‌ ಲೀ
Election Share

ತಮಿಳುನಾಡು; ಆಗಸ್ಟ್ 5ರಂದು ವೆಲ್ಲೂರು ಲೋಕಸಭಾ ಕ್ಷೇತ್ರದ ಚುನಾವಣೆ

ಚೆನ್ನೈ, ಜುಲೈ 4 (ಯುಎನ್ಐ) ಬೃಹತ್ ಮೊತ್ತದ ಅಕ್ರಮ ಹಣ ಪತ್ತೆಯಾದ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆ ರದ್ದಾಗಿದ್ದ ತಮಿಳುನಾಡಿನ ವೆಲ್ಲೂರು ಕ್ಷೇತ್ರಕ್ಕೆ ಆಗಸ್ಟ್ 5ರಂದು ಮತದಾನ ನಡೆಯಲಿದೆ ಎಂದು ಚುನಾವಣಾ ಆಯೋಗ ಗುರುವಾರ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದೆ. ಜುಲೈ 11ರಂದು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಳ್ಳಲಿದ್ದು, ಜುಲೈ 18 ಕೊನೆಯ ದಿನವಾಗಿರಲಿದೆ. ನಾಮಪತ್ರ ಸಲ್ಲಿಕೆಯೇ ಮರುದಿನವೇ ಅದರ ಪರಿಶೀಲನೆ ನಡೆಯಲಿದ್ದು, ಜುಲೈ 22ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿರಲಿದೆ.
ಆಗಸ್ಟ್ 5ರಂದು ಮತದಾನ ನಡೆಯಲಿದ್ದು, ಆಗಸ್ಟ್ 9ರಂದು ಮತಎಣಿಕೆ ಪ್ರಕ್ರಿಯೆ ನಡೆಯಲಿದೆ.
ಕ್ಷೇತ್ರದ ಎಲ್ಲಾ ಮತಗಟ್ಟೆಗಳಲ್ಲಿ ಇವಿಎಂ ಹಾಗೂ ವಿವಿಪ್ಯಾಟ್ ಗಳನ್ನು ಬಳಸಲು ನಿರ್ಧರಿಸಲಾಗಿದ್ದು, ಚುನಾವಣೆ ಶಾಂತಿಯುತವಾಗಿ ನಡೆಯಲು ಎಲ್ಲಾ ಕ್ರಮ ಕೈಗೊಳ್ಳಲಾಗಿದೆ ಎಂದು ಆಯೋಗದ ಪ್ರಕಟಣೆ ತಿಳಿಸಿದೆ.
ಮತದಾನಕ್ಕೆ ಮತದಾರರ ಗುರುತಿನ ಚೀಟಿ ಕಡ್ಡಾಗೊಳಿಸಲಾಗಿದೆ. ಫೋಟೋ ಎಪಿಕ್ ಕಾರ್ಡ್ ಮುಖ್ಯ ಗುರುತಿನ ಚೀಟಿಯಾಗಿರಲಿದೆ. ಆದರೆ, ಯಾವುದೇ ಮತದಾರರು ಮತದಾನದಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ, ಮತದಾರರ ಪಟ್ಟಿಯಲ್ಲಿ ಹೆಸರಿರುವ ಜನರು ತಮ್ಮ ಯಾವುದೇ ಸರ್ಕಾರಿ ಗುರುತಿನ ಚೀಟಿ ತೋರಿಸಿ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ.
ವೆಲ್ಲೂರು ಕ್ಷೇತ್ರದಲ್ಲಿ ವಿಪಕ್ಷ ಡಿಎಂಕೆ ಅಭ್ಯರ್ಥಿ ಕಾಥಿರ್ ಆನಂದ್ ಅವರಿಗೆ ಸೇರಿದ ಬೃಹತ್ ಪ್ರಮಾಣದ ಅಕ್ರಮ ಹಣ ಜಪ್ತಿಯಾದ ಹಿನ್ನೆಲೆಯಲ್ಲಿ, ಚುನಾವಣಾ ಆಯೋಗ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅನುಮತಿ ಪಡೆದು ಏಪ್ರಿಲ್ 16ರಂದು ಚುನಾವಣೆ ರದ್ದುಗೊಳಿಸಿತ್ತು.
ಆದಾಯ ತೆರಗೆ ಇಲಾಖೆಗಳು ನಡೆಸಿದ ದಾಳಿಯಲ್ಲಿ ಕಾಥಿರ್ ಆನಂದ್ ಮನೆ, ಕಾಲೇಜು ಹಾಗೂ ದಾಸ್ತಾನಿನಲ್ಲಿ ಮತದಾರರಿಗೆ ಹಂಚಲು ಇರಿಸಿದ್ದ 10 ಲಕ್ಷ ರೂ. ಪತ್ತೆಯಾಗಿತ್ತು. ನಾಲ್ಕು ದಿನಗಳ ದಾಳಿಯಲ್ಲಿ ಅಧಿಕಾರಿಗಳು ಒಟ್ಟು 11 ಕೋಟಿ ರೂ. ಪತ್ತೆ ಮಾಡಿದ್ದರು. ಆನಂದ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಆದರೆ, ಚುನಾವಣೆ ರದ್ದುಗೊಳಿಸಿದ ಆಯೋಗದ ಕ್ರಮಕ್ಕೆ ಆಡಳಿತಾರೂಢ ಎಐಎಡಿಎಂಕೆ ಹಾಗೂ ಡಿಎಂಕೆ ವಿರೋಧ ವ್ಯಕ್ತಪಡಿಸಿದ್ದರು. ಡಿಎಂಕೆ ನಾಯಕ ದುರೈಮುರುಗನ್ ಅವರು ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದಿದ್ದರೆ, ಎಐಎಡಿಎಂಕೆ ನಾಯಕರು, ಅಭ್ಯರ್ಥಿಯನ್ನು ಅನರ್ಹಗೊಳಿಸಿ, ಮತದಾನ ಪ್ರಕ್ರಿಯೆ ಮುಂದುವರಿಸಬೇಕಿತ್ತು ಎಂದು ಅಬಿಪ್ರಾಯ ವ್ಯಕ್ತಪಡಿಸಿತ್ತು.
ತಮಿಳುನಾಡಿನ 38 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 18ರಂದು ಒಂದೇ ಹಂತದಲ್ಲಿ ಚುನಾವಣೆ ನಡೆದಿತ್ತು. 22 ವಿಧಾನಸಭಾ ಕ್ಷೇತ್ರಗಳಿಗೆ ಎರಡು ಹಂತಗಳಲ್ಲಿ ಚುನಾವಣೆ ನಡೆದಿತ್ತು.
ಯುಎನ್ಐ ಎಸ್ಎಚ್ ಎಸ್ಎ 1403
There is no row at position 0.