Sunday, Mar 29 2020 | Time 00:50 Hrs(IST)
National Share

ತಮಿಳುನಾಡು-ಕೇರಳ ಗಡಿಯ ಚೆಕ್‍ಪೋಸ್ಟ್ ನಲ್ಲಿ ಅಪರಿಚಿತರಿಂದ ಸಬ್ ಇನ್ಸ್‍ಪೆಕ್ಟರ್ ಗೆ ಗುಂಡಿಕ್ಕಿ ಹತ್ಯೆ

ಕನ್ಯಾಕುಮಾರಿ, ಜ9(ಯುಎನ್‍ಐ)- ಬೆಚ್ಚಿಬೀಳಿಸುವ ಘಟನೆಯೊಂದರಲ್ಲಿ ತಮಿಳುನಾಡು-ಕೇರಳ ಗಡಿಯ ಕಲಿಯಕ್ಕವಿಲೈ ಸಮೀಪದ ಚೆಕ್‍ಪೋಸ್ಟ್ ನಲ್ಲಿ ಬುಧವಾರ ಅಪರಿಚಿತರ ಗ್ಯಾಂಗ್‍ವೊಂದು ವಿಶೇಷ ಸಬ್ ಇನ್ಸ್‍ಪೆಕ್ಟರ್‍ವೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿದೆ.
ಕಲಿಯಕ್ಕವಿಲೈ ಪೊಲೀಸ್ ಠಾಣೆ ವ್ಯಾಪ್ತಿಯ ವಿಶೇಷ ಸಬ್ ಇನ್ಸ್ ಪೆಕ್ಟರ್ ವಿಲ್ಸನ್ (57) ಹಾಗೂ ಇತರ ಪೊಲೀಸರು ಎಂದಿನಂತೆ ಪಡಂತಲುಮೂಡು ಚೆಕ್‍ಪೋಸ್ಟ್ ನಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದಾಗ, ತಿರುವನಂತಪುರಂ ಕಡೆಯಿಂದ ಬಂದ ಟಿಎನ್ 57 ಎಡಬ್ಲ್ಯೂ -1559 ಸಂಖ್ಯೆಯ ಮಹೀಂದ್ರಾ ಸ್ಕಾರ್ಪಿಯೋ ವಾಹನವನ್ನು ತಡೆದಿದ್ದಾರೆ.
ಈ ವೇಳೆ ಸ್ಕಾರ್ಪಿಯೋ ನಿಂದ ಕೆಳಗಿಳಿದ ವ್ಯಕ್ತಿ ಪೊಲೀಸ್ ಅಧಿಕಾರಿ ಮೇಲೆ ಮೂರು ಸುತ್ತು ಗುಂಡು ಹಾರಿಸಿದ್ದಾನೆ. ತಕ್ಷಣವೇ ಅಪರಿಚಿತರು ವಾಹನದಲ್ಲಿ ಕೇರಳದ ಕಡೆ ಪರಾರಿಯಾಗಿದ್ದಾರೆ ಎಂದು ತಿರುನಲ್ವೇಲಿ ವಲಯ ಉಪ ಐಜಿಪಿ ಪ್ರವೀಣ್ ಕುಮಾರ್ ಅಬಿನಪು ತಿಳಿಸಿದ್ದಾರೆ.
ಹೊಟ್ಟೆ ಮತ್ತು ಎದೆಗೆ ಗುಂಡು ತಗುಲಿದ್ದ ವಿಲ್ಸನ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.
ದುಷ್ಕರ್ಮಿಗಳ ಪತ್ತೆಗಾಗಿ ಮೂರು ತಂಡಗಳನ್ನು ರಚಿಸಲಾಗಿದೆ. ಪೊಲೀಸರು ಹತ್ತಿರದ ಸ್ಥಳವೊಂದರಿಂದ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿದ್ದಾರೆ.
ವಿಲ್ಸನ್ ಅವರು ಐದು ತಿಂಗಳಲ್ಲಿ ನಿವೃತ್ತಿಯಾಗುತ್ತಿದ್ದರು. ಅವರು ಪತ್ನಿ, ಮಗಳು ಮತ್ತು ಮಗನನ್ನು ಅಗಲಿದ್ದಾರೆ.
ಯುಎನ್‍ಐ ಎಸ್‍ಎಲ್ ಎಸ್ 1148
More News
ಕಾರ್ಮಿಕರ ಘನತೆಯನ್ನು ಕಾಪಾಡಿ; ಕೇಂದ್ರಕ್ಕೆ ರಾಹುಲ್ ಮನವಿ

ಕಾರ್ಮಿಕರ ಘನತೆಯನ್ನು ಕಾಪಾಡಿ; ಕೇಂದ್ರಕ್ಕೆ ರಾಹುಲ್ ಮನವಿ

28 Mar 2020 | 7:17 PM

ನವದೆಹಲಿ, ಮಾ 28 (ಯುಎನ್ಐ) ಕೊರೋನಾ ವೈರಸ್ ತಡೆಯಲು ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಣೆಯಿಂದ ಬೃಹತ್ ಸಂಖ್ಯೆ ಕಾರ್ಮಿಕರುತ ತಮ್ಮ ತವರೂರಿಗೆ ತೆರಳಲಾಗದೆ ಪರದಾಡುವಂತಾಗಿದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

 Sharesee more..
ಕೋವಿಡ್-19 ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ  ನೆರವು ನೀಡಿದ ಟಾಟಾ

ಕೋವಿಡ್-19 ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ ನೆರವು ನೀಡಿದ ಟಾಟಾ

28 Mar 2020 | 7:10 PM

ನವದೆಹಲಿ, ಮಾ 28 (ಯುಎನ್ಐ) ದೇಶದ ಮುಂಚೂಣಿಯ ಉದ್ಯಮ ಸಂಸ್ಥೆ ಟಾಟಾ ಟ್ರಸ್ಟ್, ದೇಶದ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ.ನೆರವು ನೀಡುವುದಾಗಿ ಘೋಷಿಸಿದೆ.

 Sharesee more..