Sunday, Mar 29 2020 | Time 00:01 Hrs(IST)
Sports Share

ತಂಡದ ಲಯ ಮುಂದುವರೆಸುವ ಅವಶ್ಯಕತೆ ಇದೆ: ತಾನಿಯಾ

ಮೆಲ್ಬೋರ್ನ್, ಫೆ.27 (ಯುಎನ್ಐ)- ತಂಡದ ಲಯವನ್ನು ಸ್ಥಿರವಾಗಿ ಕಾಯ್ದುಕೊಂಡು ಫೈನಲ್ ತಲುಪಬೇಕಿದೆ ಎಂದು ಟೀಮ್ ಇಂಡಿಯಾದ ವಿಕೇಟ್ ಕೀಪರ್ ಬ್ಯಾಟ್ಸ್ ಮನ್ ತಾನಿಯಾ ಭಾಟಿಯಾ ತಿಳಿಸಿದ್ದಾರೆ.

“ಮೇಲ್ಪಂಕ್ತಿಯ ಆಟಗಾರರು ಲಯಕ್ಕೆ ಮರಳಿದ್ದು ತಂಡಕ್ಕೆ ಬಲ ನೀಡಿದೆ. ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದೇವೆ. ತ್ರಿಕೋನ ಸರಣಿ ಆಡಿದ ಅನುಭವ ತಂಡಕ್ಕೆ ನೆರವಾಗಿದ್ದು, ಒತ್ತಡವನ್ನು ಮೆಟ್ಟಿ ನಿಲ್ಲುವುದನ್ನು ಕಲಿತಿದ್ದೇವೆ” ಎಂದಿದ್ದಾರೆ.

ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಟೀಮ್ ಇಂಡಿಯಾ “ಎ” ಗುಂಪಿನ ಪಂದ್ಯದಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿ, ಸೆಮಿಫೈನಲ್ಸ್ ಪ್ರವೇಶಿಸಿದೆ. ಆಸ್ಟ್ರೇಲಿಯಾ, ಬಾಂಗ್ಲಾದೇಶ, ನ್ಯೂಜಿಲೆಂಡ್ ತಂಡವನ್ನು ಸೋಲಿಸಿದ ಹರ್ಮನ್ ಪ್ರೀತ್ ಪಡೆ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

“ಶಫಾಲಿ ಲಯಕ್ಕೆ ಮರಳಿದ್ದು ತಂಡಕ್ಕೆ ಬೂಸ್ಟ್ ನೀಡಿದೆ. ಉಳಿದ ಆಟಗಾರರು ಸಹ ತಂಡದ ನೆರವಿಗೆ ಬರಬೇಕಿದೆ. ತಂಡ ಸದ್ಯ ನೀಡುತ್ತಿರುವ ಪ್ರದರ್ಶನವನ್ನು ಹೀಗೆ ಮುಂದುವರಿಸುವ ಅವಶ್ಯಕತೆ ಇದೆ” ಎಂದು ತಾನಿಯಾ ತಿಳಿಸಿದ್ದಾರೆ.

“ತಂಡ ಬಯಸಿದಲ್ಲಿ ಯಾವುದೇ ಕ್ರಮಾಂಕದಲ್ಲಾದರೂ ಆಡಲು ಸಿದ್ಧ. ಮೇಲ್ಪಂಕ್ತಿಯ ಕ್ರಮಾಂಕದಲ್ಲಿ ಆಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾಗಿ” ತಾನಿಯಾ ಹೇಳಿದ್ದಾರೆ.

ಯುಎನ್ಐ ವಿಎನ್ಎಲ್ 1925
More News

ಮಾಧ್ಯಮದ ಮೇಲೆ ಧೋನಿ ಪತ್ನಿ ಆಕ್ರೋಶ

28 Mar 2020 | 9:55 PM

 Sharesee more..

ತುರ್ತು ಯೋಜನೆಯ ಕೆಲಸ: ಐಸಿಸಿ

28 Mar 2020 | 9:45 PM

 Sharesee more..
ಸಂಸದ ನಿಧಿಯಿಂದ ಒಂದು ಕೋಟಿ ರೂಪಾಯಿ ನೀಡಿದ ರಿಜಿಜು

ಸಂಸದ ನಿಧಿಯಿಂದ ಒಂದು ಕೋಟಿ ರೂಪಾಯಿ ನೀಡಿದ ರಿಜಿಜು

28 Mar 2020 | 9:32 PM

ನವದೆಹಲಿ, ಮಾ.28 (ಯುಎನ್ಐ)- ಕೇಂದ್ರ ಕ್ರೀಡಾ ಸಚಿವ ಕಿರೆನ್ ರಿಜಿಜು ಅವರು ಕೊರೊನಾ ವೈರಸ್ ಪೀಡಿತರಿಗೆ ಸಹಾಯ ಮಾಡಲು ತಮ್ಮ ಎಂಪಿ ನಿಧಿಯಿಂದ 1 ಕೋಟಿ ರೂ.ಗಳ ಅನುದಾನವನ್ನು ಶನಿವಾರ ಪ್ರಕಟಿಸಿದ್ದಾರೆ.

 Sharesee more..