Monday, Sep 16 2019 | Time 06:37 Hrs(IST)
Entertainment Share

ತೆರೆಗೆ ಬರುತ್ತಾ 'ತೇರೆ ನಾಮ್' ಚಿತ್ರದ ಅವತರಣಿಕೆ!

ಮುಂಬಯಿ, ಜುಲೈ 10 (ಯುಎನ್ಐ) ಬಾಲಿವುಡ್ ನಿರ್ದೇಶಕ ಸತೀಶ್ ಕೌಶಿಕ್ ತಮ್ಮ ನಿರ್ದೇಶನದ ಸೂಪರ್ ಹಿಟ್ 'ತೇರೆ ನಾಮ್' ಚಿತ್ರದ ಅವತರಣಿಕೆಯೊಂದನ್ನು ತೆರೆಗೆ ತರುವ ತವಕದಲ್ಲಿದ್ದಾರೆ.
2003ರಲ್ಲಿ ನಟ ಸಲ್ಮಾನ್ ಖಾನ್ ಮುಖ್ಯಭೂಮಿಕೆಯಲ್ಲಿ 'ತೇರೆ ನಾಮ್' ಚಿತ್ರ ಹೊರತಂದಿದ್ದರು. ಈ ಚಿತ್ರದಲ್ಲಿ ಸಲ್ಮಾನ್ ರ ವಿಭಿನ್ನ ಹೇರ್ ಸ್ಟೈಲ್ ಅನ್ನು ಪ್ರೇಕ್ಷಕರ ವರ್ಗ ಮೆಚ್ಚಿ ಕೊಂಡಿದ್ದು, ಅಭಿಮಾನಿಗಳು ಅವರಂತೆಯೇ ಹೇರ್ ಸ್ಟೈಲ್ ಕೂಡ ಮಾಡಿಕೊಂಡು ಅಭಿಮಾನ ವ್ಯಕ್ತಪಡಿಸಿದ್ದರು.
ಚಿತ್ರದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್, ಪ್ರೇಕ್ಷಕರು ಈ ಚಿತ್ರಕ್ಕಾಗಿ ಕಾಯುತ್ತಿದ್ದಾರೆ ಎಂಬುದು ನನಗೆ ಗೊತ್ತು. ಚಿತ್ರ ತೆರೆಗೆ ತರಬೇಕೆಂದು ನಾನು ಯೋಚಿಸಿದ್ದೇನೆ. ಆದರೆ, ಈ ಕುರಿತು ಇದುವರೆಗೂ ಸಲ್ಮಾನ್ ಅವರೊಂದಿಗೆ ಚರ್ಚಿಸಿಲ್ಲ. 'ತೇರೆ ನಾಮ್' ಚಿತ್ರ ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿದೆ ಎಂದರು.
'ತೇರೆ ನಾಮ್' ಚಿತ್ರದ ಸಂದರ್ಭದಲ್ಲಿ ಸಲ್ಮಾನ್ ನನಗೆ ತುಂಬಾ ಸಹಕಾರ ನೀಡಿದ್ದರು. ಆ ಚಿತ್ರದ ನಂತರ ಸಲ್ಮಾನ್ ಜೊತೆಗೆ ಬೇರಾವ ಚಿತ್ರ ಮಾಡಲಿಲ್ಲ ಎಂದು ಹೇಳಿದ್ದಾರೆ.
ಸತೀಶ್ ಸದ್ಯ 'ಕಾಗಜ್' ಚಿತ್ರ ನಿರ್ದೇಶಿಸುತ್ತಿದ್ದಾರೆ. ಪಂಕಜ್ ತ್ರಿಪಾಠಿ ಚಿತ್ರದ ಮುಖ್ಯಪಾತ್ರದಲ್ಲಿದ್ದಾರೆ.
ಯುಎನ್ಐ ಪಿಕೆ ಎಸ್ಎಚ್ 1625
More News

ಯೂಟ್ಯೂಬ್ ಚಾನೆಲ್ ಗೆ ದಿಶಾ ಪಟಾನಿ ಚಾಲನೆ

14 Sep 2019 | 6:42 PM

 Sharesee more..
ಮೇಕಪ್ ಇಲ್ಲದ ಸಮಂತಾ ಫೋಟೋಗೆ ಅಭಿಮಾನಿಗಳು ಫಿದಾ

ಮೇಕಪ್ ಇಲ್ಲದ ಸಮಂತಾ ಫೋಟೋಗೆ ಅಭಿಮಾನಿಗಳು ಫಿದಾ

14 Sep 2019 | 5:11 PM

ಬೆಂಗಳೂರು, ಸೆ 14 (ಯುಎನ್ಐ) ಕೆಲವು ತಿಂಗಳುಗಳ ಹಿಂದಷ್ಟೇ ಬಹುಭಾಷಾ ನಟಿ ಕಾಜಲ್ ಅಗರ್ ವಾಲ್ ತಮ್ಮ ಮೇಕಪ್ ಇಲ್ಲದ ಫೋಟೋ ಒಂದನ್ನು ಶೇರ್ ಮಾಡಿ, ಅಭಿಮಾನಿಗಳ ಮನಗೆದ್ದಿದ್ದರು.

 Sharesee more..