Monday, Jun 1 2020 | Time 00:55 Hrs(IST)
Special Share

ತಿರುಪತಿ ಲಡ್ಡುಗಳು ಅರ್ಧಬೆಲೆಯಲ್ಲಿ ಟಿಟಿಡಿ ಕಲ್ಯಾಣ ಮಂಟಪಗಳಲ್ಲಿ ಲಭ್ಯ: ಟಿಟಿಡಿ

ತಿರುಮಲ, ಮೇ 22 (ಯುಎನ್‍ಐ) ಸರ್ಕಾರದಿಂದ ಲಾಕ್ ಡೌನ್ ನಿರ್ಬಂಧ ಸಡಿಲಿಕೆ ಹಿನ್ನೆಲೆಯಲ್ಲಿ, ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಟ್ರಸ್ಟ್ ಬೋರ್ಡ್ ಶ್ರೀವಾರಿ ಲಡ್ಡುಗಳನ್ನು ಆಂಧ್ರಪ್ರದೇಶದ ಜಿಲ್ಲೆಗಳ ಕೇಂದ್ರ ಕಚೇರಿಯಲ್ಲಿರುವ ತನ್ನ ಕಲ್ಯಾಣ ಮಂಟಪಗಳಲ್ಲಿ ಮಾರಾಟ ಮಾಡಲು ನಿರ್ಧರಿಸಿದೆ.
ಟಿಟಿಡಿ ತನ್ನ ಪವಿತ್ರ ಲಡ್ಡು ಪ್ರಸಾದದ ಮಾರಾಟವನ್ನು ಮೇ 25 ರಿಂದ ಆಂಧ್ರಪ್ರದೇಶದ 13 ಜಿಲ್ಲೆಗಳ ಪ್ರಧಾನ ಕಚೇರಿಯಲ್ಲಿ ಪ್ರಾರಂಭಿಸಲು ಸಜ್ಜಾಗಿದೆ.
ಪ್ರಸ್ತುತ 50 ರೂ.ಗಳ ಬೆಲೆಯ 175 ಗ್ರಾಂ ತೂಕದ ಶ್ರೀವಾರಿ ಲಡ್ಡು ಲಾಕ್‌ಡೌನ್ ಅವಧಿಯಲ್ಲಿ ಐವತ್ತು ಪ್ರತಿಶತ ರಿಯಾಯಿತಿಗೆ ತಲಾ 25 ರೂ.ಗೆ ಮಾರಾಟವಾಗಲಿದೆ.


ಒಂದು ಸಾವಿರಕ್ಕಿಂತ ಹೆಚ್ಚಿನ ಲಾಡುಗಳ ಅವಶ್ಯಕತೆಯ ಸಂದರ್ಭದಲ್ಲಿ, ಭಕ್ತರು ತಮ್ಮ ಹೆಸರು ಮತ್ತು ಮೊಬೈಲ್ ಸಂಖ್ಯಯೊಂದಿಗೆ ಖರೀದಿಯ ಅವಶ್ಯಕತೆಯ ವಿವಿರ ಸಲ್ಲಿಸಬೇಕು.
ಹೆಚ್ಚು ಲಡ್ಡುಗಳನ್ನು ಖರೀದಿಸಲು ಸಿದ್ಧರಿರುವ ಭಕ್ತರು ತಮ್ಮ ಮೇಲ್ಗೆ ಸಂಗ್ರಹಣೆಯ ವಿಧಾನಗಳ ವಿವರಗಳನ್ನು ಪಡೆಯುತ್ತಾರೆ.
ತಿರುಪತಿಯಲ್ಲಿರುವ ಲಡ್ಡು ಕೌಂಟರ್‌ಗಳಿಂದ ಅಥವಾ ಎಲ್ಲಾ ಜಿಲ್ಲಾ ಹೆಚ್ಕ್ಯುಗಳಲ್ಲಿರುವ ಆಯಾ ಕಲ್ಯಾಣ ಮಂಟಪಗಳಿಂದ ಲಭ್ಯತೆಯ ಆಧಾರದ ಮೇಲೆ ಅವರು ಲಡ್ಡುಗಳನ್ನು ಸಂಗ್ರಹಿಸಬೇಕಾಗುತ್ತದೆ.
ಲಡ್ಡುಗಳನ್ನು ಕೊಳ್ಳುವಾಗ ಭಕ್ತರು ಕೋವಿಡ್ -19 ಸಾಂಕ್ರಾಮಿಕ ರೋಗ ನಿಯಂತ್ರಣದ ದೃಷ್ಟಿಯಿಂದ ಮುಖಗವಸುಗಳನ್ನು ಧರಿಸಲು ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಸೂಚಿಸಲಾಗಿದೆ.
ಲಡ್ಡುಗಳ ಸಾಗಣೆಗೆ ಆಯಾ ರಾಜ್ಯ ಸರ್ಕಾರಗಳಿಂದ ಅನುಮೋದನೆ ಪಡೆದ ನಂತರ ಚೆನ್ನೈ, ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿರುವ ಟಿಟಿಡಿ ಮಾಹಿತಿ ಕೇಂದ್ರಗಳಲ್ಲಿ ಶ್ರೀವಾರಿ ಲಡ್ಡು ಪ್ರಸಾದಂ ಪೂರೈಕೆಯನ್ನು ಪುನರಾರಂಭಿಸಲು ಟಿಟಿಡಿ ಯೋಜಿಸಿದೆ.
ಯುಎನ್‍ಐ ಎಸ್‍ಎ ವಿಎನ್ 1806