Friday, Feb 28 2020 | Time 09:51 Hrs(IST)
  • ಹತ್ತನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ; ಶಿಕ್ಷಕ ಪೊಲೀಸರ ವಶಕ್ಕೆ
  • ಖ್ಯಾತ ಇತಿಹಾಸಕಾರ ಷ ಷೆಟ್ಟರ್ ನಿಧನ
  • ದೀರ್ಘಾವಧಿ ಬಳಿಕ ರಾಷ್ಟ್ರೀಯ ಫುಟ್ಬಾಲ್ ಶಿಬಿರಕ್ಕೆ ಮರಳಿದ ಸಂದೇಶ್‌, ಜೆಜೆ
  • ದಕ್ಷಿಣ ಕೊರಿಯಾದಲ್ಲಿ ಮತ್ತೆ 256 ಕೊರೊನಾ ಸೋಂಕು ಪ್ರಕರಣ ದಾಖಲು
  • ಕೊರೊನಾ ಸೋಂಕು : ಹಜ್ ಯಾತ್ರೆಗೆ ನಿರ್ಬಂಧ
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
National Share

ತೈಲಬೆಲೆ ಹೆಚ್ಚಳ: ಗ್ರಾಹಕರಿಗೆ ತಟ್ಟಲಿರುವ ನೇರ ಬಿಸಿ..

ನವದೆಹಲಿ, ಜ 4 (ಯುಎನ್ಐ) ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಜಾಗತಿಕ ಮಟ್ಟದಲ್ಲಿ ತೈಲಬೆಲೆ ಶೇಕಡ 4ರಷ್ಟು ಹೆಚ್ಚಾಗಿದ್ದು, ಬಡವರು, ಮಧ್ಯಮ ವರ್ಗದವರ ಮೇಲೆ ಇದರ ನೇರ ಪರಿಣಾಮ ಬೀರಲಿದೆ.
ತೈಲ ಮಾರುಕಟ್ಟೆಯಲ್ಲಿ ಚಂಚಲತೆ ಹೆಚ್ಚಿ ಗ್ರಾಹಕರಿಗೆ ಇದರ ನೇರ ಬಿಸಿ ತಟ್ಟುವ ಸಾಧ್ಯತೆಗಳು ನಿಚ್ಚಳವಾಗಿವೆ. ಆರ್ಥಿಕ ಪ್ರಗತಿಗೆ ಪುನಶ್ಚೇತನ ನೀಡುವ ಸರ್ಕಾರದ ಪ್ರಯತ್ನಕ್ಕೂ ಇದು ಹೊಡೆತ ನೀಡಲಿದೆ ಎಂದು ತಜ್ಞರು , ಆರ್ಥಿಕ ಪರಿಣಿತರು ಅಭಿಪ್ರಾಯ ಪಡುತ್ತಿದ್ದಾರೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶುಕ್ರವಾರ ತೈಲ ಬೆಲೆ ಶೇಕಡ 4ರಷ್ಟು ಹೆಚ್ಚಿ ಬ್ಯಾರಲ್ಗೆ 70 ಡಾಲರ್ ತಲುಪಿತ್ತು. ಇರಾನ್ ಮಿಲಿಟರಿ ಕಮಾಂಡರ್ ಒಬ್ಬರನ್ನು ಅಮೆರಿಕ ಹತ್ಯೆ ಮಾಡಿರುವುದಕ್ಕೆ ಪ್ರತೀಕಾರವಾಗಿ ಪ್ರಮುಖ ಜಾಗತಿಕ ತೈಲ ವ್ಯಾಪಾರ ಮಾರ್ಗವಾದ ಹರ್ಮಸ್ ಕೊಲ್ಲಿಯನ್ನು ಇರಾನ್ ಮುಚ್ಚುವ ಸಾಧ್ಯಯಿದ್ದು, ಪರಿಣಾಮ ತೈಲಬೆಲೆ ಇನ್ನಷ್ಟು ಹೆಚ್ಚಾಗುವ ಆತಂಕ ಮನೆ ಮಾಡಿದೆ.
ವಿಶ್ವದ ಮೂರನೇ ಅತಿಹೆಚ್ಚು ತೈಲ ಖರೀದಿಸುವ ರಾಷ್ಟ್ರವಾದ ಭಾರತಕ್ಕೆ ಮದ್ಯಪ್ರಾಚ್ಯ ಉದ್ವಿಗ್ನತೆ ಎರಡು ಬಗೆಯಲ್ಲಿ ನೇರ ಪರಿಣಾಮ ಬೀರಲಿದೆ. ಒಂದು; ಬೆಲೆ ಹೆಚ್ಚಳ ಮತ್ತು ದೇಶದ ಆರ್ಥಿಕತೆ ಹಾಗೂ ಗ್ರಾಹಕರ ಭಾವನೆಗಳ ಮೇಲೆ ಅದರ ಪರಿಣಾಮ. ಇನ್ನೊಂದು; ತೈಲ ಪೂರೈಕೆಯಲ್ಲಿ ವ್ಯತ್ಯಯ. ಇದರಿಂದಾಗಿ ಭಾರತ ಪರ್ಯಾಯ ಮೂಲಗಳಿಂದ ತೈಲ ಪಡೆಯಲು ಹೆಚ್ಚು ವೆಚ್ಚ ಮಾಡುವ ಅನಿವಾರ್ಯತೆ ಉಂಟಾಗಲಿದೆ .
ಕಚ್ಚಾ ತೈಲ ದುಬಾರಿಯಾಗುವುದರಿಂದ ಸಹಜವಾಗಿಯೇ ಇಂಧನ ಬೆಲೆ ಹೆಚ್ಚಲಿದೆ. ಕುಟುಂಬಗಳು ಪೆಟ್ರೋಲ್, ಡೀಸೆಲ್ ಮೇಲಿನ ಹೆಚ್ಚಿನ ಭರಿಸುವುದು ಅನಿವಾರ್ಯವಾಗಿ ಬಡವರು, ಮಧ್ಯಮವರ್ಗದದವರ ಮೇಲೂ ಇದು ನೇರ ಬಹಳ ಪರಿಣಾಮ ಬೀರಲಿದೆ.
ಯುಎನ್ಐ ಕೆಎಸ್ಆರ್ 1028