Monday, Jul 22 2019 | Time 07:05 Hrs(IST)
  • ಶಾಸಕರು ರಾಜಕೀಯ ವ್ಯಭಿಚಾರ ಮಾಡಿದ್ದಾರೆ : ದಿನೇಶ್ ಗುಂಡೂರಾವ್ ಗಂಭೀರ ಆರೋಪ
Special Share

ತೆಲಂಗಾಣ, ಆಂಧ್ರಪ್ರದೇಶದಲ್ಲಿ ಭಾರಿ ಮಳೆ ಸಾಧ್ಯತೆ

ಹೈದರಾಬಾದ್, ಜುಲೈ 12 (ಯುಎನ್ಐ) ಮುಂದಿನ ಐದು ದಿನಗಳಲ್ಲಿ ತೆಲಂಗಾಣ, ಆಂಧ್ರಪ್ರದೇಶದ ಕರಾವಳಿ ಹಾಗೂ ಯಾನಮ್ ಮತ್ತು ರಾಯಲ್ ಸೀಮೆಯಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಶುಕ್ರವಾರ ತಿಳಿಸಿದೆ.
ತೆಲಂಗಾಣ, ಕರಾವಳಿ ಆಂಧ್ರಪ್ರದೇಶ ಹಾಗೂ ರಾಯಲಸೀಮೆಯಲ್ಲಿ ನೈರುತ್ಯ ಮುಂಗಾರು ಸಹಜ ಸ್ಥಿತಿಯಲ್ಲಿದೆ. ಇದರಿಂದ ತೆಲಂಗಾಣದ ಕಮರೆಡ್ಡಿ ಹಾಗೂ ನಿಜಾಮಾಬಾದ್ ಆಂಧ್ರಪ್ರದೇಶದ ಕರಾವಳಿಯ ಗೋದಾವರಿ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.
ತೆಲಂಗಾಣದ ನಾಲಗೊಂಡದಲ್ಲಿ ಗರಿಷ್ಠ 39 ಡಿಗ್ರಿ ಸೆಲ್ಸಿಯಸ್ ಹಾಗೂ ಮೇಡಕ್ ನಲ್ಲಿ ಕನಿಷ್ಠ 20.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಯುಎನ್ಐ ಎಸ್ಎಚ್ ಎಎಚ್ 1517