Tuesday, Nov 12 2019 | Time 03:28 Hrs(IST)
Sports Share

ತೀವ್ರ ಕುತೂಹಲ ಕೆರಳಿಸಿರುವ ಎಂ.ಎಸ್ ಧೋನಿ ಮುಂದಿನ ನಡೆ..!

ತೀವ್ರ ಕುತೂಹಲ ಕೆರಳಿಸಿರುವ ಎಂ.ಎಸ್ ಧೋನಿ ಮುಂದಿನ ನಡೆ..!
ತೀವ್ರ ಕುತೂಹಲ ಕೆರಳಿಸಿರುವ ಎಂ.ಎಸ್ ಧೋನಿ ಮುಂದಿನ ನಡೆ..!

ಮುಂಬೈ, ಜು 12 (ಯುಎನ್‌ಐ) ಐಸಿಸಿ ವಿಶ್ವಕಪ್‌ ಸೆಮಿಫೈನಲ್‌ ಪಂದ್ಯದಲ್ಲಿ ಸೋಲು ಅನುಭವಿಸಿದ ಬಳಿಕ ವೆಸ್ಟ್ ಇಂಡೀಸ್‌ ವಿರುದ್ಧ ಮುಂದಿನ ಸರಣಿಯಲ್ಲಿ ವಿಕೆಟ್‌ ಕೀಪರ್‌ ಮಹೇಂದ್ರ ಸಿಂಗ್‌ ಧೋನಿ ಭಾರತದಲ್ಲಿ ಮುಂದುವರಿಯಲಿದ್ದಾರಾ ಅಥವಾ ಕ್ರಿಕೆಟ್‌ಗೆ ರಾಜೀನಾಮೆ ನೀಡಲಿದ್ದಾರೆಯೇ ಎಂಬ ಪ್ರಶ್ನೆಗಳು ಇದೀಗ ಉದ್ಭವವಾಗಿದೆ.

ಸೆಮಿಫೈನಲ್‌ನಲ್ಲಿ ನಿರಾಸೆ ಅನುಭವಿಸಿರುವ ಭಾರತ ತಂಡದ ಆಟಗಾರರು ಲಂಡನ್‌ನಿಂದ ತವರಿಗೆ ಆಗಮಿಸುತ್ತಿದ್ದಾರೆ. ವೆಸ್ಟ್‌ ಇಂಡೀಸ್‌ ಮೂರು ಟಿ-20, ಮೂರು ಏಕದಿನ ಹಾಗೂ ಎರಡು ಪಂದ್ಯಗಳ ಟೆಸ್ಟ್ ಸರಣಿಗಳಿಗೆ ಭಾರತ ತಂಡದ ಆಯ್ಕೆ ಮಾಡಲು ರಾಷ್ಟ್ರೀಯ ಆಯ್ಕೆ ಸಮಿತಿ ಜುಲೈ 17 ಅಥವಾ 18 ರಂದು ಮುಂಬೈನಲ್ಲಿ ಸಭೆ ನಡೆಸಲಿದೆ.

ಮಹೇಂದ್ರ ಸಿಂಗ್‌ ಧೋನಿ ಅವರು ಕೆರಿಬಿಯನ್‌ ಪ್ರವಾಸ ಕೈಗೊಳ್ಳುವ ಬಗ್ಗೆ ಇನ್ನೂ ಯಾವುದೇ ಸ್ಪಷ್ಟತೆ ಇಲ್ಲ. ಆದರೆ, ವಿಶ್ವಕಪ್‌ನಲ್ಲಿ ಭಾರತ ತಂಡದಲ್ಲಿದ್ದ ರಿಷಭ್ ಪಂತ್‌ ಹಾಗೂ ದಿನೇಶ್‌ ಕಾರ್ತಿಕ್‌ ಅವರು ವಿಂಡೀಸ್‌ ಪ್ರವಾಸ ಕೈಗೊಳ್ಳಲಿದ್ದಾರೆಂದು ನಿರೀಕ್ಷೆ ಮಾಡಲಾಗಿದೆ.

ಸೆಮಿಫೈನಲ್‌ ಸೋಲಿನಿಂದ ತೀವ್ರ ಹತಾಶೆಗೆ ಒಳಗಾಗಿರುವ ವಿರಾಟ್ ಕೊಹ್ಲಿ ಸೇರಿದಂತೆ ಕೆಲ ಆಟಗಾರರು ವಿಂಡೀಸ್‌ ಸರಣಿಯಿಂದ ವಿಶ್ರಾಂತಿ ಪಡೆಯಬಹುದು. ಟೀಮ್‌ ಇಂಡಿಯಾ ನಾಯಕ ಏಕದಿನ ಹಾಗೂ ಟಿ-20 ಪಂದ್ಯಗಳಿಂದ ಹೊರಗುಳಿದು ಎರಡು ಟೆಸ್ಟ್‌ ಪಂದ್ಯಗಳಿಗೆ ತಂಡ ಸೇರ್ಪಡೆಯಾಗಬಹುದು. ರೋಹಿತ್‌ ಶರ್ಮಾ ಏಕದಿನ ಹಾಗೂ ಟಿ-20 ಸರಣಿಗಳಲ್ಲಿ ತಂಡವನ್ನು ಮುನ್ನಡೆಸಬಹುದು.

ವಿಶ್ರಾಂತಿ ಇಲ್ಲದೆ ನಿರಂತರವಾಗಿ ಆಡಿರುವ ಜಸ್ಪ್ರಿತ್‌ ಬುಮ್ರಾ, ಹಾರ್ದಿಕ್‌ ಪಾಂಡ್ಯ, ಭುವನೇಶ್ವರ್‌ ಕುಮಾರ್‌ ಹಾಗೂ ಮೊಹಮ್ಮದ್‌ ಶಮಿ ಅವರು ಈ ಸರಣಿಯಿಂದ ವಿಶ್ರಾಂತಿ ಪಡೆಯಬಹುದು. ಆದರೆ, ಮುಂದಿನ ವಾರ ಇದರ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ. ಆದರೆ, ಇದೀಗ ಎಲ್ಲರ ಚಿತ್ತ ಮಹೇಂದ್ರ ಸಿಂಗ್‌ ಧೋನಿ ಮೇಲೆ ನೆಟ್ಟಿದೆ. ಕ್ರಿಕೆಟ್‌ ವೃತ್ತಿ ಜೀವನದ ವಿದಾಯ ನೀಡುವರೇ ಅಥವಾ ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯುವ ಟಿ-20 ವಿಶ್ವಕಪ್‌ವರೆಗೂ ತಂಡದಲ್ಲಿ ಮುಂದುವರಿಯಲಿದ್ದಾರೆಯೇ ಎಂದು ಕಾದು ನೋಡಬೇಕಾಗಿದೆ. ಈ ಬಗ್ಗೆ ಧೋನಿ ಅವರಿಂದ ಟ್ವಿಟ್‌, ಹೇಳಿಕೆಗೆ ನಿರೀಕ್ಷೆ ಮಾಡಲಾಗಿದೆ.

ಇನ್ನೂ ಟೀಮ್‌ ಇಂಡಿಯಾದ ಎಲ್ಲ ಆಟಗಾರರು ವಿಶ್ವಕಪ್‌ ಸೋಲಿನೆ ಹತಾಶೆಯಲ್ಲಿದ್ದಾರೆ. ಇನ್ನೂ ಅವರು ತವರಿಗೆ ಮರಳಿ ಯಥಾಸ್ಥಿತಿಗೆ ಮರಳಲು ಇನ್ನೂ 48 ಗಂಟೆಗಳಿಗೂ ಇನ್ನೂ ಹೆಚ್ಚು ಅವಧಿ ಅಗತ್ಯವಿದೆ. ಧೋನಿ ಅವರಿಂದ ಹೇಳಿಕೆಯ ನಂತರ ಬಿಸಿಸಿಐ ಮುಂದಿನ ಹೆಜ್ಜೆ ಇಡಲಿದೆ.

ಯುಎನ್‌ಐ ಆರ್‌ಕೆ ಎಎಚ್‌ 1349

More News

ಎನ್ ಸಿಎ ನಲ್ಲಿ ಟೀಮ್ ಇಂಡಿಯಾ ಆಟಗಾರರ ಅಭ್ಯಾಸ

11 Nov 2019 | 10:58 PM

 Sharesee more..
“ಕನಸಿನಲ್ಲಿಯೂ ಹ್ಯಾಟ್ರಿಕ್ ಬಗ್ಗೆ ಯೋಚಿಸಿರಲಿಲ್ಲ”

“ಕನಸಿನಲ್ಲಿಯೂ ಹ್ಯಾಟ್ರಿಕ್ ಬಗ್ಗೆ ಯೋಚಿಸಿರಲಿಲ್ಲ”

11 Nov 2019 | 10:02 PM

ನಾಗಪುರ, ನ.11 (ಯುಎನ್ಐ)- ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಹ್ಯಾಟ್ರಿಕ್ ವಿಕೆಟ್ ಕಬಳಿಸುವ ಬಗ್ಗೆ ಕನಸಿನಲ್ಲಿಯೂ ಕಂಡಿರಲಿಲ್ಲ ಎಂದು ಟೀಮ್ ಇಂಡಿಯಾದ ಯುವ ವೇಗಿ ದೀಪಕ್ ಚಹಾರ್ ತಿಳಿಸಿದ್ದಾರೆ.

 Sharesee more..