Monday, Sep 16 2019 | Time 06:15 Hrs(IST)
Sports Share

ದಕ್ಷಿಣ ಆಫ್ರಿಕಾಗೆ 309 ರನ್ ಗುರಿ ನೀಡಿದ ಪಾಕ್

ದಕ್ಷಿಣ ಆಫ್ರಿಕಾಗೆ 309 ರನ್ ಗುರಿ ನೀಡಿದ ಪಾಕ್
ದಕ್ಷಿಣ ಆಫ್ರಿಕಾಗೆ 309 ರನ್ ಗುರಿ ನೀಡಿದ ಪಾಕ್

ಲಂಡನ್, ಜೂನ್ 23 (ಯುಎನ್ಐ)- ಭರವಸೆಯ ಬ್ಯಾಟ್ಸ್ ಮನ್ ಹ್ಯಾರಿಸ್ ಸೊಹೈಲ್ (89 ರನ್) ಹಾಗೂ ಬಾಬರ್ ಅಜಮ್ (69 ರನ್) ಅವರ ಅರ್ಧಶತಕದ ಬಲದಿಂದ ಪಾಕಿಸ್ತಾನ ವಿಶ್ವಕಪ್ ನ ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ 309 ರನ್ ಗುರಿ ನೀಡಿದೆ.

ಟಾಸ್ ಗೆದ್ದ ಪಾಕಿಸ್ತಾನ ಬ್ಯಾಟಿಂಗ್ ಮಾಡಲು ಮುಂದಾಯಿತು. ಇಮಾಮ್ ಉಲ್ ಹಕ್ ಹಾಗೂ ಫಖಾರ್ ಜಮನ್ ಮೊದಲ ವಿಕೆಟ್ ಗೆ ಸಮಯೋಚಿತ ಬ್ಯಾಟಿಂಗ್ ನಡೆಸಿದರು. ಈ ಜೋಡಿ 14.5 ಓವರ್ ಗಳಲ್ಲಿ 81 ರನ್ ಸೇರಿಸಿತು. ಫಖಾರ್ 44 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದಾಗ ಇಮ್ರಾನ್ ತಾಹೀರ್ ಗೆ ವಿಕೆಟ್ ಒಪ್ಪಿಸಿದರು.

ಇನ್ನು ಯುವ ಆಟಗಾರ ಇಮಾಮ್ ಉಲ್ ಹಕ್ 58 ಎಸೆತಗಳಲ್ಲಿ 44 ರನ್ ಬಾರಿಸಿ, ಸ್ಪಿನ್ ಬೌಲರ್ ತಾಹೀರ್ ಗೆ ಬಲಿಯಾದರು.

ಆಲ್ ರೌಂಡರ್ ಮೊಹಮ್ಮದ್ ಹಫೀಜ್ 20 ರನ್ ಗಳಿಗೆ ಆಟ ಮುಗಿಸಿದರು.

4ನೇ ವಿಕೆಟ್ ಗೆ ಹ್ಯಾರೀಸ್ ಹಾಗೂ ಬಾಬರ್ ಅಜಮ್ ತಂಡ ಸ್ಪರ್ಧಾತ್ಮ ಮೊತ್ತ ಕಲೆ ಹಾಕುವಲ್ಲಿ ಶ್ರಮಿಸಿದರು. ಈ ಜೋಡಿ ದಕ್ಷಿಣ ಆಫ್ರಿಕಾದ ಬೌಲರ್ ಗಳ ಚಿಂತೆಯನ್ನು ಹೆಚ್ಚಿಸಿತ್ತು. ಸ್ಟಾರ್ ಬೌಲರ್ ಗಳ ವಿರುದ್ಧ ಕೆಚ್ಚೆದೆಯ ಬ್ಯಾಟಿಂಗ್ ನಡೆಸಿದ ಜೋಡಿ ರನ್ ಸೇರಿಸಿತು. 68 ಎಸೆತಗಳಲ್ಲಿ ಜೋಡಿ 81 ರನ್ ಕಾಣಿಕೆ ನೀಡಿತು. ಬಾಬರ್ ಅಜಮ್ 69 ರನ್ ಗಳಿಗೆ ಆಟ ಮುಗಿಸಿದರು.

ಹ್ಯಾರಿಸ್ ಹಾಗೂ ಇಮಾದ್ ವಾಸೀಮ್ ಸಹ ತಂಡಕ್ಕೆ ನೆರವಾದರು. ಈ ಜೋಡಿ ರನ್ ವೇಗಕ್ಕೆ ಚುರುಕು ಮುಟ್ಟಿಸುವಲ್ಲಿ ಶ್ರಮಿಸಿತು. 71 ರನ್ ಸೇರಿಸಿ ಮುನ್ನುಗುತ್ತಿದ್ದ ಜೋಡಿಯನ್ನು ಬೇರ್ಪಡಿಸುವಲ್ಲಿ ಲುಂಗಿ ಗಿಡಿ ಸಫಲರಾದರು.

ಹ್ಯಾರಿಸ್ ಸೊಹೈಲ್ 59 ಎಸೆತಗಳಲ್ಲಿ 9 ಬೌಂಡರಿ, 3 ಸಿಕ್ಸರ್ ನೆರವಿನಿಂದ 89 ರನ್ ಬಾರಿಸಿ ಆರ್ಭಟಿಸಿದರು.

ದಕ್ಷಿಣ ಆಫ್ರಿಕಾ ಪರ ಲುಂಗಿ ಗಿಡಿ ಮೂರು ಹಾಗೂ ಇಮ್ರಾನ್ ತಾಹೀರ್ 2 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್

ಪಾಕಿಸ್ತಾನ 50 ಓವರ್ ಗಳಲ್ಲಿ 7 ವಿಕೆಟ್ ಗೆ 307

(ಹ್ಯಾರಿಸ್ ಸೊಹೈಲ್ 89, ಬಾಬರ್ ಅಜಮ್ 69, ಫಖಾರ್ ಜಮನ್ 44, ಇಮಾಮ್ ಉಲ್ ಹಕ್ 44, ಲುಂಗಿ ಗಿಡಿ 64ಕ್ಕೆ 3, ಇಮ್ರಾನ್ ತಾಹೀರ್ 41ಕ್ಕೆ 2).

More News

ಚೀನಾ ಓಪನ್: ಸೌರಭ್ ಚಾಂಪಿಯನ್

15 Sep 2019 | 10:31 PM

 Sharesee more..

ಜಿದ್ದಾಜಿದ್ದಿನ ಪಂದ್ಯ ಗೆದ್ದ ಕವಿಂದರ್

15 Sep 2019 | 10:04 PM

 Sharesee more..

ಪ್ರೊ ಕಬಡ್ಡಿ: ದಬಾಂಗ್ ಗೆ ಭರ್ಜರಿ ಜಯ

15 Sep 2019 | 8:55 PM

 Sharesee more..

ಮಳೆಗೆ ಭಾರತ-ದಕ್ಷಿಣ ಆಫ್ರಿಕಾ ಮೊದಲ ಟಿ-20 ಬಲಿ

15 Sep 2019 | 8:38 PM

 Sharesee more..