Wednesday, Jan 29 2020 | Time 13:36 Hrs(IST)
 • ಕೆಪಿಸಿಸಿ ಅಧ್ಯಕ್ಷರ ನೇಮಕ ಮಾಡುವಂತೆ ನಾವು ಒತ್ತಡ ಹಾಕುತ್ತೇವೆ : ಡಾ ಜಿ ಪರಮೇಶ್ವರ್
 • ಹಾಕಿ: ಭಾರತ ವನಿತೆಯರಿಗೆ ನ್ಯೂಜಿಲೆಂಡ್ ವಿರುದ್ಧ ಎರಡನೇ ಸೋಲು
 • ಟಿಸಿಐ ಎಕ್ಸ್ ಪ್ರೆಸ್ ಸಂಸ್ಥೆಯ ತ್ರೈಮಾಸಿಕ ಹಣಕಾಸು ಸಾಧನೆ ಪ್ರಕಟ: 26 ಕೋಟಿ ರೂ ನಿವ್ವಳ ಲಾಭ
 • ಬಿಜೆಪಿ ಸೇರಿದ ಬ್ಯಾಡ್ಮಿಂಟನ್ ಚಾಂಪಿಯನ್ ಸೈನಾ ನೆಹ್ವಾಲ್
 • ಆಸ್ಟ್ರೇಲಿಯಾ ಓಪನ್: ಮೊದಲ ಬಾರಿ ಗ್ರ್ಯಾನ್ ಸ್ಲ್ಯಾಮ್ ಸೆಮಿಫೈನಲ್ ತಲುಪಿದ ಜ್ವೆರೆವ್
 • ರೌಡಿಶೀಟರ್ ಹತ್ಯೆಗೈದಿದ್ದ ಒಂಭತ್ತು ಜನರ ಬಂಧನ
 • ಕರೊನಾ ವೈರಸ್ ನಿಗ್ರಹಕ್ಕೆ “ತಾರಾ ಮಂತ್ರ” ದಿಂದ ಬ್ರಹ್ಮಾಂಡ ಪರಿಹಾರ; ದಲಾಯಿ ಲಾಮಾ ಸಲಹೆ
 • ಕಾಶ್ಮೀರದಲ್ಲಿ ಹೈಸ್ಪೀಡ್, ಬ್ರಾಡ್‌ಬ್ಯಾಂಡ್ ಇಂಟರ್‌ನೆಟ್‌ ಸ್ಥಗಿತ ಮುಂದುವರಿಕೆ
 • ಮೂರನೇ ಟಿ-20 ಪಂದ್ಯ: ಟಾಸ್ ಗೆದ್ದು ಪೀಲ್ಡಿಂಗ್ ಆಯ್ದುಕೊಂಡ ನ್ಯೂಜಿಲೆಂಡ್
 • ದಲಿತರಿಗೆ ಹಿಂದೂ ಸ್ಮಶಾನದಲ್ಲಿ ಅವಕಾಶ ನಿರಾಕರಣೆ: ಸಿದ್ದರಾಮಯ್ಯ ಕಿಡಿ
 • ಪುಸ್ತಕ ಪ್ರೇಮಿಗಳಾಗಿ, ಜ್ಞಾನಾರ್ಜನೆ ಮಾಡಿಕೊಳ್ಳಿ ಸಿಎಂ ಮಮತಾ ಕಿವಿಮಾತು
 • ನೂತನ ವಿದೇಶಾಂಗ ಕಾರ್ಯದರ್ಶಿಯಾಗಿ ಹರ್ಷವರ್ಧನ್ ಶ್ರಿಂಗ್ಲಾ ಅಧಿಕಾರ ಸ್ವೀಕಾರ
 • ನಿರ್ಭಯ ಪ್ರಕರಣ; ತಪ್ಪಿತಸ್ಥ ಮುಖೇಶ್ ಆರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್
 • ಇರ್ಫಾನ್ ಪಠಾಣ್ ಮೊದಲ ಓವರ್ ಹ್ಯಾಟ್ರಿಕ್ ಸಾಧನೆಗೆ ಇದೀಗ 14 ವರ್ಷ
 • ನಿರ್ಭಯಾ ಪ್ರಕರಣ, ಅಪರಾಧಿ ಮುಖೇಶ್ ಮನವಿ ತಿರಸ್ಕೃತ
Sports Share

ದಕ್ಷಿಣ ಆಫ್ರಿಕಾ ತಂಡದ ನಿರ್ದೇಶಕರಾಗಿ ಗ್ರೇಮ್‌ ಸ್ಮಿತ್‌ ನೇಮಕ ?

ಜೋಹಾನ್ಸ್‌ಬರ್ಗ್‌, ಡಿ 8 (ಯುಎನ್‌ಐ) ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡದ ಮಾಜಿ ನಾಯಕ ಗ್ರೇಮ್‌ ಸ್ಮಿತ್ ಕ್ರಿಕೆಟ್ ದಕ್ಷಿಣ ಆಫ್ರಿಕಾ (ಸಿಎಸ್ಎ) ನಿರ್ದೇಶಕರಾಗುವುದು ಬಹುತೇಕ ಖಚಿತವಾಗಿದೆ ಎಂದು ಮಂಡಳಿ ಅಧ್ಯಕ್ಷ ಕ್ರಿಸ್‌ ನೆಂಝಾನಿ ತಿಳಿಸಿದ್ದಾರೆ.
ನೆಂಝಾನಿ ಅವರು ಸ್ಮಿತ್‌ ಬಳಿ ನಿರ್ದೇಶಕ ಸ್ಥಾನದ ನೇಮಕ ವಿಷಯ ಕುರಿತು ಶನಿವಾರ ಬೆಳಗ್ಗೆ ಕರೆ ಮಾಡಿ ಮಾತನಾಡಿದ್ದರು.
"ಗ್ರೇಮ್ ಸ್ಮಿತ್‌ ಅವರು ಕ್ರಿಕೆಟ್‌ ದಕ್ಷಿಣ ಆಫ್ರಿಕಾಗೆ ನೂತನ ನಿರ್ದೇಶಕರಾಗುತ್ತಿರುವುದು ಹೆಚ್ಚು ಸಂತಸ ತಂದಿದೆ. ಮುಂದಿನ ವಾರ ಸ್ಮಿತ್‌ ಜತೆಗಿನ ಗುತ್ತಿಗೆ ಸೇರಿದಂತೆ ಹಲವು ನಿಯಮಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗುವುದ," ಎಂದು ವಿಶೇಷ ಮಂಡಳಿಯ ಸಭೆಯಲ್ಲಿ ನೆಂಝಾಮಿ ಸ್ಪಷ್ಟಪಡಿಸಿದ್ದಾರೆ.
ಒಂದು ವೇಳೆ ಗ್ರೇಮ್ ಸ್ಮಿತ್‌ ನಿರ್ದೇಶಕ ಹುದ್ದೆಯನ್ನು ಸ್ವೀಕರಿಸಿದ್ದೇ ಆದಲ್ಲಿ ಮುಂದಿನ ಕೆಲ ವಾರಗಳಲ್ಲಿ ಅಂದರೆ, ಇಂಗ್ಲೆಂಡ್‌ ವಿರುದ್ಧ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಒಳಗಾಗಿ ಆಯ್ಕೆ ಸಮಿತಿ ಹಾಗೂ ಕೋಚಿಂಗ್‌ ಸಿಬ್ಬಂದಿಯನ್ನು ನೇಮಿಸುವ ಕಾರ್ಯ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.
ಮತ್ತೊಂದೆಡೆ, ಸಿಎಸ್ಎ ಬಿಕ್ಕಟ್ಟು ಹಾಗೆಯೇ ಇದೆ, ನೆಂಝಾನಿ ಅವರ ಉಳಿದ ಮಂಡಳಿಯ ಸದಸ್ಯರು ತಮ್ಮ ಹುದ್ದೆಗೆ ರಾಜೀನಾಮೆ ನೀಡಲು ನಿರಾಕರಿಸಿದರು, ಎಸ್ಎ ಕ್ರಿಕೆಟಿಗರ ಸಂಘದ (ಎಸ್ಎಸಿಎ) ಮುಖ್ಯ ಕಾರ್ಯನಿರ್ವಾಹಕ ಟೋನಿ ಐರಿಶ್ ಅವರು ಸಿಎಸ್ಎ ಅಧ್ಯಕ್ಷರನ್ನು ಕೆಳಗಿಳಿಯುವಂತೆ ಶುಕ್ರವಾರ ಕೇಳಿದ್ದರು.
ಮಾಜಿ ನಾಯಕ ಗ್ರೇಮ್‌ ಸ್ಮಿತ್‌ ಅವರು ದಕ್ಷಿಣ ಆಫ್ರಿಕಾ ಪರ 117 ಟೆಸ್ಟ್ ಹಾಗೂ 197 ಏಕದಿನ ಪಂದ್ಯಗಳಾಡಿದ್ದು, ಕ್ರಮವಾಗಿ 9265 ಮತ್ತು 6989 ರನ್‌ ಗಳಿಸಿದ್ದಾರೆ. ಜತೆಗೆ, 33 ಟಿ-20 ಪಂದ್ಯಗಳಿಂದ 982 ರನ್‌ ಗಳಿಸಿದ್ದಾರೆ.
ಯುಎನ್‌ಐ ಆರ್ ಕೆ 1042