Monday, Jul 22 2019 | Time 07:09 Hrs(IST)
  • ಶಾಸಕರು ರಾಜಕೀಯ ವ್ಯಭಿಚಾರ ಮಾಡಿದ್ದಾರೆ : ದಿನೇಶ್ ಗುಂಡೂರಾವ್ ಗಂಭೀರ ಆರೋಪ
International Share

ದಕ್ಷಿಣ ಕೊರಿಯಾ ಪ್ರಧಾನಿ ನಾಳೆ ಬಾಂಗ್ಲಾದೇಶಕ್ಕೆ ಭೇಟಿ

ಢಾಕಾ, 12 (ಯುಎನ್‌ಐ) ದ್ವಿಪಕ್ಷೀಯ ಸಂಬಂಧ ಬಲಪಡಿಸಲು ಮತ್ತು ಬಾಂಗ್ಲಾದೇಶಕ್ಕೆ ಮೂರು ದಿನಗಳ ಅಧಿಕೃತ ಭೇಟಿಗಾಗಿ ದಕ್ಷಿಣ ಕೊರಿಯಾದ ಪ್ರಧಾನಿ ಲೀ ನಕ್-ಯೋನ್ ಶನಿವಾರ ಢಾಕಾಕ್ಕೆ ಕ್ಕೆ ಆಗಮಿಸಲಿದ್ದಾರೆ.
ಭೇಟಿಯ ಸಮಯದಲ್ಲಿ ಹಲವು ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಗುವುದು ಎಂದು ವಿದೇಶಾಂಗ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
ವೇಳಾಪಟ್ಟಿಯ ಪ್ರಕಾರ, ದಕ್ಷಿಣ ಕೊರಿಯಾದ ಪ್ರಧಾನಿ ವಿಶೇಷ ವಿಮಾನದ ಮೂಲಕ ಹಜರತ್ ಶಹಜಲಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ.

ವಿದೇಶಾಂಗ ಸಚಿವ ಅಬ್ದುಲ್ ಮೆಮೆನ್ ಅವರು ಪ್ರಧಾನಿ ಯವರನ್ನು ಸ್ವಾಗತ ಮಾಡಲಿದ್ದಾರೆ. ನಂತರ ಅವರು ತಜಿಕಿಸ್ತಾನ್, ಕಿರ್ಗಿಸ್ತಾನ್ ಮತ್ತು ಕತಾರ್‌ಗೆ ಭೇಟಿ ನೀಡಲಿದ್ದಾರೆ ಎಂದು ಡೈಲಿ ಸ್ಟಾರ್ ವರದಿ ಮಾಡಿದೆ.
ಕೊರಿಯಾ ಪ್ರಧಾನಿ ಭಾನುವಾರ ಸಾವರ್‌ನಲ್ಲಿರುವ ರಾಷ್ಟ್ರೀಯ ಹುತಾತ್ಮ ಸ್ಮಾರಕಕ್ಕೆ ಭೇಟಿ ನೀಡಿ ಮಾಲಾರ್ಪಣೆ ಮಾಡುವ ಮೂಲಕ ವಿಮೋಚನಾ ಯುದ್ಧ ಹುತಾತ್ಮರ ನೆನಪುಗಳನ್ನು ಸ್ಮರಿಸುವ ಮೂಲಕ ಮೂಲಕ ತನ್ನ ಅಧಿಕೃತ ಭೇಟಿಯನ್ನು ಪ್ರಾರಂಭಿಸಲಿದ್ದಾರೆ ಎಂದು ವರದಿಯಾಗಿದೆ.
ಭಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರೊಂದಿಗೆ ಸಭೆ ನಡೆಸಿದ ನಂತರ, ಕೊರಿಯಾದ ಪ್ರಧಾನಿ ಅವರು ಅಧ್ಯಕ್ಷ ಎಂ ಅಬ್ದುಲ್ ಹಮೀದ್ ಅವರನ್ನು ಬಂಗಭಾಬನ್ ನಲ್ಲಿ ಭೇಟಿ ಮಾಡಲಿದ್ದಾರೆ.
ಸಂಜೆ ಅವರು ಹೋಟೆಲ್ ಪ್ಯಾನ್ ಪೆಸಿಫಿಕ್ ಸೋನೋಗ್ರಾಮ್‌ನಲ್ಲಿ ಪ್ರಧಾನಿ ಹಸೀನಾ ಆಯೋಜಿಸಿರುವ ಔತಣ ಕೂಟದಲ್ಲಿ ಅವರು ಭಾಗಿಯಾಗಲಿದ್ದಾರೆ.
ಯುಎನ್ಐ ಕೆಎಸ್ಆರ್ ಎಎಚ್ 1250
.