Wednesday, Aug 12 2020 | Time 01:12 Hrs(IST)
  • ಗಲಭೆ ನಿಯಂತ್ರಿಸಲು ಪೊಲೀಸರಿಂದ ಫೈರಿಂಗ್ ಓರ್ವ ಸಾವು,ಮೂವರಿಗೆ ಗಾಯ : ತಡರಾತ್ರಿ ಗೃಹ ಸಚಿವರಿಗೆ ದೂರವಾಣಿ ಕರೆ
  • ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಸಂಬಂಧಿಯೊಬ್ಬರಿಂದ ಕೋಮು ಪ್ರಚೋದಿತ ಪೋಸ್ಟ್,ಠಾಣೆಗೆ ಹೆಚ್ಚಿ ಬೆಂಕಿ ಹಚ್ಚಿ ಗಲಾಟೆ
Entertainment Share

ದಕ್ಷಿಣ ಭಾರತ ಹಿರಿಯ ನಟಿ ವಾಣಿಶ್ರೀ ಪುತ್ರ ಆತ್ಮಹತ್ಯೆ

ಚೆನ್ನೈ, ಮೇ ೨೩(ಯುಎನ್‌ಐ) ದಕ್ಷಿಣ ಭಾರತದ ಹಿರಿಯ ನಟಿ ವಾಣಿಶ್ರೀ ಪುತ್ರ ಅಭಿನಯ್ ವೆಂಕಟೇಶ್ ಕಾರ್ತಿಕ್ (೩೬) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚೆಂಗಲ್ ಪಟ್ಟು ಜಿಲ್ಲೆಯ ತಿರಕ್ಕಳುಕುಂಡ್ರಾದಲ್ಲಿರುವ ತೋಟದ ಮನೆಯಲ್ಲಿ ಆವರು ಆತ್ಮಹತ್ಯೆ ಮಾಡಿಕೊಂಡಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಬೆಂಗಳೂರಿನ ಸರ್ಕಾರಿ ವೈದ್ಯಕೀಯ ಆಸ್ಪತ್ರೆಯಲ್ಲಿ ಸಹಾಯಕ ಪ್ರಾದ್ಯಾಪಕರಾಗಿದ್ದ ಅಭಿನಯ್ ಬೆಂಗಳೂರಿನಿಂದ ಬಂದ ನಂತರ ಹೋಂ ಕ್ವಾರಂಟೈನ್ ನಲ್ಲಿದ್ದರು. ಆದರೆ ಅವರು ಶುಕ್ರವಾರವೇ ಆತ್ಮಹತ್ಯೆಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳಿವೆ. ಅಭಿನಯ್ ಪತ್ನಿ ಸಹ ವೈದ್ಯರಾಗಿದ್ದು, ದಂಪತಿಗೆ ಒಬ್ಬ ಪುತ್ರ ಹಾಗೂ ಪುತ್ರಿ ಇದ್ದಾರೆ.
ಈ ನಡುವೆ ಅಭಿನಯ್ ಸಾವಿನ ಬಗ್ಗೆ ತಿರುಕ್ಕಳುಕುಂಡ್ರಂ ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿದ್ದಾರೆ. ಹೋಂ ಕ್ವಾರಂಟೈನ್ ನಲ್ಲಿದ್ದ ಅವರು ತೀವ್ರ ಮಾನಸಿಕ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಯುಎನ್‌ಐ ಕೆವಿಆರ್ ೨೦೨೮
More News

"ಕಂಡ್ಹಿಡಿ ನೋಡೋಣ"

11 Aug 2020 | 8:29 PM

ಬೆಂಗಳೂರು, ಆ 11 (ಯುಎನ್ಐ) ಕಂಡ್ಹಿಡಿ ನೋಡೋಣ ಇದು ಯಾವುದೋ ಸ್ಪರ್ಧೆಯ ಅಥವಾ ಲೆಕ್ಕದ ವಿಚಾರ ಅಲ್ಲ. ಮ್ಯಾನ್ ಲಿಯೋ ಸಂಸ್ಥೆಯ ಮುಖಾಂತರ ದಿವ್ಯ ಚಂದ್ರಧರ ಮತ್ತು ಯೋಗೇಶ್ ಕೆ. ಗೌಡ ನಿರ್ಮಾಣದಲ್ಲಿ ಹಾಗೂ ನಾಗೇಂದ್ರ ಅರಸ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾ ಕಣ್ರೀ.

 Sharesee more..
‘ವಿಕ್ರಾಂತ್ ರೋಣಾ’ ಗತ್ತು, ಕಿಚ್ಚ ಅಭಿಮಾನಿಗಳಿಗೆ ಗಮ್ಮತ್ತು

‘ವಿಕ್ರಾಂತ್ ರೋಣಾ’ ಗತ್ತು, ಕಿಚ್ಚ ಅಭಿಮಾನಿಗಳಿಗೆ ಗಮ್ಮತ್ತು

10 Aug 2020 | 7:03 PM

ಬೆಂಗಳೂರು, ಆ 10 (ಯುಎನ್‍ಐ) ‘ಫ್ಯಾಂಟಮ್‌' ಚಿತ್ರದ ಹೊಸ ಪೋಸ್ಟರ್ ಬಿಡುಗಡೆಯಾಗಿದ್ದು, ನಟ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಸೋಮವಾರ ಭಲೇ ಗಮ್ಮತ್ತು ಸಿಕ್ಕಿದೆ.

 Sharesee more..
ತೆರೆಗೆ ಬರಲಿದೆ ರಾಷ್ಟ್ರಕವಿ ಗೋವಿಂದ ಪೈ ಬಯೋಪಿಕ್

ತೆರೆಗೆ ಬರಲಿದೆ ರಾಷ್ಟ್ರಕವಿ ಗೋವಿಂದ ಪೈ ಬಯೋಪಿಕ್

10 Aug 2020 | 6:58 PM

ಬೆಂಗಳೂರು, ಆ 10 (ಯುಎನ್‍ಐ) ರಾಜ್ಯದ ಮೊದಲ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ (ಎಂ ಗೋವಿಂದ ಪೈ) ಜೀವನ ತೆರೆಗೆ ಬರಲಿದೆ. ಗೋವಿಂದ ಪೈ ತವರೂರಿನವರಾದ ಸ್ಯಾಂಡಲ್ವುಡ್ ನಟ ರಘುಭಟ್ ನಾಡಿನ ಹೆಮ್ಮೆಯ ಕವಿಯ ಬಯೋಪಿಕ್ ನಿರ್ಮಿಸಲು ಮುಂದಾಗಿದ್ದಾರೆ.

 Sharesee more..