Sunday, Dec 8 2019 | Time 13:40 Hrs(IST)
 • ದೆಹಲಿ ಬೆಂಕಿ ದುರಂತ: ಮೃತಪರ ಕುಟುಂಬಗಳಿಗೆ ಪ್ರಧಾನಿಯವರಿಂದ ತಲಾ 2 ಲಕ್ಷ ರೂ ಪರಿಹಾರ ಘೋಷಣೆ
 • ಉನ್ನಾವೋ ಘಟನೆ : ಸಿಎಂ ಬರುವವರೆಗೂ ಅಂತ್ಯ ಸಂಸ್ಕಾರ ನಡೆಸದಿರಲು ಬಿಗಿಪಟ್ಟು
 • ದೆಹಲಿ ಅಗ್ನಿ ದುರಂತ; ತನಿಖೆಗೆ ಸಿಎಂ ಕೇಜ್ರೀವಾಲ್ ಆದೇಶ, ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ಪರಿಹಾರ
 • ಪರಿಷ್ಕೃತ ಪೌರತ್ವ ತಿದ್ದುಪಡಿ ಮಸೂದೆ: ಸೋಮವಾರ ಮಂಡನೆ
 • ಲಾ ಲೀಗಾ: ರೊನಾಲ್ಡೊ ದಾಖಲೆ ಮುರಿದ ಮೆಸ್ಸಿ
 • ಲಾ ಲೀಗಾ: ರೊನಾಲ್ಡೊ ದಾಖಲೆ ಮುರಿದ ಮೆಸ್ಸಿ
 • ನಾಳೆ ಉಪ ಕದನ ಫಲಿತಾಂಶ; ದೇವರ ಮೊರೆ ಹೋದ ಬಿಎಸ್‌ವೈ
 • ಲಾ ಲೀಗಾ ಫುಟ್ಬಾಲ್‌ ಟೂರ್ನಿ: ಮೆಸ್ಸಿ ಹ್ಯಾಟ್ರಿಕ್‌ ಗೋಲಿನ ನೆರವಿನಿಂದ ಬಾರ್ಸಿಲೋನಾಗೆ ಜಯ
 • ಭದ್ರತಾಪಡೆ ಗುಂಡಿಗೆ ಐವರು ಉಗ್ರರ ಬಲಿ
 • ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಮಣಿಪುರದಲ್ಲಿ ತೀವ್ರ ಪ್ರತಿಭಟನೆ: ಸಿಎಬಿಗೆ ಕಾಂಗ್ರೆಸ್, ಎಡಪಕ್ಷ ವಿರೋಧ
 • ಉಪದ್ರವ ಕೊಡುತ್ತಿದ್ದ ಚಿರತೆ ಕೊನೆಗೂ ಬಲೆಗೆ ಬಿತ್ತು
 • ಚಿಕ್ಕಮಗಳೂರಿನಲ್ಲಿ ಮೂರು ದಿನಗಳ ದತ್ತ ಜಯಂತಿ ಜಿಲ್ಲಾಡಳಿತದಿಂದ ವ್ಯಾಪಕ ಬಂದೋಬಸ್ತ್
 • ಎಟಿಕೆ ತಂಡದ ರಾಯ್ ಕೃಷ್ಣ ಮುಡಿಗೆ ನವೆಂಬರ್ ಐಎಸ್ಎಲ್‌ ಹಿರೋ ಮುಕುಟ
 • ದೆಹಲಿಯಲ್ಲಿ ಭೀಕರ ಅಗ್ನಿದುರಂತ : ಮೃತರ ಸಂಖ್ಯೆ 43ಕ್ಕೆ ಏರಿಕೆ
 • ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್‌ ಸೆಹ್ವಾಗ್‌ ದ್ವಿಶತಕಕ್ಕೆ ಎಂಟು ವರ್ಷ
National Share

ದೀಕ್ಷಿತ್, ರಾಮ್ ಚಂದ್ರ ಪಾಸ್ವಾಸ್ ಗೆ ಸಂತಾಪ: ಲೋಕಸಭೆ ಕಲಾಪ ಮುಂದಕ್ಕೆ

ನವದೆಹಲಿ, ಜುಲೈ 22: (ಯುಎನ್ಐ) ಹಾಲಿ ಸಂಸದ ರಾಮ್ ಚಂದ್ರ ಪಾಸ್ವಾನ್ ಮತ್ತು ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರುಗಳ ನಿಧನದ ಗೌರವಾರ್ಥ ಲೋಕಸಭೆ ಸೋಮವಾರ ಸಂತಾಪ ವ್ಯಕ್ತಪಡಿಸಿ ನಂತರ ಕಲಾಪವನ್ನು ಮಧ್ಯಾಹ್ನದವರೆಗೆ ಮಂದೂಡಲಾಯಿತು
ವಾರದ ಬಿಡುವಿನ ಬಳಿಕ ಸದನ ಸೇರುತ್ತಿದ್ದಂತೆಯೆ , ಸ್ಪೀಕರ್ ಓಂ ಬಿರ್ಲಾ ಅಗಲಿದ ಇಬ್ಬರು ನಾಯಕರ ಬಗ್ಗೆ ಸಂತಾಪ ನಿರ್ಣಯ ಮಂಡಿಸಿದರು.
ಮಾಜಿ ಲೋಕಸಭಾ ಸದಸ್ಯ ಮತ್ತು ಕಾಂಗ್ರೆಸ್ ಹಿರಿಯ ನಾಯಕಿ ಎಂ.ಎಸ್. ದೀಕ್ಷಿತ್ ಶನಿವಾರ ಕೊನೆಯುಸಿರೆಳೆದರೆ, ಬಿಹಾರ ಮೂಲದ ಎಲ್ ಜೆಪಿ ಯ ಸಮಸ್ತಿಪುರ ಸಂಸದ ರಾಮ್ ಚಂದ್ರ ಪಾಸ್ವಾನ್ ಭಾನುವಾರ ನಿಧನರಾಗಿದ್ದರು.
ರಾಮ್ ಚಂದ್ರ ಪಾಸ್ವಾನ್ ಅವರು ಸಂಸದೀಯ ಸಮಿತಿಗಳೊಂದಿಗೆ ಸಂಬಂಧ ಹೊಂದಿದ್ದರು ಎಂದು ಸ್ಪೀಕರ್ ಬಿರ್ಲಾ ತಮ್ಮಸಂತಾಪ ನಿರ್ಣಯದಲ್ಲಿ ಪ್ರಸ್ತಾಪ ಮಾಡಿದ್ದಾರೆ.
ಎಲ್ಜೆಪಿ ಮುಖ್ಯಸ್ಥ ಮತ್ತು ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರ ಸಹೋದರ --- ರಾಮ್ ಚಂದ್ರ ಪಾಸ್ವಾನ್ ಅವರು ಲೋಕಸಭೆಗೆ ಒಟ್ಟು ನಾಲ್ಕು ಬಾರಿ ಸಂಸತ್ತಿಗೆ ಆಯ್ಕೆಯಾಗಿದ್ದು
ಭಾನುವಾರ ತಮ್ಮ 57 ನೇ ವಯಸ್ಸಿನಲ್ಲಿ ನಿಧನರಾದರು ಎಂದು ಸ್ಪೀಕರ್ ಹೇಳಿದರು.
ಉತ್ತರ ಪ್ರದೇಶದ ಕನ್ನೌಜ್ ಸಂಸದೀಯ ಕ್ಷೇತ್ರದಿಂದ 1984 ಮತ್ತು 1989 ರ ನಡುವೆ ಶೀಲಾ ದೀಕ್ಷಿತ್ ಅವರು ಎಂಟನೇ ಲೋಕಸಭೆಯ ಸದಸ್ಯರಾಗಿದ್ದರು ಎಂದು ಸ್ಪೀಕರ್ ಬಿರ್ಲಾ ಹೇಳಿದರು.
ಅಗಲಿದ ಸದಸ್ಯರ ಗೌರವಾರ್ಥ ಸದನದಲ್ಲಿ ಎರಡುನಿಮಿಷ ಮೌನವಾಚರಿಸಿ, ನಂತರ ಕಲಾಪವನ್ನು ಮಧ್ಯಾಹ್ನದ ವರೆಗೆ ಮುಂದೂಡಲಾಯಿತು.
ಯುಎನ್ಐ ಕೆಎಸ್ಆರ್ ಎಎಚ್ 1210