Sunday, Aug 18 2019 | Time 04:38 Hrs(IST)
Sports Share

ದಾಖಲೆ ಬರೆದ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್

ಲಂಡನ್, ಜು 13 (ಯುಎನ್ಐ)- ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಭಾನುವಾರ ಇಂಗ್ಲೆಂಡ್ ವಿರುದ್ಧ ಐಸಿಸಿ ವಿಶ್ವಕಪ್ ಫೈನಲ್ ನಲ್ಲಿ ಒಂದು ರನ್ ಬಾರಿಸುತ್ತಿದ್ದಂತೆ, ತಮ್ಮ ಹೆಸರಿಗೆ ಮತ್ತೊಂದು ದಾಖಲೆ ನಮೂದಿಸಿದ್ದಾರೆ.

ತಮ್ಮ ನಾಯಕತ್ವದಲ್ಲಿ ನ್ಯೂಜಿಲೆಂಡ್ ತಂಡ ಸ್ಥಿರ ಪ್ರದರ್ಶನ ನೀಡುವಲ್ಲಿ ಪ್ರಮುಖ ಪಾತ್ರವಹಿಸಿದ ಕೇನ್ ವಿಲಿಯಮ್ಸನ್ ಪ್ರಸಕ್ತ ವಿಶ್ವಕಪ್ ನಲ್ಲೂ ರನ್ ಕಲೆ ಹಾಕಿದ್ದಾರೆ. ಫೈನಲ್ ಪಂದ್ಯದಲ್ಲಿ ಒಂದು ರನ್ ಬಾರಿಸಿ, ಒಂದೇ ವಿಶ್ವಕಪ್ ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ನಾಯಕ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಕೇನ್ ಪ್ರಸಕ್ತ ವಿಶ್ವಕಪ್ ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ಆಡಿರುವ 10 ಪಂದ್ಯಗಳಲ್ಲಿ ಕೇನ್ 82.57ರ ಸರಾಸರಿಯಲ್ಲಿ 578 ರನ್ ಕಲೆ ಹಾಕಿ ದಾಖಲೆ ಬರೆದಿದ್ದಾರೆ. ಈ ಮೂಲಕ ಒಂದೇ ವಿಶ್ವಕಪ್ ನಲ್ಲಿ ಗರಿಷ್ಠ ರನ್ ಬಾರಿಸಿದ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ಶ್ರೀಲಂಕಾದ ಮಹೇಲ್ ಜಯವರ್ಧನೆ ಹಿಂದಿಕ್ಕಿದ್ದಾರೆ.


ವಿಶ್ವಕಪ್ ಟೂರ್ನಿಯಲ್ಲಿ 500ಕ್ಕೂ ಹೆಚ್ಚು ರನ್ ಬಾರಿಸಿದ ನಾಯಕರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ರಾಸ್ ಟೇಲರ್ ಬಳಿಕ ವಿಶ್ವಕಪ್ ನಲ್ಲಿ 500ಕ್ಕೂ ಹೆಚ್ಚು ರನ್ ಬಾರಿಸಿದ ನ್ಯೂಜಿಲೆಂಡ್ ಆಟಗಾರ ಎಂಬ ಹೆಗ್ಗಳಿಕೆ ವಿಲಿಯಮ್ಸನ್ ಅವರದ್ದಾಗಿದೆ. ಇನ್ನು ಕಿವೀಸ್ ತಂಡಕ್ಕೆ ವಿಶ್ವಕಪ್ ಮುಕುಟ ತೊಡಿಸಿದಲ್ಲಿ, ಈ ಸಾಧನೆ ಮಾಡಿದ ನ್ಯೂಜಿಲೆಂಡ್ ತಂಡದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಯುಎನ್ಐ ವಿಎನ್ಎಲ್