Friday, Dec 13 2019 | Time 12:02 Hrs(IST)
  • ಡಾರ್ಕ್ ವೆಬ್‌ಸೈಟ್ ಮೂಲಕ ನೆದರ್ಲಾಂಡ್‌ನಿಂದ ಮಾದಕ ವಸ್ತು ತರಿಸುತ್ತಿದ್ದ ಮೂವರ ಬಂಧನ: 20 ಲಕ್ಷ ರೂ ಮೌಲ್ಯದ ಗಾಂಜಾ ವಶ
  • 2023ರ ಫಿಫಾ ಮಹಿಳಾ ವಿಶ್ವಕಪ್‌ಗೆ ಆಸ್ಟ್ರೇಲಿಯಾ-ನ್ಯೂಜಿಲೆಂಡ್ ಜಂಟಿ ಬಿಡ್‌ ಸಲ್ಲಿಕೆ
  • ಭಾರತ, ಚೀನಾ, ಇರಾನ್ ಹಾಗೂ ಇಥಿಯೋಪಿಯಾ ದೇಶಗಳಲ್ಲಿ ಅಂತರ್ಜಾಲ ಸ್ಥಗಿತ ಪ್ರವೃತ್ತಿ ಹೆಚ್ಚು; ಸಮೀಕ್ಷೆ
  • ಡಯಾಲಿಸಿಸ್ ಉತ್ಪನ್ನ ಪೂರೈಕೆ: ಮೆಡಿಕಾಬಜಾರ್ - ಪ್ರೋ ಮೆಡಿಕಲ್ ಇಂಡಿಯಾ ಒಪ್ಪಂದ
  • ಪೌರತ್ವ ಮಸೂದೆ, ಕೇಂದ್ರದ ವಿರುದ್ಧ ಕೇರಳ, ಪಂಜಾಬ್ ಬಹಿರಂಗ ಸೆಡ್ಡು
  • ಪ್ರಧಾನಿ ಜಾನ್ಸನ್‌ಗೆ 'ದೊಡ್ಡ ಜಯ': ಟ್ರಂಪ್
  • ಚುನಾವಣಾ ಕಣದಲ್ಲಿ ಕ್ರಿಮಿನಲ್ ಗಳು , ಕೋಟ್ಯಾಧಿಪತಿಗಳು
  • ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ 19ರಂದು ದೇಶಾದ್ಯಂತ ಪ್ರತಿಭಟನೆಗೆ ಎಡ ಪಕ್ಷಗಳ ಕರೆ
  • ಫಿಲಿಪೈನ್ಸ್‌ನಲ್ಲಿ ರಸ್ತೆ ಅಪಘಾತ: ಕನಿಷ್ಠ 6 ಸಾವು
  • ಕನ್ಸರ್ವೇಟಿವ್ ಪಕ್ಷಕ್ಕೆ ವಿಜಯ : ಎಕ್ಸಿಟ್ ಪೋಲ್ ಸಮೀಕ್ಷೆ
Sports Share

ದಾಖಲೆಯ ಚಿನ್ನ ಗೆದ್ದು ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದ ಮೊಹಮ್ಮದ್‌ ಅನಾಸ್‌

ನವದೆಹಲಿ, ಜು 14 (ಯುಎನ್‌ಐ) ಝೆಕ್‌ ಗಣರಾಜ್ಯದಲ್ಲಿ ನಡೆಯುತ್ತಿರುವ ಕ್ಲಾಡ್ನೊ ಮೆಮೋರಿಯಲ್‌ ಅಥ್ಲೆಟಿಕ್ಸ್‌ ಮೀಟ್‌ನಲ್ಲಿ ಭಾರತದ ಮೊಹಮ್ಮದ್‌ ಅನಾಸ್‌ ಅವರು 400ಮೀ ವಿಭಾಗದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ತಮ್ಮದೇ ಹೆಸರಿನಲ್ಲಿರುವ ರಾಷ್ಟ್ರೀಯ ದಾಖಲೆಯನ್ನು ಉತ್ತಮಪಡಿಸಿಕೊಂಡರು. ಜತೆಗೆ, ಮಹಿಳೆಯರ ವಿಭಾಗದಲ್ಲಿ ಹಿಮಾ ದಾಸ್‌ ಅವರು 200ಮೀ ವಿಭಾಗದಲ್ಲಿ ಚಿನ್ನ ಗೆಲ್ಲುವ ಮೂಲಕ ಕೇವಲ 11 ದಿನಗಳ ಅಂತರದಲ್ಲಿ ಮೂರನೇ ಅಂತಾರಾಷ್ಟ್ರೀಯ ಸ್ವರ್ಣ ಪದಕ ಇದಾಯಿತು.
24ರ ಪ್ರಾಯದ ಮೊಹಮ್ಮದ್‌ ಅನಾಸ್‌ ಅವರು 400ಮೀ ಓಟವನ್ನು 45.21 ಸೆಕೆಂಡ್‌ಗಳಲ್ಲಿ ಸುಲಭವಾಗಿ ಮುಗಿಸಿದರು. ಅಲ್ಲದೇ, ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದರು. ಪೊಲೆಂಡ್‌ನ ಒಮ್ಲೇಕ್‌ ರಾಫಲ್‌ ಅವರು(46.19) ಒಂದೇ ಒಂದು ಸೆಕೆಂಡ್‌ ಅಂತರದಿಂದ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು.
ಮೊಹಮ್ಮದ್‌ ಅನಾಸ್‌ ಅವರು ಇದಕ್ಕೂ ಮುನ್ನ 45.24 ಸೆಕೆಂಡ್‌ಗಳಲ್ಲಿ 400ಮೀ ಓಟ ಪೂರ್ಣಗೊಳಿಸುವ ಮೂಲಕ ರಾಷ್ಟ್ರೀಯ ದಾಖಲೆ ಮಾಡಿದ್ದರು. ಇದೀಗ ಅವರು 45.20 ಸೆಕೆಂಡ್‌ಗಳಲ್ಲಿ ತನ್ನದೇ ದಾಖಲೆಯನ್ನು ಇನ್ನಷ್ಟು ಉತ್ತಮ ಪಡಿಸಿಕೊಂಡರು.
ಮಹಿಳೆಯರ 200ಮೀ ರೇಸ್‌ನಲ್ಲಿ ಹಿಮಾ ದಾಸ್‌ ಅವರು 23.43 ಸೆಕೆಂಡ್‌ಗಳಲ್ಲಿ ಮುಗಿಸುವ ಮೂಲಕ ಚಿನ್ನದ ಪದಕ ಪಡೆದರು. 23.10 ಸೆಕೆಂಡ್‌ ಇವರ ವೈಯಕ್ತಿಕ ಉತ್ತಮ ಓಟವಾಗಿದೆ. ಕೇವಲ ಎರಡು ವಾರಗಳಲ್ಲಿ ಅವರು ಮೂರನೇ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ್ದಾರೆ.
ಪ್ರಸಕ್ತ ವರ್ಷದ ಮೊದಲ ಸ್ಪರ್ಧೆಯಾದ ಪೊಲೆಂಡ್‌ನ ಪೊಜ್ನಾನ್‌ ಅಥ್ಲೆಟಿಕ್ಸ್‌ ಗ್ರಾಂಡ್‌ ಪ್ರಿಕ್ಸ್‌ನಲ್ಲಿ ಅಸ್ಸಾಂ ಓಟಗಾರ್ತಿ 200ಮೀ ವಿಭಾಗದಲ್ಲಿ 23.65ರಲ್ಲಿ ಪೂರ್ಣಗೊಳಿಸಿ ಚಿನ್ನದ ಪದಕ ಗೆದ್ದಿದ್ದರು. ಕಳೆದ ಭಾನುವಾರ ಪೊಲೆಂಡ್‌ನ ಕುಟ್ನೊ ಅಥ್ಲೆಟಿಕ್ಸ್‌ ಮೀಟ್‌ನಲ್ಲಿ 23.97 ಸೆಕೆಂಡ್‌ಗಳಲ್ಲಿ ಮುಗಿಸುವ ಮೂಲಕ ಸ್ವರ್ಣ ಪದಕ ತಮ್ಮದಾಗಿಸಿಕೊಂಡಿದ್ದರು.
ಪ್ರಸ್ತುತ ಕ್ಲಾಡ್ನೊ ಅಥ್ಲೆಟಿಕ್ಸ್‌ನಲ್ಲಿ ಭಾರತದ ವಿಪಿನ್‌ ಕಸಾನ, ಅಭಿಶೇಕ್‌ ಸಿಂಗ್‌ ಹಾಗೂ ದೇವೆಂದರ್‌ ಸಿಂಗ್‌ ಕಾಂಗ್‌ ಅವರು ಜಾವೆಲಿನ್‌ ಥ್ರೋ ಫೈನಲ್‌ನಲ್ಲಿ ಅಗ್ರ ಮೂರು ಸ್ಥಾನ ಪಡೆದಿದ್ದಾರೆ. ಇವರು ಕ್ರಮವಾಗಿ 82.51ಮೀ, 77.32ಮೀ ಹಾಗೂ 76.58ಮೀ ಜಾವೆಲಿನ್‌ ಎಸೆದಿದ್ದಾರೆ.
ಪುರುಷರ ಶಾಟ್‌ಪುಟ್‌ ವಿಭಾಗದಲ್ಲಿ ಭಾರತದ ತೇಜೆಂದರ್‌ ಪಾಲ್‌ ಸಿಂಗ್‌ ತೂರ್‌ ಅವರು 20.36 ಮೀ ಎಸೆಯುವ ಮೂಲಕ ಕಂಚಿನ ಪದಕಕ್ಕೆ ತೃಪ್ತರಾದರು.
ಮಹಿಳಾ ವಿಭಾಗದ 400ಮೀ ಓಟವನ್ನು ವಿ.ಕೆ ವಿಸ್ಮಯಾ ಅವರು 52.54 ಸೆಕೆಂಡ್‌ಗಳಲ್ಲಿ ಮುಗಿಸುವ ಮೂಲಕ 'ಎ' ರೇಸ್‌ ಗೆದ್ದರು. ಸರಿತಾಬೆನ್‌ ಅವರು (53.37) ಮೂರನೇ ಸ್ಥಾನ ಪಡೆದರು. ಯುಎನ್‌ಐ ಆರ್‌ಕೆ ಎಎಚ್‌ 1313