SportsPosted at: Nov 18 2019 6:25PM Shareದುಬೈನಲ್ಲಿ ವಿಜೇಂದರ್ - ಆದಾಮು ಸೆಣಸಾಟದುಬೈ, ನ.18 (ಯುಎನ್ಐ)- ಭಾರತದ ಸ್ಟಾರ್ ಬಾಕ್ಸರ್ ವಿಜೇಂದರ್ ಸಿಂಗ್ ನವೆಂಬರ್ 22 ರಂದು ಎರಡು ಬಾರಿ ಕಾಮನ್ವೆಲ್ತ್ ಸೂಪರ್ ಮಿಡಲ್ವೀಡ್ ಚಾಂಪಿಯನ್ ಚಾರ್ಲ್ಸ್ ಆದಮು ಅವರನ್ನು ದುಬೈನ ಕೆಜಾರ್ಸ್ ನಲ್ಲಿ ಎದುರಿಸಲಿದ್ದಾರೆ. ಚಾಂಪಿಯನ್ಶಿಪ್ನಲ್ಲಿ ವಿಶ್ವ ಬಾಕ್ಸರ್ಗಳಲ್ಲಿ ಡಬ್ಲ್ಯುಬಿಒ ವರ್ಲ್ಡ್ ಸೂಪರ್ ಲೈಟ್ವೈಟ್ ಕ್ಲಾಸ್ ನಂಬರ್ ಒನ್ ಜ್ಯಾಕ್ ಕ್ಯಾಟೆರಾಲ್, ಡಬ್ಲ್ಯುಬಿಒ ವರ್ಲ್ಡ್ ಬಾಂಟಮ್ವೈಟ್ ನಂಬರ್ -4 ಥಾಮಸ್ ಪ್ಯಾಟ್ರಿಕ್ ವಾರ್ಡ್ ಮತ್ತು ಇತರ ಬಾಕ್ಸರ್ಗಳು ಭಾಗವಹಿಸಲಿದ್ದಾರೆ. ಡಬ್ಲ್ಯುಬಿಒ ಏಷ್ಯಾ ಪೆಸಿಫಿಕ್ ಮತ್ತು ಓರಿಯಂಟಲ್ ಸೂಪರ್ ಮಾಡೆಲ್ ಚಾಂಪಿಯನ್ ವಿಜೇಂದರ್ ಸಿಂಗ್ 10 ಸುತ್ತಿನ ಪಂದ್ಯಗಳಲ್ಲಿ ಆದಮು ವಿರುದ್ಧ ಸೆಣಸಲಿದ್ದಾರೆ. 34 ವರ್ಷದ ಭಾರತೀಯ ಬಾಕ್ಸರ್ ವಿಜೇಂದರ್ ಈ ವರ್ಷದ ಜುಲೈನಲ್ಲಿ ಯುಎಸ್ ನಲ್ಲಿ ಮೈಕ್ ಸ್ನೈಡರ್ ಅವರನ್ನು ಸೋಲಿಸಿ ತಮ್ಮ ವೃತ್ತಿಜೀವನದ 11 ನೇ ಪಂದ್ಯವನ್ನು ಗೆದ್ದರು. “ಎರಡು ತಿಂಗಳ ಕಠಿಣ ತರಬೇತಿಯ ನಂತರ, ಗೆಲ್ಲಲು ಸಂಪೂರ್ಣವಾಗಿ ಸಿದ್ಧತೆ ನಡೆಸಿದ್ದೇನೆ. ಮುಂದಿನ ಪಂದ್ಯಗಳಿಗೆ ಈ ಪಂದ್ಯ ಸಹಾಯಕವಾಗಲಿದೆ. ದುಬೈನಲ್ಲಿ ನನ್ನ ಚೊಚ್ಚಲ ಪಂದ್ಯವು ರೋಚಕವಾಗಲಿದೆ. ಆದಮು ಬಹಳ ಅನುಭವಿ ಮತ್ತು ನನಗಿಂತ ಹೆಚ್ಚು ಪಂದ್ಯ ಆಡಿದ್ದಾರೆ” ಎಂದು ವಿಜೇಂದರ್ ಸಿಂಗ್ ತಿಳಿಸಿದ್ದಾರೆ. “ನಾನು ನನ್ನ ಅನುಭವವನ್ನು ವಿಜೇಂದರ್ ವಿರುದ್ಧ ಬಳಸುತ್ತೇನೆ. ಪಂದ್ಯದ ಮೊದಲು ನನ್ನ ವಿರೋಧದ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ನಾನು ಗುರುತಿಸುತ್ತೇನೆ. ಈ ಪಂದ್ಯವು ಸುಲಭವಲ್ಲ " ಎಂದು ಅದಮು ತಿಳಿಸಿದ್ದಾರೆ. ಯುಎನ್ಐ ವಿಎನ್ಎಲ್ 1824