Wednesday, May 27 2020 | Time 01:47 Hrs(IST)
  • ಬೆಂಗಳೂರು ಗಾಳಿ ಮಳೆಗೆ ಓರ್ವ ಯುವತಿ ಬಲಿ : ಧರೆಗುರುಳಿದ ಮರ,ವಿದ್ಯುತ್ ಕಂಬಗಳು
Parliament Share

ದುರ್ಬಲ ಆರ್ಥಿಕತೆ ಸದೃಢಗೊಳಿಸುವ ದಿಟ್ಟ ಕ್ರಮಗಳಿಂದ ಸರ್ಕಾರ ಪಲಾಯನ: ಚಿದಂಬರಂ

ದುರ್ಬಲ ಆರ್ಥಿಕತೆ ಸದೃಢಗೊಳಿಸುವ ದಿಟ್ಟ ಕ್ರಮಗಳಿಂದ ಸರ್ಕಾರ ಪಲಾಯನ: ಚಿದಂಬರಂ
ದುರ್ಬಲ ಆರ್ಥಿಕತೆ ಸದೃಢಗೊಳಿಸುವ ದಿಟ್ಟ ಕ್ರಮಗಳಿಂದ ಸರ್ಕಾರ ಪಲಾಯನ: ಚಿದಂಬರಂ

ನವದೆಹಲಿ ಜುಲೈ 11 (ಯುಎನ್‌ಐ) ಇತ್ತೀಚಿನ ಚುನಾವಣೆಗಳಲ್ಲಿ ಭಾರಿ ಜನಾದೇಶವನ್ನು ಪಡೆದಿದ್ದರೂ ಸಹ, ದುರ್ಬಲ ಆರ್ಥಿಕತೆಯನ್ನು ಸದೃಢಗೊಳಿಸುವ ದಿಟ್ಟ ಕ್ರಮಗಳಿಂದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪಲಾಯನ ಮಾಡುತ್ತಿದೆ ಎಂದು ಮಾಜಿ ಹಣಕಾಸು ಸಚಿವ ಮತ್ತು ಹಿರಿಯ ಕಾಂಗ್ರೆಸ್ ಸದಸ್ಯ ಪಿ.ಚಿದಂಬರಂ ಗುರುವಾರ ಹೇಳಿದ್ದಾರೆ.

ರಾಜ್ಯಸಭೆಯಲ್ಲಿ ಕೇಂದ್ರ ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಆರ್ಥಿಕತೆಯ ಸದ್ಯದ ಸ್ಥಿತಿ ತುಂಬಾ ದುರ್ಬಲವಾಗಿದೆ. ಏಕೆಂದರೆ ಕಳೆದ ಐದು ವರ್ಷಗಳಲ್ಲಿ ಸರ್ಕಾರ ಯಾವುದೇ ರಚನಾತ್ಮಕ ಸುಧಾರಣೆಗಳನ್ನು ಕೈಗೊಂಡಿಲ್ಲ, ಇದರಿಂದಾಗಿ ಆರ್ಥಿಕತೆಯ ಕೆಟ್ಟ ಸ್ಥಿತಿ ತಲುಪಿದೆ.ಕಳೆದ 20-25 ವರ್ಷಗಳಲ್ಲಿ ವಿದೇಶಿ ವಿನಿಮಯ ಕಾಯ್ದೆಯಡಿ ಪರವಾನಿಗೆ ಶಕೆ ಅಂತ್ಯ ಮತ್ತು ರಿಯಲ್‌ ಎಸ್ಟೇಟ್‌ ಕಾನೂನುಗಳಂತಹ ಕೇವಲ 11 'ರಚನಾತ್ಮಕ ಸುಧಾರಣೆಗಳು' (ಎಸ್‌ಎಫ್) ಇವೆ. ಈ ಪೈಕಿ ಹೆಚ್ಚಿನವುಗಳನ್ನು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸರ್ಕಾರದ ಅವಧಿಯಲ್ಲಿ ತರಲಾಗಿತ್ತು. ಕಳೆದ ಐದು ವರ್ಷಗಳಲ್ಲಿ ಯಾವುದೇ ರಚನಾತ್ಮಕ ಸುಧಾರಣೆ ಜಾರಿಗೆ ತಂದಿರುವುದು ನಾವು ನೋಡಿಲ್ಲ ಎಂದು ಚಿದಂಬರಂ ಹೇಳಿದರು.

ಆರ್ಥಿಕತೆಯನ್ನು ಬಲಪಡಿಸುವ ಅಗತ್ಯ ಕ್ರಮಗಳನ್ನು ಆರಂಭಿಸಲು ಸರ್ಕಾರ ವಿಫಲವಾಗಿದೆ ಎಂದ ಅವರು, ಲೋಕಸಭೆಯಲ್ಲಿ 303 ಸ್ಥಾನಗಳ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವ ಬಿಜೆಪಿ ಗೆ ಆರ್ಥಿಕತೆಯನ್ನು ಸದೃಢಗೊಳಿಸಲು ಬಿಗಿ ಕ್ರಮಗಳನ್ನು ತೆಗೆದುಕೊಳ್ಳಲು ಏಕೆ ಪಲಾಯನಗೈಯುತ್ತಿದೆ ಎಂದು ಆಶ್ಚರ್ಯ ವ್ಯಕ್ತಪಡಿಸಿದರು.

'ಯುಪಿಎ ಸರ್ಕಾರವು ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಬಿಗಿ ಕ್ರಮಗಳನ್ನು ತೆಗೆದುಕೊಂಡಿತು. ಕಾಂಗ್ರೆಸ್‌ 140 ಮತ್ತು 206 ಸ್ಥಾನಗಳನ್ನು ಹೊಂದಿದ್ದ ಸಂದರ್ಭದಲ್ಲೇ ಭಾರತೀಯ ಆರ್ಥಿಕತೆ ಸದೃಢತೆಗೆ ಅನೇಕ ರಚನಾತ್ಮಕ ಸುಧಾರಣೆಗಳನ್ನು ಜಾರಿಗೆ ತಂದಿತ್ತು. ಕಾಂಗ್ರೆಸ್‌ ಬಹುಮತ ಇದ್ದಿದ್ದರೆ ಮತ್ತಷ್ಟು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿತ್ತು ಎಂದು ಚಿದಂಬರಂ ಪ್ರತಿಕ್ರಿಯಿಸಿದ್ದಾರೆ.

2022 ಅಥವಾ 2023 ರ ವೇಳೆಗೆ 'ಮೂರು ಟ್ರಿಲಿಯನ್ ಡಾಲರ್ ಆರ್ಥಿಕತೆ'ಯಾಗಿ ಭಾರತ ಹೊರಹೊಮ್ಮುವ ಸರ್ಕಾರದ ಗುರಿಯ ಕುರಿತಂತೆ ಪ್ರಸ್ತಾಪಿಸಿದ ಅವರು, ಮೋದಿ ಸರ್ಕಾರ ಕೇವಲ ಹೆಮ್ಮೆಪಡುತ್ತಿದೆ, ಏಕೆಂದರೆ ಭಾರತದ ಆರ್ಥಿಕತೆಯು ಪ್ರತಿ ಆರು ವರ್ಷಗಳಿಗೊಮ್ಮೆ ಶೇ.12 ರಷ್ಟು ಬೆಳೆಯುತ್ತಿದೆ ಎಂದರು.

ಇದು ಸರಳ ಲೆಕ್ಕಾಚಾರ. ಇದರಲ್ಲಿ ಮಾಂತ್ರಿಕತೆ ಏನೂ ಇಲ್ಲ. ಕಳೆದ 20 ವರ್ಷಗಳಿಂದ ಇದು ಹೀಗೆಯೇ ನಡೆಯುತ್ತಿದೆ. ಚಂದ್ರಯಾನ್ ಚಂದ್ರನನ್ನು ತಲುವಂತೆ ಸರ್ಕಾರ ಆರ್ಥಿಕತೆಯನ್ನು ಪ್ರಸ್ತುತಪಡಿಸುತ್ತಿದೆ 'ಎಂದು ಚಿದಂಬರಂ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.

ಯುಎನ್‌ಐ ಎಸ್‌ಎಲ್ಎಸ್ ಕೆವಿಆರ್ 1550

There is no row at position 0.