Sunday, Mar 29 2020 | Time 00:45 Hrs(IST)
National Share

ದೇವಿಂದರ್ ಸಿಂಗ್‌ಗೆ ಉಗ್ರರ ನಂಟು: ಮೋದಿ, ಶಾ ಮೌನವೇಕೆ- ರಾಹುಲ್ ಗಾಂಧಿ ಪ್ರಶ್ನೆ

ನವದೆಹಲಿ, ಜನವರಿ 16 (ಯುಎನ್ಐ) ಜಮ್ಮು ಮತ್ತು ಕಾಶ್ಮೀರದಲ್ಲಿ ಇಬ್ಬರು ಹಿಜ್ಬುಲ್ ಮುಜಾಹಿದೀನ್ ಭಯೋತ್ಪಾದಕರೊಂದಿಗೆ ಬಂಧಿಸಲ್ಪಟ್ಟಿರುವ ಅಮಾನತುಗೊಂಡ ಡಿವೈಎಸ್‌ಪಿ ದೇವಿಂದರ್‌ ಸಿಂಗ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು ಪ್ರಶ್ನಿಸಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಗುರುವಾರ, ಭಾರತದ ವಿರುದ್ಧ ದೇಶದ್ರೋಹವೆಸಗಿರುವುದಕ್ಕಾಗಿ ಸಿಂಗ್‌ಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಜಮ್ಮು ಕಾಶ್ಮೀರ ಪೊಲೀಸರು ಯಾರನ್ನು ಮತ್ತು ಯಾಕಾಗಿ ರಕ್ಷಿಸುತ್ತಿದ್ದಾರೆ ? ಎಂದು ರಾಹುಲ್ ಪ್ರಶ್ನಿಸಿದರು. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟರ್‌ ಒಂದನ್ನು ಅಪ್‌ಲೋಡ್ ಮಾಡಿರುವ ರಾಹುಲ್ ಗಾಂಧಿ, ಪುಲ್ವಾಮಾ ದಾಳಿಯಲ್ಲಿ ದೇವಿಂದರ್ ಸಿಂಗ್ ಅವರ ಪಾತ್ರವೇನು ಮತ್ತು ಅವರು ಎಷ್ಟು ಭಯೋತ್ಪಾದಕರಿಗೆ ಸಹಾಯ ಮಾಡಿದ್ದಾರೆ ? ಎಂದು ಪ್ರಶ್ನಿಸಿದ್ದಾರೆ.
ಡಿವೈಎಸ್‌ಪಿ ದೇವಿಂದರ್ ಸಿಂಗ್ ಅವರು ಮೂವರು ಭಯೋತ್ಪಾದಕರಿಗೆ ತಮ್ಮ ಮನೆಯಲ್ಲಿ ಆಶ್ರಯ ನೀಡಿದ್ದಾರೆ. ಅವರನ್ನು ದೆಹಲಿಗೆ ಕರೆದೊಯ್ಯುತ್ತಿದ್ದಾಗ ಸಿಕ್ಕಿ ಬಿದ್ದಿದ್ದಾರೆ. ಅವರನ್ನು 6 ತಿಂಗಳೊಳಗೆ ತ್ವರಿತಗತಿ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಬೇಕು ಮತ್ತು ತಪ್ಪಿತಸ್ಥರಾಗಿದ್ದರೆ, ಅವರಿಗೆ ಭಾರತದ ವಿರುದ್ಧ ದೇಶದ್ರೋಹವೆಸಗಿದ ಕಾರಣಕ್ಕಾಗಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಗಾಂಧಿ ಟ್ವೀಟ್ ಮಾಡಿದ್ದಾರೆ.
'# ಟೆರರಿಸ್ಟ್‌ ದೇವಿಂದರ್‌ ಕವರ್‌ ಅಪ್' ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ರಾಹುಲ್ ಈ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ಭಯೋತ್ಪಾದಕ ಡಿಎಸ್‌ಪಿ ದೇವಿಂದರ್ ಸಿಂಗ್ ಬಗ್ಗೆ ಸರ್ಕಾರ ಮೌನವಾಗಿದೆ. ದೇವಿಂದರ್ ಸಿಂಗ್ ಬಗ್ಗೆ ಪ್ರಧಾನಿ, ಗೃಹ ಸಚಿವರು ಮತ್ತು ಎನ್ಎಸ್ಎ ಏಕೆ ಮೌನವಾಗಿದೆ? ಪುಲ್ವಾಮಾ ದಾಳಿಯಲ್ಲಿ ದೇವಿಂದರ್ ಸಿಂಗ್ ಪಾತ್ರವೇನು? ಅವರು ಎಷ್ಟು ಮಂದಿ ಭಯೋತ್ಪಾದಕರಿಗೆ ಸಹಾಯ ಮಾಡಿದ್ದಾರೆ? ಅವನನ್ನು ಯಾರು ರಕ್ಷಿಸುತ್ತಿದ್ದರು ಮತ್ತು ಏಕೆ? ಎಂದು ರಾಹುಲ್ ಪ್ರಶ್ನಿಸಿದ್ದಾರೆ.
ರಾಹುಲ್ ಅವರ ಸಹೋದರಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಕೂಡ ಈ ವಿಷಯದ ಬಗ್ಗೆ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಡಿಎಸ್‌ಪಿ ದೇವಿಂದರ್ ಸಿಂಗ್ ಅವರ ಬಂಧನವು ಭಾರತದ ರಾಷ್ಟ್ರೀಯ ಭದ್ರತೆಗೆ ನಿರ್ಣಾಯಕ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಅವರು ತನ್ನ ಕೆಲಸವಲ್ಲದೆ, ವಿದೇಶಿ ರಾಯಭಾರಿಗಳನ್ನು ಜಮ್ಮು ಕಾಶ್ಮೀರಕ್ಕೆ ಕರೆದೊಯ್ಯುವಂತಹ ಅತ್ಯಂತ ಸೂಕ್ಷ್ಮ ಕರ್ತವ್ಯಗಳನ್ನು ವಹಿಸಿಕೊಂಡಿದ್ದರು ಎಂಬುದು ವಿಚಿತ್ರವೆನಿಸುತ್ತದೆ. ಅವರು ಯಾರ ಆದೇಶದಡಿಯಲ್ಲಿ ಕೆಲಸ ಮಾಡುತ್ತಿದ್ದರು? ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕು. ಭಾರತದ ಮೇಲೆ ದಾಳಿ ನಡೆಸಲು ಭಯೋತ್ಪಾದಕರಿಗೆ ಸಹಾಯ ಮಾಡುವುದು ದೇಶದ್ರೋಹವಾಗಿದೆ ಎಂದು ಪ್ರಿಯಾಂಕಾ ಟ್ವೀಟ್ ಮಾಡಿದ್ದಾರೆ.
ಶ್ರೀನಗರ ವಿಮಾನ ನಿಲ್ದಾಣದಲ್ಲಿ ಕರ್ತವ್ಯಕ್ಕಾಗಿ ನೇಮಕಗೊಂಡಿದ್ದ ದೇವಿಂದರ್ ಸಿಂಗ್ ಅವರನ್ನು ದಕ್ಷಿಣ ಕಾಶ್ಮೀರ ಪ್ರದೇಶದಲ್ಲಿ ಇಬ್ಬರು ಹಿಜ್ಬುಲ್ ಭಯೋತ್ಪಾದಕರನ್ನು ಕರೆದೊಯ್ಯುತ್ತಿದ್ದಾಗ ಬಂಧಿಸಲಾಗಿತ್ತು.
ಈ ವಿಷಯದಲ್ಲಿ ದೊಡ್ಡ ಪಿತೂರಿ ಇದೆ ಎಂದು ಕಾಂಗ್ರೆಸ್ ಮಂಗಳವಾರ ಆರೋಪಿಸಿತ್ತು. ಈ ದೇವಿಂದರ್ ಸಿಂಗ್ ಯಾರು? ಹಿಜ್ಬುಲ್ ಮತ್ತು ಇತರ ಜಮ್ಮು ಮತ್ತು ಕಾಶ್ಮೀರ ಭಯೋತ್ಪಾದಕರೊಂದಿಗೆ ಅವರ ಸಂಪರ್ಕವೇನು? ಅವರು ಎಷ್ಟು ಸಮಯದವರೆಗೆ ಜಮ್ಮು ಮತ್ತು ಕಾಶ್ಮೀರ ಭಯೋತ್ಪಾದಕರ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಇತರ ಭಯೋತ್ಪಾದಕ ಕಾರ್ಖಾನೆಗಳೂ ಸಹಾಯಕರಾಗಿ ಕೆಲಸ ಮಾಡಿರಬಹುದೇ ? ಅವರು 2001 ರ ಸಂಸತ್ತಿನ ದಾಳಿ ಪ್ರಕರಣದಲ್ಲಿ ಸಂಪರ್ಕ ಹೊಂದಿಲ್ಲವೇ? 42 ಯೋಧರ ಸಾವಿಗೆ ಕಾರಣವಾದ ಪುಲ್ವಾಮಾ ದಾಳಿಯಲ್ಲಿ ಅವರ ಪಾತ್ರವೇನು ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ದೇವಿಂದರ್ ಸಿಂಗ್ 12 ಲಕ್ಷ ರೂ.ಗಳ ಬದಲು ಭಯೋತ್ಪಾದಕರನ್ನು ಕರೆದುಕೊಂಡು ಹೋಗಿದ್ದಾರೆ ಎಂಬ ಪೊಲೀಸರು ಮತ್ತು ಸರ್ಕಾರದ ವಾದವು "ಪೂರ್ವಭಾವಿ" ಎಂದು ಎಐಸಿಸಿ ಸಂವಹನ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಲಾ ಆರೋಪಿಸಿದ್ದಾರೆ.
ಯುಎನ್ಐ ಎಎಚ್ 2023
More News
ಕಾರ್ಮಿಕರ ಘನತೆಯನ್ನು ಕಾಪಾಡಿ; ಕೇಂದ್ರಕ್ಕೆ ರಾಹುಲ್ ಮನವಿ

ಕಾರ್ಮಿಕರ ಘನತೆಯನ್ನು ಕಾಪಾಡಿ; ಕೇಂದ್ರಕ್ಕೆ ರಾಹುಲ್ ಮನವಿ

28 Mar 2020 | 7:17 PM

ನವದೆಹಲಿ, ಮಾ 28 (ಯುಎನ್ಐ) ಕೊರೋನಾ ವೈರಸ್ ತಡೆಯಲು ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಣೆಯಿಂದ ಬೃಹತ್ ಸಂಖ್ಯೆ ಕಾರ್ಮಿಕರುತ ತಮ್ಮ ತವರೂರಿಗೆ ತೆರಳಲಾಗದೆ ಪರದಾಡುವಂತಾಗಿದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

 Sharesee more..
ಕೋವಿಡ್-19 ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ  ನೆರವು ನೀಡಿದ ಟಾಟಾ

ಕೋವಿಡ್-19 ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ ನೆರವು ನೀಡಿದ ಟಾಟಾ

28 Mar 2020 | 7:10 PM

ನವದೆಹಲಿ, ಮಾ 28 (ಯುಎನ್ಐ) ದೇಶದ ಮುಂಚೂಣಿಯ ಉದ್ಯಮ ಸಂಸ್ಥೆ ಟಾಟಾ ಟ್ರಸ್ಟ್, ದೇಶದ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ.ನೆರವು ನೀಡುವುದಾಗಿ ಘೋಷಿಸಿದೆ.

 Sharesee more..