Monday, Jul 22 2019 | Time 07:04 Hrs(IST)
  • ಶಾಸಕರು ರಾಜಕೀಯ ವ್ಯಭಿಚಾರ ಮಾಡಿದ್ದಾರೆ : ದಿನೇಶ್ ಗುಂಡೂರಾವ್ ಗಂಭೀರ ಆರೋಪ
National Share

ದ್ವಾರಕಾ: ಹಾಡಹಗಲೇ ಮಹಿಳೆಯ ಮೇಲೆ ಗುಂಡಿನ ದಾಳಿ

ನವದೆಹಲಿ, ಜುಲೈ 11 (ಯುಎನ್ಐ) ರಾಷ್ಟ್ರ ರಾಜಧಾನಿ ದೆಹಲಿ ಸ್ತ್ರೀಯರಿಗೆ ಸುರಕ್ಷಿತವಲ್ಲ ಎಂಬ ಕೂಗಿಗೆ ಪುಷ್ಟಿ ನೀಡುವಂತೆ ಆಗಾಗ ಅತ್ಯಾಚಾರ, ಕಗ್ಗೊಲೆ, ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳು ನಡೆಯುತ್ತಿರುತ್ತವೆ ಇದೀಗ ದ್ವಾರಕಾದಲ್ಲಿ ಹಾಡಹಗಲೇ ಮಹಿಳೆಯ ಮೇಲೆ ಗುಂಡು ಹಾರಿಸಲಾಗಿದ್ದು, ನಾಗರಿಕರನ್ನು ಬೆಚ್ಚಿಬೀಳಿಸಿದೆ
ಗುರುವಾರ ಬೆಳಗ್ಗೆ ಘಟನೆ ನಡೆದಿದ್ದು, ಗುಂಡೇಟಿಗೆ ತುತ್ತಾದ ಮಹಿಳೆಯನ್ನು ಕಿರಣ್ ಯಾದವ್ (30) ಎಂದು ಗುರುತಿಸಲಾಗಿದೆ
ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಕೊಂಡಿದ್ದ ಕಿರಣ್ ಯಾದವ್ ಸ್ವತಃ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಆಕೆಯನ್ನು ಹಿಂಬಾಲಿಸಿದ ದುಷ್ಕರ್ಮಿಗಳು ಮೆಟ್ರೋ ನಿಲ್ದಾಣದ ಸಮೀಪ ಎರಡು ಸುತ್ತು ಗುಂಡು ಹಾರಿಸಿ ಹತ್ಯೆಗೆ ಯತ್ನಿಸಿದ್ದಾರೆ.
ಕಿರಣ್ ಕತ್ತಿಗೆ ಗುಂಡು ತಗುಲಿದ್ದು, ಗಂಭೀರ ಸ್ಥಿತಿಯಲ್ಲಿರುವ ಆಕೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಲವು ವರ್ಷಗಳಿಂದ ಆಕೆ ಕೌಟುಂಬಿಕ ಸಮಸ್ಯೆ ಎದುರಿಸುತ್ತಿದ್ದರೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಯುಎನ್ಐ ಎಸ್ಎ ಎಸ್ಎಚ್ 1734