ನವದೆಹಲಿ, ಜುಲೈ 12 (ಯುಎನ್ಐ)- ದೇಶದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಬಹಳ ವೇಗವಾಗಿ ಹೆಚ್ಚುತ್ತಿವೆ. ಕಳೆದ 24 ಗಂಟೆಗಳಲ್ಲಿ 28 ಸಾವಿರಕ್ಕೂ ಅಧಿಕ ಪ್ರಕರಣ ದಾಖಲಾಗಿದ್ದು, ಸೋಂಕಿತರ ಸಂಖ್ಯೆ 8.50 ಲಕ್ಷದ ಸನಿಹ ತಲುಪಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಭಾನುವಾರ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಕಳೆದ ಒಂದು ದಿನದಲ್ಲಿ ದೇಶಾದ್ಯಂತ ಹೊಸದಾಗಿ 28,637 ಕೊರೊನಾ ಸೋಂಕಿನ ಪ್ರಕರಣಗಳು ವರದಿಯಾವೆ ಎಂದು ತಿಳಿಸಿದೆ.
ವೇಗವಾಗಿ ಬೆಳೆಯುತ್ತಿರುವ ಸೋಂಕಿನ ಪ್ರಕರಣಗಳಲ್ಲಿ ಆರೋಗ್ಯವಂತ ಜನರ ಸಂಖ್ಯೆಯೂ ನಿರಂತರವಾಗಿ ಹೆಚ್ಚುತ್ತಿದೆ ಎಂಬುದು ಸಮಾಧಾನಕರ ಸಂಗತಿಯಾಗಿದೆ. ಕಳೆದ 24 ಗಂಟೆಗಳಲ್ಲಿ 19,235 ರೋಗಿಗಳು ಗುಣಮುಖರಾಗಿದ್ದು, ಚೇತರಿಸಿಕೊಂಡ ಒಟ್ಟು ರೋಗಿಗಳ ಸಂಖ್ಯೆ 5,34,621 ಆಗಿದೆ. ದೇಶದಲ್ಲಿ ಪ್ರಸ್ತುತ 2,92,258 ಕೊರೊನಾ ಸೋಂಕಿನ ಸಕ್ರಿಯ ಪ್ರಕರಣಗಳಿವೆ. ಕಳೆದ 24 ಗಂಟೆಗಳಲ್ಲಿ 551 ಸಾವು ಸಂಭವಿಸಿದ್ದು, ಸಾವಿನ ಸಂಖ್ಯೆ 22,674 ಕ್ಕೆ ಏರಿದೆ.
ಕೊರೊನಾ ಸಾಂಕ್ರಾಮಿಕ ರೋಗದಿಂದ ಹೆಚ್ಚು ಹಾನಿಗೊಳಗಾದ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರವು ಮೊದಲ ಸ್ಥಾನದಲ್ಲಿದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2,46,600 ಕ್ಕೆ ತಲುಪಿದ್ದು, ಸತ್ತವರ ಸಂಖ್ಯೆ 10,116 ಕ್ಕೆ ಏರಿದೆ.
ತಮಿಳುನಾಡಿನಲ್ಲಿ 1,34,226 ಜನ ಸೋಂಕಿಗೆ ಒಳಗಾಗಿದ್ದು, ಮೃತ ಪಟ್ಟವರ ಸಂಖ್ಯೆ 1,898 ಕ್ಕೆ ಏರಿದೆ.
ಯುಎನ್ಐ ವಿಎನ್ಎಲ್ 1042