Wednesday, Feb 26 2020 | Time 10:41 Hrs(IST)
 • 2007ರಲ್ಲಿ ತಿಲಕ್‌ ನಗರದಲ್ಲಿ ಜೋಡಿ ಕೊಲೆ: ರವಿ ಪೂಜಾರಿ ತೀವ್ರ ವಿಚಾರಣೆ
 • "ಕೇಜ್ರಿವಾಲ್‌ ಹೊರಗೆ ಬನ್ನಿ, ನಮ್ಮೊಂದಿಗೆ ಮಾತನಾಡಿ" ಘೋಷಣೆಯೊಂದಿಗೆ ಮುಖ್ಯಮಂತ್ರಿ ಮನೆ ಮುಂದೆ ಪ್ರತಿಭಟನೆ: ಪೊಲೀಸರಿಂದ ತೆರವು
 • ಕಾಶ್ಮೀರದಲ್ಲಿ ಮೂವರು ಉಗ್ರರ ಮನೆಗಳ ಮೇಲೆ ಭದ್ರತಾ ಪಡೆಯಿಂದ ದಾಳಿ
 • ಬಾಲಾಕೋಟ್ ಸರ್ಜಿಕಲ್ ದಾಳಿಗೆ ವರ್ಷಪೂರ್ಣ
 • ಅಮೂಲ್ಯ ನಾಲ್ಕು ದಿನಗಳ ಕಾಲ ಪೊಲೀಸರ ವಶಕ್ಕೆ
 • ದೆಹಲಿ ಗಲಭೆ, ಹಿಂಸಾಚಾರ ಮೃತರ ಸಂಖ್ಯೆ 17 ಕ್ಕೆ ಏರಿಕೆ
 • ದೆಹಲಿ ಹಿಂಸಾಚಾರ ಹಿನ್ನೆಲೆ: ಹಿಂಸೆಗೆ ಪ್ರಚೋದಿಸುವ ಸುದ್ದಿ ಪ್ರಸಾರ ಮಾಡದಂತೆ ಟಿವಿ ವಾಹನಿಗಳಿಗೆ ಸರ್ಕಾರ ತಾಕೀತು
 • ದೆಹಲಿ ಹಿಂಸಾಚಾರ: ಕಪಿಲ್ ಮಿಶ್ರಾ ಬಂಧನಕ್ಕೆ ಸಿಪಿಐಎಂ ಒತ್ತಾಯ
 • ಗಾಯಾಳುಗಳ ಚಿಕಿತ್ಸೆಗೆ ಭದ್ರತೆ ಒದಗಿಸಿ ಮಧ್ಯರಾತ್ರಿ ದೆಹಲಿ ಹೈಕೋರ್ಟ್ ಆದೇಶ
 • ದೆಹಲಿ ಪೊಲೀಸರ ಹಿಂದೇಟಿಗೆ ಮಂಗಳೂರು ಗಲಭೆಯಲ್ಲಿ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸಿದ್ದೇ ಕಾರಣ: ರಾಜೀವ್ ಚಂದ್ರಶೇಖರ್
 • ಯುವತಿ ಮೇಲೆ ಶೂಟೌಟ್ ಮಾಡಿದ್ದ ಆರೋಪಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ
 • ಏರ್ ಇಂಡಿಯ ಖರೀದಿ ಪೈಪೋಟಿಗೆ ಅದಾನಿ ಗುಂಪು ?
 • ಇ ಪಿ ಎಫ್ ಅಡಿ ಡಿಸೆಂಬರ್ 2019 ರಲ್ಲಿ 7 8 ಲಕ್ಷ ಹೊಸ ಸೇರ್ಪಡೆ
 • ಪೂರ್ವ ಟರ್ಕಿಯಲ್ಲಿ 5 ತೀವ್ರತೆಯ ಭೂಕಂಪ
 • ಕರೋನಾ ಸೋಂಕು; ಚೈನಾದಲ್ಲಿ 2, 715ಕ್ಕೆ ಏರಿದ ಸಾವಿನ ಸಂಖ್ಯೆ, 29, 700 ಮಂದಿ ಚೇತರಿಕೆ
business economy Share

ದೇಶದ ಪ್ರಥಮ ಎಲೆಕ್ಟ್ರಿಕ್ ಇಂಟರ್ನೆಟ್‌ ಎಸ್‌ಯುವಿ ಝೆಡ್‌ಎಸ್‌ ಇವಿ ಕಾರು ಮಾರುಕಟ್ಟೆಗೆ

ದೇಶದ ಪ್ರಥಮ ಎಲೆಕ್ಟ್ರಿಕ್ ಇಂಟರ್ನೆಟ್‌ ಎಸ್‌ಯುವಿ ಝೆಡ್‌ಎಸ್‌ ಇವಿ ಕಾರು ಮಾರುಕಟ್ಟೆಗೆ
ದೇಶದ ಪ್ರಥಮ ಎಲೆಕ್ಟ್ರಿಕ್ ಇಂಟರ್ನೆಟ್‌ ಎಸ್‌ಯುವಿ ಝೆಡ್‌ಎಸ್‌ ಇವಿ ಕಾರು ಮಾರುಕಟ್ಟೆಗೆ

ಬೆಂಗಳೂರು, ಜ.24 (ಯುಎನ್ಐ) ಎಂಜಿ ಮೋಟಾರ್ ಇಂಡಿಯಾ ಬಹುನಿರೀಕ್ಷಿತ ಝೆಡ್‌ಎಸ್‌ ಇವಿ ಕಾರನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಇದು ಭಾರತದ ಮೊದಲ ಪರಿಪೂರ್ಣ ಎಲೆಕ್ಟ್ರಿಕ್‌ ಇಂಟರ್ನೆಟ್‌ ಎಸ್‌ಯುವಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

2020 ಜನವರಿ 17ರ ಮಧ್ಯರಾತ್ರಿಗೂ ಮೊದಲು ಬುಕ್‌ ಮಾಡಿದ ಗ್ರಾಹಕರು ಈ ಕಾರನ್ನು ಆರಂಭಿಕ ಬೆಲೆ ರೂ. 19.88 ಲಕ್ಷಕ್ಕೆ ಖರೀದಿಸಬಹುದಾಗಿದೆ. (ಎಕ್ಸ್‌ ಶೋರೂಮ್ ನವದೆಹಲಿ). ಝೆಡ್‌ಎಸ್‌ ಇವಿ ಎಕ್ಸೈಟ್‌ ಈಗ ರೂ. 20.88 ಲಕ್ಷದಲ್ಲಿ ಲಭ್ಯವಿದ್ದು, ಝೆಡ್‌ಎಸ್‌ ಇವಿ ಎಕ್ಸ್‌ಕ್ಲೂಸಿವ್‌ ರೂ. 23.58 ಲಕ್ಷದಲ್ಲಿ ಲಭ್ಯವಿದೆ.ಉತ್ತಮ ಮಾಲೀಕತ್ವ ಅನುಭವವನ್ನು ಒದಗಿಸುವ ಈ ಕಾರು ಸಂಸ್ಥೆಯ ಬದ್ಧತೆಗೆ ಪೂರಕವಾಗಿ ಎಂಜಿ ಇಶೀಲ್ಡ್‌ ಅನ್ನು ಪರಿಚಯಿಸಲಾಗಿದೆ. ಇದು ಉಚಿತವಾಗಿ 5 ವರ್ಷ ಉತ್ಪಾದಕರ ವಾರಂಟಿಯನ್ನು ಅನಿಯಮಿತ ಕಿಲೋಮೀಟರುಗಳಿಗೆ ಒದಗಿಸುತ್ತದೆ ಮತ್ತು ಬ್ಯಾಟರಿಯ ಮೇಲೆ 8 ವರ್ಷಗಳು/150 ಸಾವಿರ ಕಿ.ಮೀ ವಾರಂಟಿಯನ್ನು ನೀಡುತ್ತದೆ. ಖಾಸಗಿಯಾಗಿ ನೋಂದಣಿ ಮಾಡಿದ ಕಾರುಗಳಿಗೆ 5 ವರ್ಷಗಳವರೆಗೆ ಇದು ಇಡೀ ದಿನದ ರೋಡ್‌ಸೈಡ್ ಅಸಿಸ್ಟೆನ್ಸ್ (ಆರ್‌ಎಸ್‌ಎ) ಅನ್ನೂ ಒದಗಿಸುತ್ತದೆ ಮತ್ತು 5 ಕೂಲಿ ರಹಿತ ಸರ್ವೀಸ್‌ಗಳನ್ನೂ ಒದಗಿಸುತ್ತದೆ. ಝೆಡ್‌ಎಸ್‌ ಇವಿ ಪ್ರತಿ ಕಿ.ಮೀಗೆ 1 ರೂ. ವೆಚ್ಚದಲ್ಲಿ ಚಾಲನೆ ವೆಚ್ಚವನ್ನೂ ಹೊಂದಿದೆ (ಪಾರ್ಟ್‌ಗಳು, ಕನ್ಸ್ಯೂಮಬಲ್‌ಗಳು, ಲೇಬರ್ ಮತ್ತು ತೆರಿಗೆ ಸೇರಿದಂತೆ ಮುನ್ನೆಚ್ಚರಿಕೆ ನಿರ್ವಹಣೆಯೊಂದಿಗೆ 100,000 ಕಿಲೋಮೀಟರುಗಳವರೆಗೆ) 3 ವರ್ಷಗಳವರೆಗೆ ಮೇಂಟೆನೆನ್ಸ್‌ ಪ್ಯಾಕೇಜ್ ಆರಂಭಿಕ ಬೆಲೆ ರೂ. 7,700 ಕೂಡ ಇದರಲ್ಲಿ ಲಭ್ಯವಿದೆ.

ಎಂಜಿ ಇಶೀಲ್ಡ್ ಅನ್ನು ಪರಿಚಯಿಸುವುದರ ಜೊತೆಗೆ, ಝೆಡ್‌ಎಸ್ ಇವಿ ಗ್ರಾಹಕರಿಗೆ ಅನುಕೂಲಕರವಾಗಿ, "3-50" ಪ್ಲಾನ್ ಅನ್ನು ಕಂಪನಿ ಒದಗಿಸುತ್ತಿದೆ. ಇದರಲ್ಲಿ ಖಚಿತ ರಿಸೇಲ್ ಮೌಲ್ಯವಿದೆ ಮತ್ತು ಇದನ್ನು ಸಕಾರಣ ಮೊತ್ತ ಪಾವತಿ ಮಾಡಿ ಪಡೆಯಬಹುದು. ಕಾರು ಉತ್ಪಾದಕ ಸಂಸ್ಥೆಯು ಕಾರ್‌ ದೇಖೋ ಡಾಟ್ ಕಾಮ್‌ನೊಂದಿಗೆ ಪಾಲುದಾರಿಕೆ ಹೊಂದಿದ್ದು, ಮೂರು ವರ್ಷದ ಮಾಲೀಕತ್ವ ಪೂರ್ಣಗೊಂಡ ನಂತರ ಶೇ. 50 ರ ಮೌಲ್ಯದಲ್ಲಿ ಝೆಡ್‌ಎಸ್‌ ಇವಿ ಗ್ರಾಹಕರಿಂದ ಖಚಿತ ಖರೀದಿಯನ್ನು ಒದಗಿಸಲಿದೆ.

ಬೆಲೆ ಘೋಷಣೆಯ ಬಗ್ಗೆ ಮಾತನಾಡಿದ ಎಂಜಿ ಮೋಟಾರ್ ಇಂಡಿಯಾದ ಅಧ್ಯಕ್ಷ ಮತ್ತು ಎಂಡಿ ರಾಜೀವ್‌ ಚಾಬಾ, ಝೆಡ್‌ಎಸ್‌ ಇವಿ ಜಾಗತಿಕವಾಗಿ ಯಶಸ್ವಿ ಉತ್ಪನ್ನವಾಗಿದ್ದು, ಇವಿ ಸುಸ್ಥಿರತೆ, ಎಸ್‌ಯುವಿ ಪ್ರಾಯೋಗಿಕತೆ ಮತ್ತು ಸ್ಪೋರ್ಟ್ಸ್‌ ಕಾರ್‌ನ ಕಾರ್ಯಕ್ಷಮತೆಯನ್ನು ಇದು ಹೊಂದಿದೆ. ಇದು ಅತ್ಯಾಧುನಿಕ ಸೌಲಭ್ಯವನ್ನು ಮತ್ತು ತಾಂತ್ರಿಕ ಸಾಮರ್ಥ್ಯವನ್ನು ಉತ್ತಮ ಬೆಲೆಯಲ್ಲಿ ಹೊಂದಿದೆ. ಭಾರತವು ಎಲೆಕ್ಟ್ರಿಕ್‌ ಆಗಲು ಇನ್ನಷ್ಟು ಹೆಚ್ಚು ಗ್ರಾಹಕರಿಗೆ ಈ ಮೌಲ್ಯ ವರ್ಧನೆಯ ಪ್ರೋತ್ಸಾಹ ನೀಡಲಿದೆ ಎಂದು ನಾವು ಭಾವಿಸಿದ್ದೇವೆ. ಭಾರತದ ಇವಿ ವಲಯವನ್ನು ಸಶಕ್ತಗೊಳಿಸುವ ಪ್ರಕ್ರಿಯೆಯನ್ನು ನಾವು ಮುಂದುವರಿಸಲಿದ್ದು, ಉತ್ತಮ ಇವಿ ಟೆಕ್ನಾಲಜಿಯನ್ನು ಒದಗಿಸುತ್ತಿದ್ದೇವೆ ಮತ್ತು ದೇಶದ ಸಂಕೀರ್ಣ ಇವಿ ಮಾರುಕಟ್ಟೆಯಲ್ಲಿ ಸ್ಪರ್ಧೆ ಒಡ್ಡುತ್ತಿದ್ದೇವೆ ಎಂದರು.

ಯುಎನ್ಐ ಎಎಚ್ 1105

More News

ಕೌಶಲ ತರಬೇತಿ ಜೊತೆಗೆ ಇಂಜಿನಿಯರ್ ಗಳಿಗೆ ಕೆಲಸ

25 Feb 2020 | 11:55 AM

 Sharesee more..

ಹೆಚ್ಚಿದ ಚಿನ್ನದ ದರ

23 Feb 2020 | 10:13 PM

 Sharesee more..
ಪೆಟ್ರೋಲ್ ದರ ಏರಿಕೆ

ಪೆಟ್ರೋಲ್ ದರ ಏರಿಕೆ

23 Feb 2020 | 8:29 PM

ನವದೆಹಲಿ, ಫೆ 23 (ಯುಎನ್ಐ) ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಒಂದು ಬ್ಯಾರೆಲ್‌ ಕಚ್ಚಾ ತೈಲ ದರ 3,860 ರೂ ಇದ್ದು ದೇಶದಲ್ಲಿ ಹಲವು ದಿನಗಳಿಂದ ಇಳಿಕೆ ಕಂಡಿದ್ದ ಪೆಟ್ರೋಲ್‌ ದರ ಭಾನುವಾರ ಕೊಂಚ ಏರಿಕೆಯಾಗಿದೆ.

 Sharesee more..