Sunday, Jan 26 2020 | Time 23:43 Hrs(IST)
 • ‘ಪದ್ಮ ‘ ಪ್ರಶಸ್ತಿ ಪುರಸ್ಕೃತರಿಗೆ ನಳಿನ್‍ ಕುಮಾರ್ ಕಟೀಲ್‍ ಅಭಿನಂದನೆ
 • ರಣಜಿ ಟ್ರೋಫಿ: ಕರ್ನಾಟಕ ತಂಡಕ್ಕೆೆ ರೈಲ್ವೇಸ್ ಸವಾಲು
 • ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಬೀಗರಾಗಲಿರುವ ಕಾಂಗ್ರೆಸ್ ಶಾಸಕ ಕೃಷ್ಣಪ್ಪ
 • ಹಿಂಸಾಚಾರ ಯಾವುದೇ ಸಮಸ್ಯೆಗೆ ಪರಿಹಾರವಲ್ಲ; ಮೋದಿ
 • ಮಾಡಬಲ್ಲೆ ಎಂಬ ಛಲವಿದ್ದರೆ ಸಾಧನೆ ಸಾಧ್ಯ : ಪ್ರಧಾನಿ ಮೋದಿ
 • ಒಕ್ಕಲಿಗರು ಅಧಿಕಾರಕ್ಕೆ ಬರುವುದನ್ನು, ಹೋರಾಟ ಮಾಡುವುದನ್ನು ಬಿಜೆಪಿ ಸಹಿಸುವುದಿಲ್ಲ: ಕುಮಾರಸ್ವಾಮಿ ತಿರುಗೇಟು
 • ಸಂವಿಧಾನ ಅಪಾಯದ ಅಂಚಿನಲ್ಲಿದೆ : ಡಾ ಜಿ ಪರಮೇಶ್ವರ
 • ಕರೋನಾ ವೈರಸ್‌ : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪರೀಕ್ಷೆ ಕಾರ್ಯವ್ಯವಸ್ಥೆ
 • ರೈಲು ಅಪಘಾತ: ಪಂಜಾಬ್‍ ನಲ್ಲಿ ಜಮ್ಮು- ತಾವಿ ಎಕ್ಸ್‌ಪ್ರೆಸ್‌ನ ಎಂಜಿನ್ ಬೇರ್ಪಟ್ಟು ಒಬ್ಬ ವ್ಯಕ್ತಿ ಸಾವು
 • 'ಅಂಬಿಕಾತನಯದತ್ತ’ ರಾಷ್ಟ್ರೀಯ ಪ್ರಶಸ್ತಿಗೆ ಎಸ್‍ ಎಲ್‍ ಭೈರಪ್ಪ ಆಯ್ಕೆ
 • ಮಾಜಿ ಕ್ರಿಕೆಟಿಗ ವಸಂತ್‌ಗೆ 100ರ ಸಂಭ್ರಮ : ಶುಭಾಶಯ ಕೋರಿದ ಕ್ರಿಕೆಟ್ ದಂತಕತೆ
 • ಗೆಲುವಿಗೆ ಉಪಯುಕ್ತ ಕಾಣಿಕೆ ನೀಡಿದ ಬೌಲಿಂಗ್ ವಿಭಾಗವನ್ನು ಕೊಂಡಾಡಿದ ಕೊಹ್ಲಿ
 • ಗಣರಾಜ್ಯೋತ್ಸವದಂದು ಪ್ರಧಾನಿಗೆ ಸಂವಿಧಾನದ ಪ್ರತಿ ರವಾನಿಸಿದ ಕಾಂಗ್ರೆಸ್
 • ಮತ್ತೆ ಸಿಡಿದ ಕನ್ನಡಿಗ ರಾಹುಲ್ : ನ್ಯೂಜಿಲೆಂಡ್ ಎದುರು ಭಾರತಕ್ಕೆ ಎರಡನೇ ಜಯ
 • 100 ಪದವಿ ಪೂರ್ವ ವಸತಿ ಕಾಲೇಜುಗಳ‌ ಸ್ಥಾಪನೆ: ಗೋವಿಂದ ‌ಕಾರಜೋಳ
Parliament Share

ದೇಶಭ್ರಷ್ಟರ ಪ್ರಯಾಣ ಯೋಜನೆ ಪರಿಶೀಲಿಸಲು ಎಂಇಎ ಬಳಿ ಯಾವುದೇ ಮಾರ್ಗವಿಲ್ಲ; ಲೋಕಸಭೆ ಸರ್ಕಾರದ ಉತ್ತರ

ದೇಶಭ್ರಷ್ಟರ ಪ್ರಯಾಣ ಯೋಜನೆ ಪರಿಶೀಲಿಸಲು  ಎಂಇಎ ಬಳಿ ಯಾವುದೇ ಮಾರ್ಗವಿಲ್ಲ; ಲೋಕಸಭೆ ಸರ್ಕಾರದ ಉತ್ತರ
ದೇಶಭ್ರಷ್ಟರ ಪ್ರಯಾಣ ಯೋಜನೆ ಪರಿಶೀಲಿಸಲು ಎಂಇಎ ಬಳಿ ಯಾವುದೇ ಮಾರ್ಗವಿಲ್ಲ; ಲೋಕಸಭೆ ಸರ್ಕಾರದ ಉತ್ತರ

ನವದೆಹಲಿ, ಜುಲೈ 10( ಯುಎನ್ಐ) ದೇಶದಿಂದ ಪರಾರಿಯಾಗಿರುವ ಉದ್ಯಮಿ ನೀರವ್ ಮೋದಿ ಪ್ರಯಾಣ ಯೋಜನೆಗಳನ್ನು ಪರಿಶೀಲಿಸುವ ಯಾವುದೇ ಮಾರ್ಗಗಳನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೊಂದಿಲ್ಲ ಕೇಂದ್ರ ಸರ್ಕಾರ ಲೋಕಸಭೆಗೆ ತಿಳಿಸಿದೆ

ನೀರವ್ ಮೋದಿ ವಿದೇಶ ಪ್ರಯಾಣ ವಿವರ ಹಾಗೂ ಇಂತಹ ಪ್ರಯಾಣಗಳಿಗೆ ಬಳಸುವ ಪಾಸ್ ಪೋರ್ಟ್ ಗಳ ಪರಿಶೀಲಿಸುವ ಯಾವುದೇ ವ್ಯವಸ್ಥೆಯನ್ನು ಸಚಿವಾಲಯ ಹೊಂದಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ವಿ. ಮುರಳೀಧರನ್, ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಶಶಿ ತರೂರ್ ಅವರಿಗೆ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ

ದೇಶದಲ್ಲಿ ನಡೆಯುತ್ತಿರುವ ತನಿಖೆಗಳಿಂದ ತಪ್ಪಿಸಿಕೊಳ್ಳುವುದನ್ನು ತಡೆಯಲು ನೀರವ್ ಮೋದಿ ಅವರ ಪಾಸ್ ಪೋರ್ಟ್ ರದ್ದುಪಡಿಸಲಾಗಿದೆಯೇ ಎಂಬುದನ್ನು ತಿಳಿದುಕೊಳ್ಳಬೇಕಿದೆ ಎಂಬ ಶಶಿ ತರೂರ್ ಅವರ ಪ್ರಶ್ನಿಸಿದ್ದಾರೆ.

ನೀರವ್ ಮೋದಿ ಅವರ ಪಾಸ್ ಪೋರ್ಟ್ ಅನ್ನು ಸರ್ಕಾರ ರದ್ದು ಪಡಿಸಿದ್ದರೂ, ವಿದೇಶಗಳಲ್ಲಿ ಆತ ಹಲವಾರು ಬಾರಿ ಪ್ರಯಾಣಿಸುತ್ತಿದ್ದಾನೆ ಈ ಕುರಿತು ಸರ್ಕಾರ ಉತ್ತರಿಸಬೇಕು ಎಂದು ತರೂರ್ ಕೋರಿದ್ದರು.

ನೀರವ್ ಮೋದಿ ಅವರ ಪಾಸ್ ಪೋರ್ಟ್ ಅನ್ನು ವಿದೇಶಾಂಗ ಸಚಿವಾಲಯ 1967ರ ಪಾಸ್ ಪೋರ್ಟ್ ಕಾಯ್ದೆ ಸೆಕ್ಷನ್ 10(3) (ಸಿ) ನಿಬಂಧನೆಗಳಡಿ 2018ರ ಫೆಬ್ರವರಿ 23 ರಂದು ರದ್ದುಪಡಿಸಲಾಗಿದೆ ಎಂದು ಸಚಿವರು ಉತ್ತರಿಸಿದ್ದಾರೆ.

ಜೂನ್ 6 ರಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್, ದೇಶದಿಂದ ಪರಾರಿಯಾಗಿರುವ ಉದ್ಯಮದಾರರಾದ ವಿಜಯಮಲ್ಯ ಹಾಗೂ ನೀರವ್ ಮೋದಿ , ಮೆಹುಲ್ಚೋಸ್ಕಿ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಪರಾರಿಯಾಗಿರುವ ಆರ್ಥಿಕ ಅಪರಾಧಿಗಳನ್ನು ದೇಶಕ್ಕೆ ವಾಪಸ್ಸು ಕರೆತರುವ ನಮ್ಮ ಬದ್ದತೆ ಬಲವಾಗಿದೆ. ಈ ನಿಟ್ಟಿನಲ್ಲಿ ಕಾರ್ಯೋನ್ಮಖರಾಗಿದ್ದೇವೆ. ಈ ವಿಷಯದಲ್ಲಿ ನಾವು ಯಶಸ್ಸು ಸಾಧಿಸಲಿದ್ದೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದರು.

ಯುಎನ್ಐ ಕೆವಿಆರ್ ವಿಎನ್ 1803