Sunday, Sep 27 2020 | Time 03:15 Hrs(IST)
Entertainment Share

ದೋಸ್ತಾನಾಕ್ಕಿಂತ ಭಿನ್ನವಾದ ದೋಸ್ತಾನಾ-2: ಕರಣ್

ಮುಂಬೈ, ಡಿ 2 (ಯುಎನ್ಐ) ತಮ್ಮ ಸೂಪರ್ ಹಿಟ್ ದೋಸ್ತಾನಾ ಗಿಂತಲೂ ದೋಸ್ತಾನಾ-2 ಚಿತ್ರ ವಿಭಿನ್ನವಾಗಿರಲಿದೆ ಎಂದು ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ಅಭಿಪ್ರಾಯಪಟ್ಟಿದ್ದಾರೆ.
ಸದ್ಯ ಕರಣ್ ಜೋಹರ್, 2008ರಲ್ಲಿ ತೆರೆಕಂಡಿದ್ದ ದೋಸ್ತಾನಾ ಚಿತ್ರದ ಅವತರಣಿಕೆ ಚಿತ್ರ ಹೊರತರುವಲ್ಲಿ ಮಗ್ನರಾಗಿದ್ದಾರೆ.
ದೋಸ್ತಾನಾ ಚಿತ್ರದಲ್ಲಿ ನಟಿ ಪ್ರಿಯಾಂಕಾ ಚೋಪ್ರಾ, ನಟರಾದ ಜಾನ್ ಅಬ್ರಾಹಿಂ , ಅಭಿಷೇಕ್ ಬಚ್ಚನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದರು.
ಇತ್ತೀಚೆಗಷ್ಟೇ ದೋಸ್ತಾನಾ-2 ಚಿತ್ರದ ಚಿತ್ರೀಕರಣ ಪಂಜಾಬ್ ನಲ್ಲಿ ನಡೆದಿತ್ತು.
ದೋಸ್ತಾನಾ - 2 ಚಿತ್ರದ ಕುರಿತು ಮಾತನಾಡಿದ ಕರಣ್, ಒಂದು ದೋಸ್ತಾನಾವು ಇನ್ನೊಂದು ದೋಸ್ತಾನಾದ ಕಥೆಯಾಗಿದೆ. 2008ರಲ್ಲಿ ದೋಸ್ತಾನಾ ಬಿಡುಗಡೆಗೊಂಡಿದ್ದು, 2020ರಲ್ಲಿ ದೋಸ್ತಾನಾ -2 ಚಿತ್ರ ಬಿಡುಗಡೆಗೊಳ್ಳಲಿದೆ ಎಂದರು.
ಚಿತ್ರವನ್ನು ನೈಜವಾಗಿ ತೋರಿಸಲು ಪ್ರಯತ್ನಿಸುತ್ತಿದ್ದು, ನಾಟಕೀಯತೆಗೆ ಆಸ್ಪದ ಇಲ್ಲ ಎಂದು ಮಾಹಿತಿ ನೀಡಿದರು.
ಯುಎನ್ಐ ಪಿಕೆ ವಿಎನ್ 1801
More News
‘ಕಸ್ತೂರಿ ಮಹಲ್’ ಒಡತಿಯಾಗಿ ಶಾನ್ವಿ ಶ್ರೀವಾಸ್ತವ್

‘ಕಸ್ತೂರಿ ಮಹಲ್’ ಒಡತಿಯಾಗಿ ಶಾನ್ವಿ ಶ್ರೀವಾಸ್ತವ್

26 Sep 2020 | 8:33 PM

ಬೆಂಗಳೂರು, ಸೆ 26 (ಯುಎನ್‍ಐ) ಕಸ್ತೂರಿ ಮಹಲ್ ಚಿತ್ರಕ್ಕೆ ನಾಯಕಿಯಾಗಿ ಶಾನ್ವಿ ಶ್ರೀವಾಸ್ತವ್ ಆಯ್ಕೆಯಾಗಿದ್ದಾರೆ.

 Sharesee more..

ಹೊಟ್ಟೆನೋವು : ನಟ ಶರಣ್ ಆಸ್ಪತ್ರೆಗೆ ದಾಖಲು

26 Sep 2020 | 4:07 PM

 Sharesee more..

ಗಾನ ಸರಸ್ವತಿಯ ಮಡಿಲು ಸೇರಿದ ಸ್ವರ ಮಾಂತ್ರಿಕ

26 Sep 2020 | 12:47 PM

 Sharesee more..