Sunday, Mar 29 2020 | Time 00:00 Hrs(IST)
National Share

ದೆಹಲಿ ಮುಖ್ಯಮಂತ್ರಿಯಾಗಿ ಕೇಜ್ರೀವಾಲ್ ಪ್ರಮಾಣವಚನ; ಅಭಿವೃದ್ಧಿಯ ರಾಜಕಾರಣದ ಭರವಸೆ

ದೆಹಲಿ ಮುಖ್ಯಮಂತ್ರಿಯಾಗಿ ಕೇಜ್ರೀವಾಲ್ ಪ್ರಮಾಣವಚನ; ಅಭಿವೃದ್ಧಿಯ ರಾಜಕಾರಣದ ಭರವಸೆ
ದೆಹಲಿ ಮುಖ್ಯಮಂತ್ರಿಯಾಗಿ ಕೇಜ್ರೀವಾಲ್ ಪ್ರಮಾಣವಚನ; ಅಭಿವೃದ್ಧಿಯ ರಾಜಕಾರಣದ ಭರವಸೆ

ನವದೆಹಲಿ, ಫೆ 16 (ಯುಎನ್ಐ) ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ವಿರೋಚಿತ ಗೆಲುವು ಸಾಧಿಸಿದ ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರೀವಾಲ್ ಅವರು ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ವಿಧಾನಸಭಾ ಚುನಾವಣೆಯಿಂದ ಭಾರತಕ್ಕೆ ಹೊಸ ಬಗೆಯ ರಾಜಕಾರಣವನ್ನು ಪರಿಚಯಿಸಿದಂತಾಗಿದೆ.

ಇದು ಶಾಲೆಗಳು, ಆಸ್ಪತ್ರೆಗಳು, ನಿರಂತರ ಹಾಗೂ ಅಗ್ಗದ ವಿದ್ಯುತ್ ಪೂರೈಕೆ, ನೀರು ಪೂರೈಕೆ, ರಸ್ತೆಗಳು, ಮಹಿಳಾ ಸುರಕ್ಷತೆ, ಭ್ರಷ್ಟಾಚಾರ ಮುಕ್ತ ದೆಹಲಿಗೆ ಸಂಬಂಧಿಸಿದ ರಾಜಕಾರಣವಾಗಿದೆ. ಈ ಹೊಸ ರಾಜಕಾರಣ ದೇಶಾದ್ಯಂತ ಚರ್ಚೆ ನಡೆಯತ್ತಿದೆ ಎಂದರು.

ರಾಮಲೀಲಾ ಮೈದಾನದಲ್ಲಿ ನೆರೆದಿದ್ದ ಸಾವಿರಾರು ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶಾದ್ಯಂತ ರಾಜಕಾರಣಗಳು, ಸರ್ಕಾರಿ ಶಾಲೆಗಳನ್ನು ಸುಧಾರಿಸಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದರು. ಆದರೆ, ಈಗ ಜನರು ಕೇಜ್ರೀವಾಲ್ ಸರ್ಕಾರದ ಉದಾಹರಣೆ ನೀಡುವಂತಾಗಿದೆ ಎಂದರು.

ದೆಹಲಿ ಚುನಾವಣೆಯನ್ನು ಕೆಲಸ ಮತ್ತು ಕಾರ್ಯಕ್ಷಮತೆಯ ರಾಜಕಾರಣ ಎಂದು ಬಣ್ಣಿಸಿರುವ ಕೇಜ್ರೀವಾಲ್, ಈ ಕಾರ್ಯಕ್ರಮಕ್ಕೆ ತಾವು ಪ್ರಧಾನಿಯನ್ನು ಆಹ್ವಾನಿಸಿದ್ದೇವೆ. ಅವರು ಸಾಕಷ್ಟು ವ್ಯಸ್ತರಾಗಿದ್ದಾರೆ. ದೆಹಲಿಯ ಅಭಿವೃದ್ಧಿ ಮತ್ತು ಪ್ರಗತಿಗೆ ಕೆಲಸ ಮಾಡಲು ನಮಗೆ ಪ್ರಧಾನಿಯ ಆಶಿರ್ವಾದದ ಅಗತ್ಯವಿದೆ ಎಂದರು.

ತಮ್ಮ ಗೆಲುವನ್ನು ದೆಹಲಿಯ ಜನತೆಗೆ ಅರ್ಪಿಸಿದ ಅವರು, ನಾನು ಪ್ರತಿಯೊಬ್ಬರೊಂದಿಗೆ ಕೆಲಸ ಮಾಡಲು ಬಯಸುತ್ತೇನೆ. ನಾನು ಪ್ರತಿ ದೆಹಲಿಗನ ಮುಖ್ಯಮಂತ್ರಿ. ನೀವರೆಲ್ಲರೂ ನಮ್ಮ ಕುಟುಂಬ ಮತ್ತು ನಾನು ಯಾವುದೇ ವರ್ಗ, ಆರ್ಥಿಕ ಸ್ಥಿತಿಗತಿ, ಧರ್ಮ ಮತ್ತು ಜಾತಿಯನ್ನು ಲೆಕ್ಕಿಸದೆ ಕೆಲಸ ಮಾಡುತ್ತೇನೆ ಎಂದರು.

ಚುನಾವಣಾ ಪ್ರಚಾರದ ವೇಳೆ ತಮ್ಮ ಬಗ್ಗೆ ವಿಪಕ್ಷ ನಾಯಕರು ನೀಡಿರುವ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಅವರು, ಚುನಾವಣೆ ವೇಳೆ ಪಕ್ಷಗಳ ನಡುವೆ ಭಿನ್ನಾಭಿಪ್ರಾಯಗಳು ಸಹಜ. ನಾನು ಪ್ರತಿಯೊಬ್ಬರನ್ನೂ ಕ್ಷಮಿಸಿದ್ದೇನೆ. ವಿಪಕ್ಷಗಳು ಕೂಡ ಚುನಾವಣೆ ವೇಳೆ ನಡೆದದ್ದನ್ನು ಮರೆಯಬೇಕು ಎಂದು ಮನವಿ ಮಾಡುತ್ತೇನೆ ಎಂದರು.

ಕೇಜ್ರೀವಾಲ್ ನಿಮ್ಮ ಶ್ರವಣಕುಮಾರನಂತೆ. ಜಗತ್ತಿನಲ್ಲಿ ಅತ್ಯಂತ ಪ್ರಮುಖವಾಗಿರುವ ಎಲ್ಲವನ್ನೂ ಉಚಿತವಾಗಿ ನೀಡಲಿದ್ದೇನೆ. ಈಗ ಶಿಕ್ಷಣ ಹಾಗೂ ಆರೋಗ್ಯಕ್ಕೆ ದರ ನಿಗದಿಮಾಡುತ್ತೇನೆಯೇ? ಸಾಧ್ಯವೇ ಇಲ್ಲ ಎಂದರು.

ಪ್ರಮಾಣವಚನ ಸ್ವೀಕಾರಕ್ಕೂ ಮುನ್ನ ಕೇಜ್ರೀವಾಲ್ ಸಂಪುಟ ಸದಸ್ಯರ ಜೊತೆಗೆ ಸಭೆ ನಡೆಸಿದರು. ಯುಎನ್ ಐ ಎಸ್ಎಚ್ 1954

More News
ಕಾರ್ಮಿಕರ ಘನತೆಯನ್ನು ಕಾಪಾಡಿ; ಕೇಂದ್ರಕ್ಕೆ ರಾಹುಲ್ ಮನವಿ

ಕಾರ್ಮಿಕರ ಘನತೆಯನ್ನು ಕಾಪಾಡಿ; ಕೇಂದ್ರಕ್ಕೆ ರಾಹುಲ್ ಮನವಿ

28 Mar 2020 | 7:17 PM

ನವದೆಹಲಿ, ಮಾ 28 (ಯುಎನ್ಐ) ಕೊರೋನಾ ವೈರಸ್ ತಡೆಯಲು ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಣೆಯಿಂದ ಬೃಹತ್ ಸಂಖ್ಯೆ ಕಾರ್ಮಿಕರುತ ತಮ್ಮ ತವರೂರಿಗೆ ತೆರಳಲಾಗದೆ ಪರದಾಡುವಂತಾಗಿದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

 Sharesee more..
ಕೋವಿಡ್-19 ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ  ನೆರವು ನೀಡಿದ ಟಾಟಾ

ಕೋವಿಡ್-19 ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ ನೆರವು ನೀಡಿದ ಟಾಟಾ

28 Mar 2020 | 7:10 PM

ನವದೆಹಲಿ, ಮಾ 28 (ಯುಎನ್ಐ) ದೇಶದ ಮುಂಚೂಣಿಯ ಉದ್ಯಮ ಸಂಸ್ಥೆ ಟಾಟಾ ಟ್ರಸ್ಟ್, ದೇಶದ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ.ನೆರವು ನೀಡುವುದಾಗಿ ಘೋಷಿಸಿದೆ.

 Sharesee more..