Wednesday, Feb 26 2020 | Time 10:11 Hrs(IST)
  • ಅಮೂಲ್ಯ ನಾಲ್ಕು ದಿನಗಳ ಕಾಲ ಪೊಲೀಸರ ವಶಕ್ಕೆ
  • ದೆಹಲಿ ಗಲಭೆ, ಹಿಂಸಾಚಾರ ಮೃತರ ಸಂಖ್ಯೆ 17 ಕ್ಕೆ ಏರಿಕೆ
  • ದೆಹಲಿ ಹಿಂಸಾಚಾರ ಹಿನ್ನೆಲೆ: ಹಿಂಸೆಗೆ ಪ್ರಚೋದಿಸುವ ಸುದ್ದಿ ಪ್ರಸಾರ ಮಾಡದಂತೆ ಟಿವಿ ವಾಹನಿಗಳಿಗೆ ಸರ್ಕಾರ ತಾಕೀತು
  • ದೆಹಲಿ ಹಿಂಸಾಚಾರ: ಕಪಿಲ್ ಮಿಶ್ರಾ ಬಂಧನಕ್ಕೆ ಸಿಪಿಐಎಂ ಒತ್ತಾಯ
  • ಗಾಯಾಳುಗಳ ಚಿಕಿತ್ಸೆಗೆ ಭದ್ರತೆ ಒದಗಿಸಿ ಮಧ್ಯರಾತ್ರಿ ದೆಹಲಿ ಹೈಕೋರ್ಟ್ ಆದೇಶ
  • ದೆಹಲಿ ಪೊಲೀಸರ ಹಿಂದೇಟಿಗೆ ಮಂಗಳೂರು ಗಲಭೆಯಲ್ಲಿ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸಿದ್ದೇ ಕಾರಣ: ರಾಜೀವ್ ಚಂದ್ರಶೇಖರ್
  • ಯುವತಿ ಮೇಲೆ ಶೂಟೌಟ್ ಮಾಡಿದ್ದ ಆರೋಪಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ
  • ಏರ್ ಇಂಡಿಯ ಖರೀದಿ ಪೈಪೋಟಿಗೆ ಅದಾನಿ ಗುಂಪು ?
  • ಇ ಪಿ ಎಫ್ ಅಡಿ ಡಿಸೆಂಬರ್ 2019 ರಲ್ಲಿ 7 8 ಲಕ್ಷ ಹೊಸ ಸೇರ್ಪಡೆ
  • ಪೂರ್ವ ಟರ್ಕಿಯಲ್ಲಿ 5 ತೀವ್ರತೆಯ ಭೂಕಂಪ
  • ಕರೋನಾ ಸೋಂಕು; ಚೈನಾದಲ್ಲಿ 2, 715ಕ್ಕೆ ಏರಿದ ಸಾವಿನ ಸಂಖ್ಯೆ, 29, 700 ಮಂದಿ ಚೇತರಿಕೆ
  • ಕೊರೋನವೈರಸ್ ಮೇಲೆ ಸ್ಯಾನ್ ಫ್ರಾನ್ಸಿಸ್ಕೋ ಮೇಯರ್ ಲಂಡನ್ ಬ್ರೀಡ್ ತುರ್ತು ಪರಿಸ್ಥಿತಿ ಘೋಷಣೆ
  • ನಾಗರಿಕರು ದೇಶದಿಂದ ಹೊರ ಹೋಗದಂತೆ ಜೆಕ್ ರಿಪಬ್ಲಿಕ್ಪ್ರಧಾನಿ ಶಿಫಾರಸು
National Share

ದೆಹಲಿಯಲ್ಲಿ ಜ 4ರಿಂದ ವಿಶ್ವ ಪುಸ್ತಕ ಮೇಳ: ಪೊಖ್ರಿಯಾಲ್ ಉದ್ಘಾಟನೆ

ನವದೆಹಲಿ, ಜ2(ಯುಎನ್‍ಐ)- ನಗರದ ಪ್ರಗತಿ ಮೈದಾನದಲ್ಲಿ ಈ ತಿಂಗಳ 4ರಿಂದ 12ರವರೆಗೆ ನಡೆಯುವ ವಿಶ್ವ ಪುಸ್ತಕ ಮೇಳದ 28 ಆವೃತ್ತಿಯನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೊಖ್ರಿಯಾಲ್ ನಿಶಾಂಕ್ ಉದ್ಘಾಟಿಸಲಿದ್ದಾರೆ.
‘ಗಾಂಧಿ: ಲೇಖಕರ ಲೇಖಕ’ ಎಂಬುದು ವಿಶ್ವ ಪುಸ್ತಕ ಮೇಳದ ಘೋಷವಾಕ್ಯವಾಗಿದೆ ಎಂದು ರಾಷ್ಟ್ರೀಯ ಪುಸ್ತಕ ಟ್ರಸ್ಟ್(ಎನ್‍ಬಿಟಿ)ನ ಅಧ್ಯಕ್ಷ ಗೋವಿಂದ್ ಪ್ರಸಾದ್ ಶರ್ಮಾ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ಸಲದ ಪುಸ್ತಕ ಮೇಳದಲ್ಲಿ ಯಾವುದೇ ಅತಿಥಿ ದೇಶವಿರುವುದಿಲ್ಲ. ಮೇಳವು ಬೆಳಿಗ್ಗೆ 11ರಿಂದ ರಾತ್ರಿ 8ರವರೆಗೆ ತೆರೆಯಲಿದೆ. ಭಾರತೀಯ ಸಾಹಿತ್ಯ ಮತ್ತು ಭಾರತದ ಮತ್ತು ವಿದೇಶಗಳ ಕೆಲ ಪ್ರಮುಖ ಲೇಖಕರ ಮೇಲೆ ಮಹಾತ್ಮಗಾಂಧಿ ಅವರ ಪ್ರಭಾವವನ್ನು ಘೋಷವಾಕ್ಯ ಪ್ರಮುಖವಾಗಿ ಬೆಳಕು ಚೆಲ್ಲಲಿದೆ. ಮೇಳದಲ್ಲಿ ಭಾರತ ಮತ್ತು ವಿದೇಶಗಳ 600ಕ್ಕೂ ಹೆಚ್ಚು ಪ್ರಕಾಶನ ಸಂಸ್ಥೆಗಳ 1,300 ಮಳಿಗೆಗಳು ಇರಲಿವೆ. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ತಾನ ದೇಶಗಳನ್ನು ಮೇಳಕ್ಕೆ ಆಹ್ವಾನಿಸಿಲ್ಲ ಎಂದು ಅವರು ಹೇಳಿದ್ದಾರೆ.
ಭಾರತ, 2020ರ ಪ್ಯಾರಿಸ್ ಪುಸ್ತಕ ಮೇಳದ ಅತಿಥಿ ದೇಶವಾಗಿರಲಿದೆ. ಮಹಾತ್ಮಗಾಂಧೀಜಿ ಅವರ 150ನೇ ಜನ್ಮ ವರ್ಷಾಚರಣೆ ಅಂಗವಾಗಿ ಮೇಳದಲ್ಲಿ ಗಾಂಧಿ ಮಂಟಪ ಸ್ಥಾಪಿಸಲಾಗುವುದು. ಗಾಂಧೀಜಿ ಅವರು ಬರೆದಿರುವ ಪುಸ್ತಕಗಳು ಹಾಗೂ ವಿವಿಧ ಭಾಷೆಗಳಲ್ಲಿ ಪ್ರಕಟಗೊಂಡಿರುವ ಗಾಂಧೀಜಿ ಕುರಿತ ಪುಸ್ತಕಗಳನ್ನು ಮೇಳದಲ್ಲಿ ಪ್ರದರ್ಶಿಸಲಾಗುವುದು ಎಂದು ಶರ್ಮಾ ಹೇಳಿದರು.
ಯುಎನ್‍ಐ ಎಸ್‍ಎಲ್‍ಎಸ್ 1653