Sunday, Mar 29 2020 | Time 00:17 Hrs(IST)
Special Share

ದೆಹಲಿಯಲ್ಲಿ ನಮ್ಮ ಲೆಕ್ಕಾಚಾರ ತಲೆಕೆಳಗಾಯಿತು ; ಅಮಿತ್ ಶಾ

ನವದೆಹಲಿ, ಫೆ ೧೩ (ಯುಎನ್‌ಐ) ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಉಂಟಾಗಿರುವ ಸೋಲನ್ನು ತಾವು ಸ್ವೀಕರಿಸಿರುವುದಾಗಿ ಬಿಜೆಪಿ ಹಿರಿಯ ನಾಯಕ, ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಹೇಳಿದ್ದಾರೆ.
ಈ ಚುನಾವಣೆಯಲ್ಲಿ ತಮ್ಮ ಲೆಕ್ಕಾಚಾರಗಳು ತಲೆಕೆಳಗಾಗಿವೆ ಎಂದು ಅವರು ತಿಳಿಸಿದ್ದಾರೆ.
“ಟೈಮ್ಸ್ ನೌ ಸಮ್ಮಿಟ್” ನಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೆಲವು ಬಿಜೆಪಿ ನಾಯಕರು ನೀಡಿದ ಹೇಳಿಕೆಗಳ ಕಾರಣದಿಂದ ದೆಹಲಿ ಚುನಾವಣೆಯಲ್ಲಿ ಬಿಜೆಪಿ ನಷ್ಟ ಅನುಭವಿಸಬೇಕಾಯಿತು ಎಂದು ಅವರು ವಿಶ್ಲೇಷಿಸಿದ್ದಾರೆ..
‘ದೇಶ ದ್ರೋಹಿಗಳಿಗೆ ಗುಂಡಿಕ್ಕಿ’ ಎಂಬ ಹೇಳಿಕೆಗಳನ್ನು ಚುನಾವಣೆ ವೇಳೆ ನೀಡಬೇಕಾದ ಅಗತ್ಯವಿರಲಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದೇ ರೀತಿ ದೇಶಾದ್ಯಂತ ಪ್ರತಿಭಟನೆಗಳಿಗೆ ಕಾರಣವಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಯಾರು ಬೇಕಾದರೂ ತಮ್ಮೊಂದಿಗೆ ಚರ್ಚೆಗೆ ಬರಬಹುದು ಎಂದು ಆಹ್ವಾನ ನೀಡಿರುವ ಅಮಿತ್ ಶಾ ಇದಕ್ಕೆ ಮೂರು ದಿನಗಳ ಸಮಯ ನೀಡುವುದಾಗಿ ಹೇಳಿದ್ದಾರೆ.
ದೆಹಲಿ ಚುನಾವಣಾ ಪ್ರಚಾರದ ಭಾಗವಾಗಿ ... ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಭಯೋತ್ಪಾದಕ ಎಂದು ಬಿಜೆಪಿಯ ಹಲವು ನಾಯಕರು ಹೇಳಿಕೆ ನೀಡಿದ್ದರು. ಅದೇ ರೀತಿ ಸಿಎಎ ವಿರುದ್ದ ಶಾಹೀನ್ ಬಾಗ್ ನಲ್ಲಿ ಧರಣಿ, ಸತ್ಯಾಗ್ರಹ ನಡೆಸುತ್ತಿರುವರ ವಿರುದ್ದ ಹಲವು ಬಿಜೆಪಿ ಮುಖಂಡರು ಅನುಚಿತ ಹೇಳಿಕೆ ನೀಡಿದ್ದರು. ಆದರೆ. ಅರವಿಂದ್ ಕೇಜ್ರಿವಾಲ್ ಮಾತ್ರ ಬಿಜೆಪಿ ವಿರುದ್ದ ಟೀಕೆಗಳಿಗೆ ಪ್ರಾಧಾನ್ಯತೆ ನೀಡದೆ, ವಿವಾದಾಸ್ಪದ ವಿಷಯಗಳನ್ನು ಪ್ರಸ್ತಾಪಿಸದೆ, ತಾವು ಜಾರಿಗೊಳಿಸಿದ್ದ ಅಭಿವೃದ್ದಿ ಯೋಜನೆಗಳನ್ನು ಪ್ರಸ್ತಾಪಿಸಿ ಜನರಿಗೆ ಹತ್ತಿರವಾಗಲು ಯತ್ನಿಸಿ ಅಂತಿಮವಾಗಿ ಸಫಲವಾದರು. ಫೆಬ್ರವರಿ ೧೧ ರಂದು ಹೊರ ಬಿದ್ದ ಫಲಿತಾಂಶದಲ್ಲಿ ಆಮ್ ಆದ್ಮಿ ಪಕ್ಷ ಭರ್ಜರಿ ಜಯ ಸಾಧಿಸಿದೆ .. ಬಿಜೆಪಿಯ ಒಂದಂಕಿಗೆ ಸೀಮಿತಗೊಳ್ಳುವಂತಾಯಿತು. ೭೦ ಸ್ಥಾನಗಳಲ್ಲಿ ಎಎಪಿ ೬೨ ಸ್ಥಾನ ಗೆದ್ದಿದ್ದು, ಬಿಜೆಪಿ ೮ ಸ್ಥಾನಗಳಿಗೆ ಸೀಮಿತಗೊಂಡಿದೆ.
ಯುಎನ್‌ಐ ಕೆವಿಆರ್ ೨೦೩೦
More News

ಮೋದಿ ನಾಡಿನಲ್ಲೂ ಕರೋನ ಸೋಂಕಿಗೆ ನಾಲ್ವರ ಬಲಿ

28 Mar 2020 | 9:49 PM

 Sharesee more..
ಕೋವಿಡ್-19; 15 ಸಾವಿರ ಆಹಾರ ಪೊಟ್ಟಣ ವಿತರಿಸಿದ ಟಿಟಿಡಿ

ಕೋವಿಡ್-19; 15 ಸಾವಿರ ಆಹಾರ ಪೊಟ್ಟಣ ವಿತರಿಸಿದ ಟಿಟಿಡಿ

28 Mar 2020 | 9:36 PM

ತಿರುಪತಿ, ಮಾ 28 (ಯುಎನ್ಐ) ಕೊರೋನಾ ವೈರಸ್ ಸೋಂಕನ್ನು ತಡೆಯಲು ದೇಶಾದ್ಯಂತ ಲಾಕ್ ಡೌನ್ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಮನವಿಗೆ ಸ್ಪಂದಿಸಿರುವ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ), ವಸತಿರಹಿತರ ನೆರವಿಗೆ 15 ಸಾವಿರ ಪುಳಿಯೋಗರೆ ಪೊಟ್ಟಣಗಳನ್ನು ವಿತರಿಸಿದೆ.

 Sharesee more..
ಬಡವರಿಗೆ ಆಹಾರ ಒದಗಿಸಲು ನೆರವಾಗುವಂತೆ ಪರೋಪಕಾರಿಗಳಿಗೆ  ಡಿಜಿಪಿ ಪ್ರವೀಣ್ ಸೂದ್  ಮನವಿ

ಬಡವರಿಗೆ ಆಹಾರ ಒದಗಿಸಲು ನೆರವಾಗುವಂತೆ ಪರೋಪಕಾರಿಗಳಿಗೆ ಡಿಜಿಪಿ ಪ್ರವೀಣ್ ಸೂದ್ ಮನವಿ

28 Mar 2020 | 9:22 PM

ಬೆಂಗಳೂರು, ಮಾ ೨೮(ಯುಎನ್‌ಐ) ರಾಷ್ಟ್ರೀಯ ಲಾಕ್ ಡೌನ್ ಜಾರಿಗೊಳಿಸಿರುವ ಈ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಬಡವರಿಗೆ ಆಹಾರ ಒದಗಿಸಲು ಬಯಸುವ ಪರೋಪಕಾರಿಗಳು ಆಹಾರವನ್ನು ಸಮೀಪದ ಪೊಲೀಸ್ ಠಾಣೆಗಳಿಗೆ ತಲುಪಿಸಿದರೆ, ಅಗತ್ಯವಿರುವ ಜನರಿಗೆ ತಲುಪಿಸಲಾಗುವುದು ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಶನಿವಾರ ಮನವಿ ಮಾಡಿಕೊಂಡಿದ್ದಾರೆ.

 Sharesee more..
ಕಲ್ಲಿದ್ದಲು ಸುಗಮ ಸರಬರಾಜಿಗೆ  ಸಕಲ ಕ್ರಮ; ಸಚಿವ ಪ್ರಹ್ಲಾದ್ ಜೋಷಿ

ಕಲ್ಲಿದ್ದಲು ಸುಗಮ ಸರಬರಾಜಿಗೆ ಸಕಲ ಕ್ರಮ; ಸಚಿವ ಪ್ರಹ್ಲಾದ್ ಜೋಷಿ

28 Mar 2020 | 7:27 PM

ನವದೆಹಲಿ, ಮಾ 28 (ಯುಎನ್‌ಐ) ದೇಶದಲ್ಲಿ ಕಲ್ಲಿದ್ದಲು ಸರಬರಾಜನ್ನು ಅತ್ಯಗತ್ಯ ಸೇವೆ ಎಂದು ಘೋಷಿಸಲಾಗಿದ್ದು, ಲಾಕ್‌ ಡೌನ್ ಅವಧಿಯಲ್ಲಿ ನಿರ್ಣಾಯಕ ಕಲ್ಲಿದ್ದಲು ಪೂರೈಕೆಯನ್ನು ಖಾತರಿ ಪಡಿಸಲು ಅಹರ್ನಿಶಿ ಶ್ರಮಿಸುವಂತೆ ಸಚಿವಾಲಯದ ಎಲ್ಲ ಅಧಿಕಾರಿ, ಸಿಬ್ಬಂದಿಗೆ ಕೇಂದ್ರ ಕಲ್ಲಿದ್ದಲು ಖಾತೆ ಸಚಿವ ಪ್ರಲ್ಹಾದ್ ಜೋಶಿ ಅವರು ಶನಿವಾರ ನಿರ್ದೇಶನ ನೀಡಿದ್ದಾರೆ.

 Sharesee more..