Wednesday, Jan 29 2020 | Time 13:56 Hrs(IST)
 • ಒಡಿಶಾದಲ್ಲಿ ಭೀಕರ ರಸ್ತೆ ಅಪಘಾತ: ಎಂಟು ಮಂದಿ ಸಾವು, 40 ಜನರಿಗೆ ಗಾಯ
 • ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ‌ ನಾನಲ್ಲ: ಡಿ ಕೆ ಶಿವಕುಮಾರ್
 • ಕೇರಳ ವಿಧಾನಸಭೆಯಲ್ಲಿ ಮತ್ತೆ ಸಿಎಎ ಕಲಹ: ರಾಜ್ಯಪಾಲರ ಆಗಮನಕ್ಕೆ ತಡೆ ಒಡ್ಡಿದ ವಿಪಕ್ಷ ಸದಸ್ಯರು
 • ಕೆಪಿಸಿಸಿ ಅಧ್ಯಕ್ಷರ ನೇಮಕ ಮಾಡುವಂತೆ ನಾವು ಒತ್ತಡ ಹಾಕುತ್ತೇವೆ : ಡಾ ಜಿ ಪರಮೇಶ್ವರ್
 • ಹಾಕಿ: ಭಾರತ ವನಿತೆಯರಿಗೆ ನ್ಯೂಜಿಲೆಂಡ್ ವಿರುದ್ಧ ಎರಡನೇ ಸೋಲು
 • ಟಿಸಿಐ ಎಕ್ಸ್ ಪ್ರೆಸ್ ಸಂಸ್ಥೆಯ ತ್ರೈಮಾಸಿಕ ಹಣಕಾಸು ಸಾಧನೆ ಪ್ರಕಟ: 26 ಕೋಟಿ ರೂ ನಿವ್ವಳ ಲಾಭ
 • ಬಿಜೆಪಿ ಸೇರಿದ ಬ್ಯಾಡ್ಮಿಂಟನ್ ಚಾಂಪಿಯನ್ ಸೈನಾ ನೆಹ್ವಾಲ್
 • ಆಸ್ಟ್ರೇಲಿಯಾ ಓಪನ್: ಮೊದಲ ಬಾರಿ ಗ್ರ್ಯಾನ್ ಸ್ಲ್ಯಾಮ್ ಸೆಮಿಫೈನಲ್ ತಲುಪಿದ ಜ್ವೆರೆವ್
 • ರೌಡಿಶೀಟರ್ ಹತ್ಯೆಗೈದಿದ್ದ ಒಂಭತ್ತು ಜನರ ಬಂಧನ
 • ಕರೊನಾ ವೈರಸ್ ನಿಗ್ರಹಕ್ಕೆ “ತಾರಾ ಮಂತ್ರ” ದಿಂದ ಬ್ರಹ್ಮಾಂಡ ಪರಿಹಾರ; ದಲಾಯಿ ಲಾಮಾ ಸಲಹೆ
 • ಕಾಶ್ಮೀರದಲ್ಲಿ ಹೈಸ್ಪೀಡ್, ಬ್ರಾಡ್‌ಬ್ಯಾಂಡ್ ಇಂಟರ್‌ನೆಟ್‌ ಸ್ಥಗಿತ ಮುಂದುವರಿಕೆ
 • ಮೂರನೇ ಟಿ-20 ಪಂದ್ಯ: ಟಾಸ್ ಗೆದ್ದು ಪೀಲ್ಡಿಂಗ್ ಆಯ್ದುಕೊಂಡ ನ್ಯೂಜಿಲೆಂಡ್
 • ದಲಿತರಿಗೆ ಹಿಂದೂ ಸ್ಮಶಾನದಲ್ಲಿ ಅವಕಾಶ ನಿರಾಕರಣೆ: ಸಿದ್ದರಾಮಯ್ಯ ಕಿಡಿ
 • ಪುಸ್ತಕ ಪ್ರೇಮಿಗಳಾಗಿ, ಜ್ಞಾನಾರ್ಜನೆ ಮಾಡಿಕೊಳ್ಳಿ ಸಿಎಂ ಮಮತಾ ಕಿವಿಮಾತು
 • ನೂತನ ವಿದೇಶಾಂಗ ಕಾರ್ಯದರ್ಶಿಯಾಗಿ ಹರ್ಷವರ್ಧನ್ ಶ್ರಿಂಗ್ಲಾ ಅಧಿಕಾರ ಸ್ವೀಕಾರ
National Share

ದೆಹಲಿಯಲ್ಲಿ ಭೀಕರ ಅಗ್ನಿದುರಂತ : ಮೃತರ ಸಂಖ್ಯೆ 43ಕ್ಕೆ ಏರಿಕೆ

ದೆಹಲಿಯಲ್ಲಿ ಭೀಕರ ಅಗ್ನಿದುರಂತ : ಮೃತರ ಸಂಖ್ಯೆ  43ಕ್ಕೆ ಏರಿಕೆ
ದೆಹಲಿಯಲ್ಲಿ ಭೀಕರ ಅಗ್ನಿದುರಂತ : ಮೃತರ ಸಂಖ್ಯೆ 43ಕ್ಕೆ ಏರಿಕೆ

ನವದೆಹಲಿ, ಡಿಸೆಂಬರ್ 8 (ಯುಎನ್‌ಐ) ದೆಹಲಿಯ ಅನಾಜ್ ಮಂಡಿಯಲ್ಲಿನ ಕಟ್ಟಡವೊಂದರಲ್ಲಿ ಇಂದು ಸಂಭವಿಸಿದ ಭಾರಿ, ಬೀಕರ ಅಗ್ನಿ ದುರಂತದಲ್ಲಿ ಕನಿಷ್ಠ 43 ಮಂದಿ ಮೃತಪಟ್ಟಿದ್ದಾರೆ.

ಬೆಂಕಿ ನಂದಿಸಲು 25 ಅಗ್ನಿಶಾಮಕಯಂತ್ರಗಳು ಶ್ರಮಿಸಿದ್ದು ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದೆ ಎಂದು ಅಗ್ನಿಶಾಮಕ ಸೇವೆಗಳ ಮುಖ್ಯಸ್ಥ ಅತುಲ್ ಗರ್ಗ್ ತಿಳಿಸಿದ್ದಾರೆ.

50 ಕ್ಕೂ ಹೆಚ್ಚು ಜನರನ್ನು ಕಟ್ಟಡದಿಂದ ಹೊರಕ್ಕೆ ಕರೆತರಲಾಗಿದೆ ಎಂದು ಅವರು ಹೇಳಿದರು.

ಅನೇಕರು ಉಸಿರುಗಟ್ಟಿ ಅಸುನೀಗಿದ್ದು ಗಾಯಾಳುಗಳನ್ನು ಸಮೀಪದ ಲೋಕ್ ನಾಯಕ್ ಜೈಪ್ರಕಾಶ್ ಮತ್ತು ಹಿಂದೂ ರಾವ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಆರಂಭದಲ್ಲಿ ಅಪಘಾತದಿಂದ 30 ಜನರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿತ್ತು ನಂತರ ಸಾವಿನ ಸಂಖ್ಯೆ ಹೆಚ್ಚಾಗಿದ್ದು ದುರಂತ ಕನಿಷ್ಠ 43 ಜನರನ್ನು ಬಲಿ ತೆಗೆದುಕೊಂಡಿದೆ.

ಅಗ್ನಿಶಾಮಕ ಇಲಾಖೆಯ ಮೂಲಗಳ ಪ್ರಕಾರ, ಘಟನೆ ಬೆಳಿಗ್ಗೆ 0520 ವೆಳೆಗೆ ವರದಿಯಾಗಿದೆ. ದ ಕೂಡಲೇ ಅಗ್ನಿಶಾಮಕ ದಳದ 25 ಯಂತ್ರಗಳು ಧಾವಿಸಿವೆ.

ಪ್ರಧಾನಿ ನರೇಂದ್ರ ಮೋದಿ ಅವರು ಈ ಘಟನೆಯನ್ನೂ ಅತ್ಯಂತ ಭಯಾನಕ" ಎಂದು ಬಣ್ಣಿಸಿದ್ದಾರೆ ಮತ್ತು ಗಾಯಾಳುಗಳು "ಶೀಘ್ರವಾಗಿ ಚೇತರಿಸಿಕೊಳ್ಳಲಿ" ಎಂದು ಹಾರೈಸಿ, ಸ್ಥಳದಲ್ಲಿ ಅಧಿಕಾರಿಗಳು ಸಾಧ್ಯವಿರುವ ಎಲ್ಲ ಸಹಾಯ ನೀಡಲಿದ್ದಾರೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಕೇಂದ್ರ ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪುರಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡ ಸ್ಥಳಕ್ಕೆ ಭೇಟಿ ನೀಡಿದ್ದಾರೆ ಅಪಘಾತದ ನಿಖರ ಕಾರಣವನ್ನು ಇನ್ನೂ ಗೊತ್ತಾಗಿಲ್ಲ ಎಂದು ಮುಖ್ಯಮಂತ್ರಿ ನಂತರ ಸುದ್ದಿಗಾರರಿಗೆ ತಿಳಿಸಿದರು.

1997 ರಲ್ಲಿ ನವದೆಹಲಿಯ ಚಿತ್ರಮಂದಿರದಲ್ಲಿ ಸಂಭವಿಸಿದ ಬೆಂಕಿಯಲ್ಲಿ 59 ಜನರು ಸಾವನ್ನಪ್ಪಿದ್ದರು.

ಈ ವರ್ಷದ ಫೆಬ್ರವರಿಯಲ್ಲಿ ಆರು ಅಂತಸ್ತಿನ ಹೋಟೆಲ್‌ನಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ ಕನಿಷ್ಠ 17 ಜನರು ಸಾವನ್ನಪ್ಪಿದ್ದರು.

ಘನಟೆಯ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂತಾಪ ವ್ಯಕ್ತಪಡಿಸಿದ್ದಾರೆ.ಅಗ್ನಿ ದುರಂತಕ್ಕೆ ಅಮೂಲ್ಯ ಜೀವಗಳು ಬಲಿಯಾಗಿರುವುದು ನೋವಿನ ಘಟನೆ ಎಂದು ಅವರು ಶೋಕ ವ್ಯಕ್ತಪಡಿಸಿ, ಗಾಯಗೊಂಡವರು ಬೇಗ ಚೇತರಿಕೆಯಾಗಲಿ ಎಂದೂ ಅವರು ಪ್ರಾರ್ಥಿಸಿದ್ದಾರೆ .

ಯುಎನ್ಐ ಕೆಎಸ್ಆರ್ 1220