Friday, Feb 28 2020 | Time 09:15 Hrs(IST)
  • ದಕ್ಷಿಣ ಕೊರಿಯಾದಲ್ಲಿ ಮತ್ತೆ 256 ಕೊರೊನಾ ಸೋಂಕು ಪ್ರಕರಣ ದಾಖಲು
  • ಕೊರೊನಾ ಸೋಂಕು : ಹಜ್ ಯಾತ್ರೆಗೆ ನಿರ್ಬಂಧ
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
National Share

ದೆಹಲಿಯಲ್ಲಿ ಮತ್ತೆ ಬೆಂಕಿ ದುರಂತ: ಒಬ್ಬನ ಸಾವು

ನವದೆಹಲಿ, ಜನವರಿ 9(ಯುಎನ್ಐ ) ಪೂರ್ವ ದೆಹಲಿಯ ಪತ್ ಪರ್ ಗಂಜ್ ಕೈಗಾರಿಕಾ ಪ್ರದೇಶದಲ್ಲಿ ಇಂದು ಮುಂಜಾನೆ ಬೆಂಕಿ ದುರಂತದಲ್ಲಿ ,ಒಬ್ಬ ವ್ಯಕ್ತಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆಂದು ಮಾಧ್ಯಮದ ವರದಿ ತಿಳಿಸಿದೆ.
ಸ್ಥಳಕ್ಕೆ 32 ಅಗ್ನಿಶಾಮಕ ವಾಹನಗಳು ದೌಡಾಯಿಸಿದ್ದು , ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ.
ಪತ್ ಪರ್ ಗಂಜ್ ಕೈಗಾರಿಕಾ ಪ್ರದೇಶದ ಪೇಪರ್ ಪ್ರಿಂಟಿಗ್ ಪ್ರೆಸ್ ನಲ್ಲಿ ಈ ಅಗ್ನಿ ದುರಂತ ಸಂಭವಿಸಿದ್ದು ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ವಾರದ ಹಿಂದೆ ದೆಹಲಿಯ ಪಿರಾಗ್ರಹಿ ಇನ್ ವರ್ಟರ್ ಬ್ಯಾಟರಿ ಉತ್ಪಾದನಾ ಘಟಕದಲ್ಲಿ ಬೆಂಕಿ ಅವಘಡ ಕಾಣಿಸಿಕೊಂಡು ರಕ್ಷಣಾ ಕಾರ್ಯಕ್ಕೆ ತೆರಳಿದ್ದ ಓರ್ವ ಅಗ್ನಿಶಾಮಕ ಸಿಬ್ಬಂದಿ ಸಾವನ್ನಪ್ಪಿ, 14 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಆ ಘಟನೆಯಲ್ಲಿ ಸ್ಪೋಟ ಸಂಭವಿಸಿ ಕಟ್ಟಡದ ಭಾಗವೊಂದು ಭಾಗಶಃ ಕುಸಿದಿತ್ತು.
ದೆಹಲಿಯಲ್ಲಿ ಪದೆ ಪದೆ ಅಗ್ನಿ ಅವಗಡಗಳು ಸಂಭವಿಸಿ ಪ್ರಾಣಹಾನಿ ವರದಿಯಾಗುತ್ತಲೇ ಇದೆ , ಕಳದೆ ಒಂದು ತಿಂಗಳ ಅವಧಿಯಲ್ಲಿ ಇದು ಮೂರನೆ ದುರ್ಘಟನೆಯಾಗಿದೆ.
ಯುಎನ್‌ಐ ಕೆಎಸ್ಆರ್ 0920