Friday, Feb 28 2020 | Time 09:35 Hrs(IST)
  • ದೀರ್ಘಾವಧಿ ಬಳಿಕ ರಾಷ್ಟ್ರೀಯ ಫುಟ್ಬಾಲ್ ಶಿಬಿರಕ್ಕೆ ಮರಳಿದ ಸಂದೇಶ್‌, ಜೆಜೆ
  • ದಕ್ಷಿಣ ಕೊರಿಯಾದಲ್ಲಿ ಮತ್ತೆ 256 ಕೊರೊನಾ ಸೋಂಕು ಪ್ರಕರಣ ದಾಖಲು
  • ಕೊರೊನಾ ಸೋಂಕು : ಹಜ್ ಯಾತ್ರೆಗೆ ನಿರ್ಬಂಧ
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
National Share

ದೆಹಲಿ ವಿಧಾನಸಭಾ ಚುನಾವಣೆ; ಎಲ್ಲಾ 70 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದ ಎಎಪಿ

ದೆಹಲಿ ವಿಧಾನಸಭಾ ಚುನಾವಣೆ; ಎಲ್ಲಾ 70 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದ ಎಎಪಿ
ದೆಹಲಿ ವಿಧಾನಸಭಾ ಚುನಾವಣೆ; ಎಲ್ಲಾ 70 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದ ಎಎಪಿ

ನವದೆಹಲಿ, ಜ.14 (ಯುಎನ್ಐ) ಮತದಾನ ಅಧಿಸೂಚನೆ ಹೊರಡಿಸಿದ ಕೆಲವೇ ಗಂಟೆಗಳಲ್ಲಿ, ಆಡಳಿತಾರೂಢ ಆಮ್ ಆದ್ಮಿ ಪಕ್ಷವು ಮಂಗಳವಾರ, ಫೆಬ್ರವರಿ 8ರಂದು ನಡೆಯಲಿರುವ ಎಲ್ಲಾ 70 ವಿಧಾನಸಭಾ ಕ್ಷೇತ್ರಗಳ ಚುನಾವಣೆಯಿಂದ ತನ್ನ ಅಭ್ಯರ್ಥಿಗಳನ್ನು ಘೋಷಿಸಿತು.

46 ಮಂದಿ ಹಾಲಿ ಶಾಸಕರಿಗೆ ಮತ್ತೆ ಟಿಕೆಟ್ ಲಭಿಸಿದೆ. ಶುಹೈಬ್, ಇಕ್ಬಾಲ್, ರಾಮ್ ಸಿಂಗ್ ನೇತಾಜಿ ಮತ್ತು ವಿನಯ್ ಮಿಶ್ರಾ ಸಹ ಅಭ್ಯರ್ಥಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನವದೆಹಲಿಯಿಂದ ಸ್ಪರ್ಧಿಸಲಿದ್ದರೆ, ಉಪಮುಖ್ಯಮಂತ್ ಮನೀಶ್ ಸಿಸೋಡಿಯಾ ಅವರು ಪಟ್‌ಪರ್‌ಗಂಜ್ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.

ಹೆಚ್ಚಿನ ಎಎಪಿ ನಾಯಕರು ಅದೇ ಕ್ಷೇತ್ರಗಳು ಕಣಕ್ಕಿಳಿಯಲಿದ್ದಾರೆ. ಎಎಪಿ ಮುಖಂಡರಾದ ಅಥಿಶಿ ಅವರನ್ನು ಕಲ್ಕಾಜಿ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ. ಪಕ್ಷದ ವಕ್ತಾರ ರಾಘವ್ ಚಾಧಾ ಅವರನ್ನು ರಾಜಿಂದರ್ ನಗರ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ.

ಯುಎನ್ಐ ಎಎಚ್ 2005