Sunday, Mar 29 2020 | Time 00:15 Hrs(IST)
National Share

ದೆಹಲಿ ಹಿಂಸಾಚಾರ: ಕಪಿಲ್ ಮಿಶ್ರಾ ಬಂಧನಕ್ಕೆ ಸಿಪಿಐಎಂ ಒತ್ತಾಯ

ನವದೆಹಲಿ, ಫೆ.26 (ಯುಎನ್ಐ) ದೇಶದ ರಾಜಧಾನಿ ದೆಹಲಿಯಲ್ಲಿ ಫೆಬ್ರುವರಿ 23 ರಿಂದ ನಡೆಯುತ್ತಿರುವ ಹಿಂಸಾಚಾರಗಳಲ್ಲಿ ಇದುವರೆಗೆ 13 ಮಂದಿ ಪ್ರಾಣಕಳೆಕೊಂಡಿದ್ದಾರೆ. ಸುಮಾರು 150 ಜನ ಗಾಯಗೊಂಡು ಆಸ್ಪತ್ರೆಗಳಲ್ಲಿದ್ದಾರೆ. ಗಲಭೆಗೆ ಪ್ರಚೋದನೆ ನೀಡಿದ ಬಿಜೆಪಿ ನಾಯಕ ಕಪಿಲ್ ‍ಮಿಶ್ರ ವಿರುದ್ಧ ಕ್ರಮ ಕೈಗೊಳ್ಳಬೇಕು, ದ್ವೇಷ ಮತ್ತು ಹಿಂಸಾಚಾರವನ್ನು ಹರಡುವುದರಲ್ಲಿ ತೊಡಗಿರುವ ಎಲ್ಲರನ್ನೂ ಬಂಧಿಸಬೇಕು ಎಂದು ಸಿಪಿಐಎಂ ಪಾಲಿಟ್‌ ಬ್ಯೂರೋ ಕೇಂದ್ರ ಗೃಹಮಂತ್ರಿಗೆ ಪತ್ರ ಬರೆದು ಒತ್ತಾಯಿಸಿದೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಪಾಲಿಟ್ ಬ್ಯುರೋ, ರಾಜಧಾನಿಯಲ್ಲಿ ಶಾಂತಿಯನ್ನು ಖಾತ್ರಿಪಡಿಸಲು ಒಂದು ನಿಷ್ಪಕ್ಷಪಾತ ಮತ್ತು ನ್ಯಾಯಯುತ ಮಧ್ಯಪ್ರವೇಶ ಈಗಿನ ಪ್ರಮುಖ ಆವಶ್ಯಕತೆ ಎಂದು ಹೇಳಿದೆ.
ಫೆಬ್ರುವರಿ 23ರಂದು ಬಿಜೆಪಿ ಮುಖಂಡ ಕಪಿಲ್‍ ಮಿಶ್ರ ವಿವಿಧೆಡೆಗಳಲ್ಲಿ ಪ್ರತಿಭಟನೆ ನಡೆಸುತ್ತಿರುವವರನ್ನು ಬಲವಂತವಾಗಿ ಹೊರಹಾಕಬೇಕು ಎಂದು ಬಹಿರಂಗವಾಗಿಯೇ ಒಂದು ಕರೆ ನೀಡುವುದರೊಂದಿಗೆ ಈ ಹಿಂಸಾಚಾರ ಆರಂಭವಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ದಿಲ್ಲಿ ಪೊಲೀಸ್ ‍ಮತ್ತು ಬೇಹುಗಾರಿಕಾ ಸಂಸ್ಥೆಗಳು ಕೇಂದ್ರ ಗೃಹಮಂತ್ರಾಲಯದಡಿಯಲ್ಲಿರುವುದರಿಂದ ಕೇಂದ್ರ ಗೃಹಮಂತ್ರಿಗಳು ಕೂಡಲೇ ಮಧ್ಯಪ್ರವೇಶಿಸಬೇಕಿತ್ತು. ಆದರೆ ದೇಶದ ರಾಜಧಾನಿಯಲ್ಲಿ ಶಾಂತಿ ಕಾಪಾಡಬೇಕೆಂಬ ಅವರ ಮನವಿ ಬಂದದ್ದು ಒಂದೂವರೆ ದಿನಗಳ ನಂತರ. ಇದರಿಂದ ಗಲಭೆ ಹೆಚ್ಚಾಯಿತು ಎಂದು ಪಾಲಿಟ್‌ ಬ್ಯುರೋ ಹೇಳಿದೆ.
ಈ ಬಗ್ಗೆ ದೆಹಲಿ ನಿವಾಸಿಗಳ ನಿರಾಸೆಗೆ ದನಿ ನೀಡುತ್ತ ಸಿಪಿಐ(ಎಂ) ಪೊಲಿಟ್ ‍ಬ್ಯುರೊ ಸದಸ್ಯರಾದ ಬೃಂದಾ ಕಾರಟ್ ‍ಮತ್ತು ದಿಲ್ಲಿ ರಾಜ್ಯಸಮಿತಿಯ ಕಾರ್ಯದರ್ಶಿ ಕೆ.ಎಂ.ತಿವಾರಿ ಗೃಹಮಂತ್ರಿ ಅಮಿತ್‍ ಷಾರವರಿಗೆ ಫೆಬ್ರವರಿ 25ರಂದು ಪತ್ರ ಬರೆದು, ಕಪಿಲ್ ‍ಮಿಶ್ರ ವಿರುದ್ಧ ಕ್ರಮ ಕೈಗೊಳ್ಳಬೇಕು. ದ್ವೇಷ ಮತ್ತು ಹಿಂಸಾಚಾರವನ್ನು ಹರಡುವುದರಲ್ಲಿ ತೊಡಗಿರುವ ಎಲ್ಲರನ್ನೂ, ಅವರ ರಾಜಕೀಯ ಸಂಪರ್ಕಗಳು ಮತ್ತು ಬಣ್ಣ ಏನೇ ಇರಲಿ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದು ಜನಗಳಲ್ಲಿ, ತಾವು ಶಾಂತಿಗಾಗಿ ಮತ್ತು ಗಲಭೆಕೋರರ ವಿರುದ್ಧ ನಿಜವಾಗಿಯೂ ನಿಷ್ಪಕ್ಷಪಾತಪೂರ್ಣ ಕ್ರಮಗಳನ್ನು ಕೈಗೊಳ್ಳುತ್ತೀರಿ ಎಂಬ ವಿಶ್ವಾಸವನ್ನು ತರುತ್ತದೆ. ದೆಹಲಿಯ ಹೊರಗಿಂದ ಯಾವುದೇ ಗಲಭೆಕೋರರು ರಾಜಧಾನಿಯನ್ನು ಪ್ರವೇಶಿಸಲು ಬಿಡಬಾರದು ಎಂದು ಒತ್ತಾಯಿಸಿದ್ದಾರೆ.
ಸಿ..ಎ.ಎ ವಿರುದ್ಧ ಪ್ರತಿಭಟನೆಗಳು, ಮುಖ್ಯವಾಗಿ ಮಹಿಳೆಯರ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಶಾಂತಿಯುತವಾಗಿಯೇ ಇವೆ. ಕಳೆದ ಎರಡು ತಿಂಗಳಿಂದ ದೆಹಲಿಯಲ್ಲಿ ಹಿಂಸಾಚಾರದ ಯಾವ ಘಟನೆಗಳೂ ನಡೆದಿಲ್ಲ. ಇದಕ್ಕೆ ಅಪವಾದಗಳೆಂದರೆ, ಕೇಂದ್ರ ಸರಕಾರದ ಒಬ್ಬ ಮಂತ್ರಿಯ ಚಿತಾವಣೆಗೊಳಗಾದವರು ಪ್ರತಿಭಟನಕಾರರ ಮೇಲೆ ನಡೆಸಿದ ಗುಂಡು ಹಾರಾಟಗಳು ಮಾತ್ರ. ಇದು ಪೊಲೀಸರು ಮತ್ತು ಬೇಹುಗಾರಿಕೆ ಸಂಸ್ಥೆಗಳು ಶಾಂತಿಯುತ ಪ್ರತಿಭಟನೆಗಳನ್ನು ಛಿದ್ರಗೊಳಿಸಲು ಮತ್ತು ಅದಕ್ಕೊಂದು ಕೋಮು ಬಣ್ಣವನ್ನು ಕೊಡಲು ಕೆಲವರು ಪ್ರಯತ್ನಿಸುತ್ತಿದ್ದಾರೆ ಎಂಬ ಬಗ್ಗೆ ಜಾಗೃತರಾಗಬೇಕಾಗಿತ್ತು. ಆದರೆ, ಒಂದೋ, ಬೇಹುಗಾರಿಕೆ ಸಂಸ್ಥೆಗಳು ವಿಫಲವಾಗಿರಬೇಕು, ಇಲ್ಲವೇ ಅವುಗಳ ವರದಿಗಳನ್ನು ಉಪೇಕ್ಷಿಸಿರಬೇಕು ಎಂದು ಬೃಂದಾ ಕಾರಟ್‍ ಮತ್ತು ಕೆ.ಎಂ.ತಿವಾರಿ ತಮ್ಮ ಪತ್ರದಲ್ಲಿ ದೂರಿದ್ದಾರೆ.
ಮಂಗಳವಾರ ರಾತ್ರಿ ಕಂಡಲ್ಲಿ ಗುಂಡು ಆದೇಶ ಹೊರಡಿಸಲಾಗಿದೆ ಎಂದು ವರದಿಯಾಗಿದೆ. ಆದರೆ ಕಪಿಲ್‍ ಮಿಶ್ರರಂತ ದ್ವೇಷ ಹರಡುವವರ ಬಂಧನ ಇನ್ನೂ ಆಗಿಲ್ಲ. ರಾಜಧಾನಿಯಲ್ಲಿ ಶಾಂತಿಯನ್ನು ಖಾತ್ರಿಪಡಿಸಲು ಒಂದು ನಿಷ್ಪಕ್ಷಪಾತ ಮತ್ತು ನ್ಯಾಯಯುತ ಮಧ್ಯಪ್ರವೇಶ ಈಗಿನ ಪ್ರಮುಖ ಅವಶ್ಯಕತೆ ಎಂದು ಅವರು ಕೇಂದ್ರ ಗೃಹ ಸಚಿವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಯುಎನ್ಐ ಎಎಚ್ 0940
More News
ಕಾರ್ಮಿಕರ ಘನತೆಯನ್ನು ಕಾಪಾಡಿ; ಕೇಂದ್ರಕ್ಕೆ ರಾಹುಲ್ ಮನವಿ

ಕಾರ್ಮಿಕರ ಘನತೆಯನ್ನು ಕಾಪಾಡಿ; ಕೇಂದ್ರಕ್ಕೆ ರಾಹುಲ್ ಮನವಿ

28 Mar 2020 | 7:17 PM

ನವದೆಹಲಿ, ಮಾ 28 (ಯುಎನ್ಐ) ಕೊರೋನಾ ವೈರಸ್ ತಡೆಯಲು ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಣೆಯಿಂದ ಬೃಹತ್ ಸಂಖ್ಯೆ ಕಾರ್ಮಿಕರುತ ತಮ್ಮ ತವರೂರಿಗೆ ತೆರಳಲಾಗದೆ ಪರದಾಡುವಂತಾಗಿದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

 Sharesee more..
ಕೋವಿಡ್-19 ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ  ನೆರವು ನೀಡಿದ ಟಾಟಾ

ಕೋವಿಡ್-19 ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ ನೆರವು ನೀಡಿದ ಟಾಟಾ

28 Mar 2020 | 7:10 PM

ನವದೆಹಲಿ, ಮಾ 28 (ಯುಎನ್ಐ) ದೇಶದ ಮುಂಚೂಣಿಯ ಉದ್ಯಮ ಸಂಸ್ಥೆ ಟಾಟಾ ಟ್ರಸ್ಟ್, ದೇಶದ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ.ನೆರವು ನೀಡುವುದಾಗಿ ಘೋಷಿಸಿದೆ.

 Sharesee more..