Friday, Sep 25 2020 | Time 12:53 Hrs(IST)
 • 19 ವರ್ಷಗಳಿಂದ ರಾಮಸ್ವಾಮಿ ವರದಿ ಕೊಳೆಯುತ್ತಿದೆ: ರಾಮ್ ದಾಸ್
 • ಭೂ ಸುಧಾರಣಾ ಕಾಯ್ದೆಯಿಂದ ರೈತರಿಗೆ ತೊಂದರೆಯಿಲ್ಲ: ಮುಖ್ಯಮಂತ್ರಿ ಯಡಿಯೂರಪ್ಪ
 • ಡ್ರಗ್ಸ್ ಪ್ರಕರಣ: ಮತ್ತೋರ್ವ ಡ್ರಗ್ ಪೆಡ್ಲರ್ ಬಂಧನ
 • ಡ್ರಗ್ಸ್ ಪ್ರಕರಣ: ವಿಚಾರಣೆಗೆ ಕರೆದ ಮಾತ್ರಕ್ಕೆ ನಾನು ಅಪರಾಧಿಯಲ್ಲ; ನಟಿ ಅನುಶ್ರೀ
 • ಕೃಷಿ ಸಂಬಂಧಿತ ಮಸೂದೆಗೆ ವಿರೋಧ; ಹೆದ್ದಾರಿ ತಡೆದು ಅನ್ನದಾತರ ಆಕ್ರೋಶ
 • ಬಿಹಾರ ವಿಧಾನಸಭಾ ಚುನಾವಣೆಗೆ ಇಂದು ದಿನಾಂಕ ಪ್ರಕಟ ಸಾಧ್ಯತೆ
 • ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 86 ಸಾವಿರ ಹೊಸ ಕೊರೊನಾ ಪ್ರಕರಣಗಳು, 1141 ಸಾವು!
 • ಸೆನ್ಸೆಕ್ಸ್ 400 ಅಂಕ ಚೇತರಿಕೆ
 • ಶೋಪಿಯಾನ್ ಮಿನಿ ಸಚಿವಾಲಯದ ಭದ್ರತೆಯಲ್ಲಿದ್ದ ಸೈನಿಕನ ಮೇಲೆ ಉಗ್ರರ ದಾಳಿ
 • ಕೊವಿಡ್-19 : 3 ಕೋಟಿ 20 ಲಕ್ಷ ದಾಟಿದ ಜಾಗತಿಕ ಪ್ರಕರಣಗಳ ಸಂಖ್ಯೆ
 • ಅವಿಶ್ವಾಸ ನಿರ್ಣಯ: ಯಾವಾಗ ಬೇಕಾದರೂ ಚರ್ಚೆಗೆ ಸಿದ್ಧ-ಸಿದ್ದರಾಮಯ್ಯ
 • ಐಪಿಎಲ್‌ 2020: ಕಿಂಗ್ಸ್ ಇಲೆವೆನ್‌ ಪಂಜಾಬ್‌ ವಿರುದ್ಧ ಸೋಲಿನ ಜವಾಬ್ದಾರಿ ಹೊತ್ತ ವಿರಾಟ್‌ ಕೊಹ್ಲಿ
 • ಐಪಿಎಲ್‌ 2020: ನಿಧಾನಗತಿಯಲ್ಲಿ ಬೌಲಿಂಗ್‌ ಮಾಡಿದ್ದಕ್ಕಾಗಿ ಕೊಹ್ಲಿಗೆ 12 ಲಕ್ಷ ರೂ ದಂಡ
 • ಕೆ ಎಲ್‌ ರಾಹುಲ್‌ ಅವರ ಎರಡು ಕ್ಯಾಚ್‌ ಬಿಟ್ಟ ಬಗ್ಗೆ ಪ್ರತಿಕ್ರಿಯಿಸಿದ ವಿರಾಟ್‌ ಕೊಹ್ಲಿ
 • ಪಂಜಾಬ್, ಹರಿಯಾಣದಲ್ಲಿ ರೈತರ ಬಂದ್ ಗೆ ಉತ್ತಮ ಪ್ರತಿಕ್ರಿಯೆ
Sports Share

ಧೋನಿ ತರಬೇತಿಗಾಗಿ ಸೇನಾ ಮುಖ್ಯಸ್ಥ ರಾವತ್ ಅನುಮತಿ

ನವದೆಹಲಿ, ಜು 22, (ಯುಎನ್ಐ)- ಭಾರತದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಮಹೇಂದ್ರ ಸಿಂಗ್ ಧೋನಿ ಅವರು ಸೇನೆಯ ಪ್ಯಾರಾಚೂಟ್ ರೆಜಿಮೆಂಟ್ ನಲ್ಲಿ ತರಬೇತಿ ನಡೆಸಲು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಅನುಮತಿ ನೀಡಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ಅವರು ಗೌರವ ಲೆಫ್ಟಿನೆಂಟ್ ಕರ್ನಲ್ ಆಗಿದ್ದು, ಸೇನೆಯೊಂದಿಗೆ ಅಭ್ಯಾಸ ಮಾಡಲು ಬಯಸಿದ್ದಾರೆ. ವರದಿಯಂತೆ ಸಿಯಾಚಿನ್ ನಲ್ಲಿ ಮಾಹಿ ತರಬೇತಿಯಲ್ಲಿ ಭಾಗವಹಿಸಲಿದ್ದಾರೆ. ಅಲ್ಲದೆ ಎರಡು ತಿಂಗಳ ಅವಧಿಯ ತರಬೇತಿಯಲ್ಲಿ ಜಮ್ಮು-ಕಾಶ್ಮೀರದಲ್ಲೂ ತಾಲೀಮು ನಡೆಸಲಿದ್ದಾರೆ.

ಭಾರತ ತಂಡದ ವಿಶ್ವಕಪ್ ವಿಜೇತ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು, ಸೇನೆ ಯಾವುದೇ ಸಕ್ರಿಯ ಕಾರ್ಯಚರಣೆಯಲ್ಲಿ ಭಾಗವಹಿಸುವಂತಿಲ್ಲ. ಮಾಹಿ ಅವರು ಬಿಸಿಸಿಐ ನಿಂದ ಎರಡು ತಿಂಗಳ ಬಿಡುವು ಪಡೆದು ತರಬೇತಿ ಶಿಬಿರದಲ್ಲಿ ಭಾಗವಹಿಸುತ್ತಿದ್ದು, ವಿಂಡೀಸ್ ಪ್ರವಾಸದಿಂದ ಹಿಂದೆ ಸರೆದಿದ್ದಾರೆ.

ಧೋನಿ ಅವರು ಬೇರೆ ಸೈನಿಕರೊಂದಿಗೆ ತರಬೇತಿಯಲ್ಲಿ ಪಾಲ್ಗೊಳಲಿದ್ದಾರೆ. ಅಲ್ಲದೆ ಎರಡು ತಿಂಗಳು ಸೈನಿಕರಂತೆ ಉಳಿದುಕೊಳ್ಳಲಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ಅವರು 2015ರಲ್ಲಿ ದಕ್ಷ ಪ್ಯಾರಾಚೂಟ್ ಸೈನಿಕರಾಗಿದ್ದರು. ಧೋನಿ ಈ ವೇಳೆ ವಿಮಾನದಿಂದ ಪ್ಯಾರಾಚೂಟ್ ಕಟ್ಟಿ ಜಿಗಿದಿದ್ದರು. ಧೋನಿ ಅವರನ್ನು ಸೇನೆ 2011ರಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ ನಿಯೋಜನೆ ಮಾಡಿತ್ತು.

ಐಸಿಸಿ ವಿಶ್ವಕಪ್ ಬಳಿಕ ಧೋನಿ ನಿವೃತ್ತಿ ಪಡೆಯುವ ಬಗ್ಗೆ ಮಾತು ಕೇಳಿ ಬಂದಿತ್ತು. ಈ ಬೆನ್ನಲ್ಲೆ ಧೋನಿ ಅವರಿಗೆ ವಿಂಡೀಸ್ ಪ್ರವಾಸದ ವೇಳೆ ತಂಡದಲ್ಲಿ ಸ್ಥಾನ ನೀಡಬೇಕೆ ಬೇಡವೇ ಎಂಬ ಪ್ರಶ್ನೆಗಳು ಎದ್ದಿದ್ದವು. ಆದರೆ ಧೋನಿ ಅವರು ಶನಿವಾರ ತಮ್ಮ ಅಲಭ್ಯತೆಯ ಬಗ್ಗೆ ಬಿಸಿಸಿಐ ಆಯ್ಕೆ ಸಮಿತಿಗೆ ಸೂಚಿಸಿದ್ದರು. ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಭಾನುವಾರ ಭಾರತ ತಂಡವನ್ನು ಪ್ರಕಟಿಸಲಾಗಿತ್ತು.

ಯುಎನ್ಐ ವಿಎನ್ಎಲ್ ವಿಎನ್ 1730
More News

ಕನ್ನಡಿಗ ರಾಹುಲ್ ಆರ್ಭಟ, ಬೆಂಗಳೂರಿಗೆ ಆಘಾತ

24 Sep 2020 | 11:32 PM

 Sharesee more..
ರಾಹುಲ್ ಶತಕ, ಪಂಜಾಬ್ 3ಕ್ಕೆ 206

ರಾಹುಲ್ ಶತಕ, ಪಂಜಾಬ್ 3ಕ್ಕೆ 206

24 Sep 2020 | 10:08 PM

ದುಬೈ, ಸೆ.24 (ಯುಎನ್ಐ)- ಪ್ರಸಕ್ತ ಐಪಿಎಲ್ ನಲ್ಲಿ ಮೊದಲ ಶತಕ ಬಾರಿಸಿದ ಕೀರ್ತಿಗೆ ಕನ್ನಡಿಗ ಕೆ.ಎಲ್ ರಾಹುಲ್ ಭಾಜನರಾಗಿದ್ದಾರೆ. ಇವರ ಮನಮೋಹಕ ಬ್ಯಾಟಿಂಗ್ ನೆರವಿನಿಂದ ಕಿಂಗ್ಸ್ ಇಲೆವೆನ್ ಪಂಜಾಬ್ 2020ರ ಐಪಿಎಲ್ ನ ಆರನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸ್ಪರ್ಧಾತ್ಮಕ ಮೊತ್ತದ ಗುರಿಯನ್ನು ನೀಡಿದೆ.

 Sharesee more..

ಕಿಂಗ್ಸ್ ಸ್ಕೋರ್ ಬೋರ್ಡ್

24 Sep 2020 | 9:35 PM

 Sharesee more..