Friday, Feb 28 2020 | Time 09:06 Hrs(IST)
  • ದಕ್ಷಿಣ ಕೊರಿಯಾದಲ್ಲಿ ಮತ್ತೆ 256 ಕೊರೊನಾ ಸೋಂಕು ಪ್ರಕರಣ ದಾಖಲು
  • ಕೊರೊನಾ ಸೋಂಕು : ಹಜ್ ಯಾತ್ರೆಗೆ ನಿರ್ಬಂಧ
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
National Share

ನಕಲಿ ಬಂದೂಕು ಪರವಾನಿಗೆ: ಜಮ್ಮು-ಕಾಶ್ಮೀರದ 14 ಕಡೆ ಸಿಬಿಐ ದಾಳಿ

ನಕಲಿ ಬಂದೂಕು ಪರವಾನಿಗೆ: ಜಮ್ಮು-ಕಾಶ್ಮೀರದ 14 ಕಡೆ ಸಿಬಿಐ ದಾಳಿ
ನಕಲಿ ಬಂದೂಕು ಪರವಾನಿಗೆ: ಜಮ್ಮು-ಕಾಶ್ಮೀರದ 14 ಕಡೆ ಸಿಬಿಐ ದಾಳಿ

ಜಮ್ಮು, ಡಿ 30 (ಯುಎನ್‍ಐ)- ನಕಲಿ ಬಂದೂಕು ಪರವಾನಿಗೆ ಜಾಲಕ್ಕೆ ಸಂಬಂಧಿಸಿ ಸಿಬಿಐ ಅಧಿಕಾರಿಗಳು ಸೋಮವಾರ ಕೇಂದ್ರಾಡಳಿತ ಪ್ರದೇಶವಾದ ಜಮ್ಮು-ಕಾಶ್ಮೀರದ 14 ಕಡೆ ದಾಳಿ ನಡೆಸಿದ್ದಾರೆ.

ಜಮ್ಮು-ಕಾಶ್ಮೀರದ 10 ಜಿಲ್ಲೆಗಳ 14 ಕಡೆ ಸೋಮವಾರ ಬೆಳಿಗ್ಗೆ ಸಿಬಿಐ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ.

‘ಶ್ರೀನಗರದ ಒಂಭತ್ತು ಕಡೆ, ಜಮ್ಮು-ಕಾಶ್ಮೀರದ ಐದು ಕಡೆ ದಾಳಿಗಳನ್ನು ನಡೆಸಲಾಗಿದೆ.’ ಎಂದು ಮೂಲಗಳು ತಿಳಿಸಿವೆ. ಜಮ್ಮು, ಕುಪ್ವಾರ, ಬಾರಾಮುಲ್ಲಾ, ಉಧಮ್‍ಪುರ, ಕಿಶ್ತ್‍ವಾರ್, ಶೋಪಿಯಾನ್, ರಜೌರಿ, ದೋಡಾ ಮತ್ತು ಪುಲ್ವಾಮಗಳಲ್ಲಿ ವ್ಯಾಪಿಸಿರುವ ಜಾಗಗಳಲ್ಲಿ ದಾಳಿಗಳನ್ನು ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

‘ರಾಜ್ಯದ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸುಮಾರು 2 ಲಕ್ಷ ಶಸ್ತ್ರಾಸ್ತ್ರ ಪರವಾನಿಗೆಗಳನ್ನು ನೀಡಿದ್ದಾರೆ ಎಂಬ ಆರೋಪಗಳ ಹಿನ್ನೆಯಲ್ಲಿ ದಾಖಲಾಗಿದ್ದ ಎರಡು ಪ್ರಕರಣಗಳ ತನಿಖೆಯ ಭಾಗವಾಗಿ ಈ ದಾಳಿಗಳು ನಡೆದಿವೆ.’ ಎಂದು ಮೂಲಗಳು ತಿಳಿಸಿವೆ. ನಿಯಮಗಳನ್ನು ಉಲ್ಲಂಘಿಸಿ, ಜಮ್ಮು-ಕಾಶ್ಮೀರದ ನಿವಾಸಿಗಳಲ್ಲದವರಿಗೂ ಪರವಾನಿಗೆಗಳನ್ನು ಸರ್ಕಾರಿ ಸಿಬ್ಬಂದಿ ಲಂಚ ಪಡೆದು ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಯುಎನ್‍ಐ ಎಸ್‍ಎಲ್‍ಎಸ್ 1443