Sunday, Nov 1 2020 | Time 00:20 Hrs(IST)
Entertainment Share

ನಟಿ ಐಂದ್ರಿತಾ ದಿಗಂತ್ ದಂಪತಿಗೆ ನೋಟಿ‍ಸ್ : ನಾಳೆ ಸಿಸಿಬಿ ವಿಚಾರಣೆ

ಬೆಂಗಳೂರು, ಸೆ 15 (ಯುಎನ್‍ಐ) ಸ್ಯಾಡಲ್ ವುಡ್ ನಲ್ಲಿ ಡ್ರಗ್ಸ್ ಜಾಲ ಪ್ರಕರಣಕ್ಕೆ ಸಂಬಂಧಿಸಿ ನಟಿ ಐಂದ್ರಿತಾ ರೇ ಹಾಗೂ ನಟ ದಿಗಂತ್ ಗೆ ಸಿಸಿಬಿ ನೋಟಿಸ್ ನೀಡಿದೆ.

ಬುಧವಾರ ಬೆಳಗ್ಗೆ 11 ಗಂಟೆಯ ವೇಳೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನಲ್ಲಿ ತಿಳಿಸಲಾಗಿದೆ. ಪ್ರಕರಣ ಚರ್ಚೆಗೆ ಬಂದಾಗಿನಿಂದಲೂ ಐಂದ್ರಿತಾ ಹಾಗೂ ದಿಗಂತ್ ಹೆಸರು ಮುಂಚೂಣಿಯಲ್ಲಿತ್ತು.
ಎರಡು ದಿನಗಳ ಹಿಂದಷ್ಟೆ ಐಂದ್ರಿತಾ ರೇಯವರು ಶ್ರೀಲಂಕಾದ ಕ್ಯಾಸಿನೋಗೆ ಹೋಗಿದ್ದ ವಿಡಿಯೋ, ಫೋಟೋ ವೈರಲ್‌ ಆಗಿತ್ತು. ಈ ವೇಳೆ ಈ ಪ್ರಕರಣದ ಆರೋಪಿ ಶೇಖ್‌ ಫಾಝಿಲ್‌ ಜೊತೆ ಇದ್ದ ಫೋಟೋಗಳು ಸಹ ಸಿಕ್ಕಿತ್ತು.
ನಟಿ ರಾಗಿಣಿ ಜತೆಗೂ ಆತ್ಮೀಯತೆ ಇತ್ತು. ಇದೆಲ್ಲಕ್ಕಿಂತ ಮುಖ್ಯವಾಗಿ ಪ್ರಕರಣದ ಎ 1ಆರೋಪಿ ಹಾಗೂ ರಾಗಿಣಿಯ ಮಾಜಿ ಬಾಯ್ ಫ್ರೆಂಡ್ ಶಿವಪ್ರಕಾಶ್ ಜತೆಗೂ ಸಂಪರ್ಕವಿತ್ತು. ಆತನ ಜತೆಗೆ ಐಂದ್ರಿತಾ ರೇ ಇತ್ತೀಚೆಗೆ ಕಾಣಿಸಿಕೊಂಡ ಭಾವಚಿತ್ರಗಳೂ ಲಭ್ಯವಾಗಿವೆ ಎನ್ನಲಾಗಿದೆ.

ಕೇವಲ ಸಿನಿಮಾಗಳ ಹಿನ್ನೆಲೆಯಲ್ಲಿ ಐಂದ್ರಿತಾ, ಶಿವಪ್ರಕಾಶ್ ಸಂಪರ್ಕವಿತ್ತೇ ಅಥವಾ ಡ್ರಗ್ಸ್ ಜಾಲಕ್ಕೆ ನೇರ ಸಂಬಂಧವಿದೆಯೇ ಎಂಬು ಸಿಸಿಬಿ ತನಿಖೆಯಿಂದ ತಿಳಿದುಬರಲಿದೆ.

ಯುಎನ್‍ಐ ಎಸ್‍ಎ 1522
More News

ನಟ, ನಿರ್ಮಾಪಕ ದಿನೇಶ್ ಗಾಂಧಿ ನಿಧನ

31 Oct 2020 | 1:53 PM

 Sharesee more..

ಕಮಲ ಹಾಸನ್ ಜನ್ಮದಿನದಂದು 232ನೇ ಫಸ್ಟ್ ಲುಕ್

31 Oct 2020 | 12:15 PM

 Sharesee more..

ಡಿ ಬಾಸ್ ರೀತಿ ಹೆಸರು ಮಾಡ್ಬೇಕು : ಅಮೂಲ್ಯ

31 Oct 2020 | 8:32 AM

 Sharesee more..

ಕಾಜಲ್ - ಕಿಚ್ಲು ಕಲ್ಯಾಣ

30 Oct 2020 | 3:03 PM

 Sharesee more..