Saturday, Aug 8 2020 | Time 06:12 Hrs(IST)
Entertainment Share

ನಟಿ ಮಯೂರಿ ಹುಟ್ಟು ಹಬ್ಬ: 'ಆದ್ಯಂತ' ಫಸ್ಟ್ ಲುಕ್ ರಿವೀಲ್

ಬೆಂಗಳೂರು, ಜು.11 (ಯುಎನ್ಐ) ಇತ್ತೀಚೆಗಷ್ಟೇ ಬಹುದಿನದ ತಮ್ಮ ಗೆಳೆಯ ಅರುಣ್ ಜತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಯಾಂಡಲ್ ವುಡ್ ಕೃಷ್ಣ ಲೀಲಾ ಖ್ಯಾತಿಯ ನಟಿ ಮಯೂರಿ ಇಂದು ಹುಟ್ಟು ಹಬ್ಬ ಆಚರಿಸಿಕೊಂಡರು.
ಸದ್ಯ ಮಯೂರಿ ‘ಆದ್ಯಂತ’ ಎಂಬ ಮಹಿಳಾ ಪ್ರಧಾನ ಚಿತ್ರದಲ್ಲಿ ನಟಿಸಿದ್ದಾರೆ. ಹೀಗಾಗಿ ಅವರ ಜನ್ಮದಿನದ ಪ್ರಯುಕ್ತ ಚಿತ್ರತಂಡ ‘ಆದ್ಯಂತ’ ಚಿತ್ರದ ಫಸ್ಟ್‌ಲುಕ್‍ ಅನ್ನು ಬಿಡುಗಡೆಗೊಳಿಸಿದೆ.
ಆದ್ಯಂತ ಚಿತ್ರಕ್ಕೆ ಪುನೀತ್ ಶರ್ಮಾನ್ ಆ್ಯಕ್ಷನ್ ಕಟ್‌ ಹೇಳಿದ್ದಾರೆ. ಇದೊಂದು ವಿಭಿನ್ನ ಕಥಾಹಂದರ ಹೊಂದಿದ ಚಿತ್ರಕಥೆ ಆಗಿದ್ದು, ದೀಪಾ ಪಾತ್ರಕ್ಕೆ ಮಯೂರಿ ಜೀವ ತುಂಬಿದ್ದಾರೆ.
ದೀಪಾ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾಳೆ. ಏಕಾಏಕೀ ಆಕೆಗೆ ತನ್ನ ಅಜ್ಜಿ ಬರೆದ ಆಸ್ತಿಯ ವಿಲ್‍ ದೊರಕುತ್ತದೆ. ನಂತರ ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಆಕೆ ಆ ಆಸ್ತಿ ಮಾರಾಟ ಮಾಡಲೆಂದು ಸಕಲೇಶಪುರದ ಎಸ್ಟೇಟ್‌ಗೆ ತನ್ನ ಪ್ರಿಯತಮ ಜೊತೆಗೆ ಸಾಗುತ್ತಾಳೆ‌. ನಂತರ ಎಸ್ಟೇಟ್‍ ಮನೆಯಲ್ಲಿ ಆಕೆಗೆ ವಿಚಿತ್ರ ಘಟನೆಗಳ ಅನುಭವವಾಗುತ್ತದೆ. ಆ ಕಂಟಕದಿಂದ ಆಕೆ ಹೇಗೆ ತಪ್ಪಿಕೊಂಡು ಹೊರಬರುತ್ತಾಳೆ ಎಂಬುದೇ ಚಿತ್ರದ ಸಾರ.
ಚಿತ್ರಕ್ಕೆ ನವೀನ್ ಕುಮಾರ್ ಚಲ್ಲ ಅವರ ಛಾಯಾಗ್ರಹಣವಿದ್ದು, ಸ್ಯಾಂಡಿ ಸಂಗೀತ ಸಂಯೋಜಿಸಿದ್ದಾರೆ.
ಚಿತ್ರದಲ್ಲಿ ದಿಲೀಪ್, ರಮೇಶ್ ಭಟ್‍, ಶ್ರೀನಾಥ್ ವಸಿಷ್ಠ, ಪ್ರಶಾಂತ್ ನಟನಾ, ನಿಖಿಲ್ ಗೌಡ ಕಾಣಿಸಿಕೊಂಡಿದ್ದಾರೆ. ಶೀಘ್ರವೇ, ಟೀಸರ್‌ ಕೂಡ ಬಿಡುಗಡೆಗೊಳಿಸುವ ಭರದಲ್ಲಿದೆ ಚಿತ್ರತಂಡ.
ಈಗಾಗಲೇ, ಚಿತ್ರದ ಬಹುತೇಕ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕಾರ್ಯ ಚಾಲ್ತಿಯಲ್ಲಿದೆ.
ರಮೇಶ್ ಬಾಬು ಟಿ. ಚಿತ್ರಕ್ಕೆ ಬಂಡವಾಳ ಹೂಡಿದ್ದು, ಪ್ರಕಾಶ್‍ ಎಲಗೂಡು ಮತ್ತು ಮೋಹನ್ ಕುಮಾರ್ ಆರ್.ಎಸ್. ಸಹ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ.
ಯುಎನ್ಐ ಪಿಕೆ ವಿಎನ್ 1555
More News
ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅನುಮತಿ ಅಥವಾ ಪರಿಹಾರ ನೀಡದಿದ್ದರೆ ಸಿಎಂ ಮನೆಯೆದುರು ಧರಣಿ : ಲಘು ಸಂಗೀತ ಕಲಾವಿದರ ಸಂಘ

ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅನುಮತಿ ಅಥವಾ ಪರಿಹಾರ ನೀಡದಿದ್ದರೆ ಸಿಎಂ ಮನೆಯೆದುರು ಧರಣಿ : ಲಘು ಸಂಗೀತ ಕಲಾವಿದರ ಸಂಘ

06 Aug 2020 | 9:12 PM

ಬೆಂಗಳೂರು, ಆ 06 (ಯುಎನ್‍ಐ) ಕೊರೋನಾ ಮಹಾಮಾರಿಯಿಂದಾಗಿ ವಿಶ್ವವೇ ಸಂಕಷ್ಟಕ್ಕೆ ಸಿಲುಕಿದ್ದು, ಲಘು ಸಂಗೀತ ಮತ್ತು ಸಾಂಸ್ಕೃತಿಕ ಕಲಾವಿದರೂ ಇದರಿಂದ ಹೊರತಾಗಿಲ್ಲ.

 Sharesee more..
ದಿ ಪೈಂಟರ್’ ಕನ್ನಡ ಮತ್ತು ಹಿಂದಿ ಚಿತ್ರಕ್ಕೆ ರೋರಿಂಗ್ ಸ್ಟಾರ್ ಶ್ರೀ ಮುರಳಿ ಸಾತ್

ದಿ ಪೈಂಟರ್’ ಕನ್ನಡ ಮತ್ತು ಹಿಂದಿ ಚಿತ್ರಕ್ಕೆ ರೋರಿಂಗ್ ಸ್ಟಾರ್ ಶ್ರೀ ಮುರಳಿ ಸಾತ್

06 Aug 2020 | 9:05 PM

ಬೆಂಗಳೂರು, ಆ 06(ಯುಎನ್‍ಐ) ಲಾಕ್ ಡೌನ್ ಸಮಯದಲ್ಲಿ ಶೂಟ್ ಮಾಡಿ ತಯಾರಾದ ಥ್ರಿಲ್ಲರ್ ಚಿತ್ರ ‘ದಿ ಪೈಂಟರ್’ ಚಿತ್ರಕ್ಕೆ ರೋರಿಂಗ್ ಸ್ಟಾರ್ ಶ್ರೀ ಮುರಳಿ ಸಾತ್ ನೀಡುತ್ತಿದ್ದಾರೆ .

 Sharesee more..