Friday, Feb 28 2020 | Time 09:48 Hrs(IST)
  • ಖ್ಯಾತ ಇತಿಹಾಸಕಾರ ಷ ಷೆಟ್ಟರ್ ನಿಧನ
  • ದೀರ್ಘಾವಧಿ ಬಳಿಕ ರಾಷ್ಟ್ರೀಯ ಫುಟ್ಬಾಲ್ ಶಿಬಿರಕ್ಕೆ ಮರಳಿದ ಸಂದೇಶ್‌, ಜೆಜೆ
  • ದಕ್ಷಿಣ ಕೊರಿಯಾದಲ್ಲಿ ಮತ್ತೆ 256 ಕೊರೊನಾ ಸೋಂಕು ಪ್ರಕರಣ ದಾಖಲು
  • ಕೊರೊನಾ ಸೋಂಕು : ಹಜ್ ಯಾತ್ರೆಗೆ ನಿರ್ಬಂಧ
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
Special Share

ನಮೂದಿಸಿದಕ್ಕಿಂತ ಹೆಚ್ಚು ಹಣ ಕೊಟ್ಟ ಎಟಿಎಂ

ಪಾಳಾ, ಜ 24 (ಯುಎನ್ಐ) ಎಟಿಎಂ ಗಳಲ್ಲಿ ಹಣ ಪಡೆಯುವಾಗ ಅದೆಷ್ಟೋ ಬಾರಿ ಹರಿದ ನೋಟ್ ಬರತ್ತೆ, ಇನ್ನೂ ಕೆಲವೊಂದು ಸಲ ಖೋಟಾ ನೋಡು ಬಂದ ಬಗ್ಗೆಯೂ ವರದಿಯಾಗತ್ತೆ. ಕೆಲವೊಂದು ಸಲ ಕೇಳಿದ ಮೊತ್ತಕ್ಕಿಂತ ಕಡಿಮೆ ಹಣ ಬರತ್ತೆ, ಆದ್ರೆ ಹಾಕಿದ ಮೊತ್ತಕ್ಕಿಂತ ಹೆಚ್ಚು ಹಣ ಬಂದರೆ?

ಒಳ್ಳೇದೇ ಆಯ್ತು, ಖಾತೆಯಲ್ಲಿ ದುಡ್ಡಿಲ್ದೇ ಹೋದ್ರೂ ಸಿಕ್ತಲ್ಲಾ ಅಂತಾ ಸಂತೋಷಪಟ್ಕೋಳೋರು ಇರಬಹುದು. ಆದರೆ ಕೇರಳದ ಅಂಗನವಾಡಿ ಶಿಕ್ಷಕಿಯೊಬ್ಬರು 500 ರೂಪಾಯಿ ಪಡೆಯಕ್ಕೆ ಎಟಿಎಂ ನಲ್ಲಿ ಕಾರ್ಡ್ ಹಾಕಿ, ಪಿನ್ ಹಾಕಿ ಕಾದರಂತೆ. ದುಡ್ಡೇನೋ ಬಂತಂತೆ, ಆದ್ರೆ ಬಂದಿದ್ದು 500 ರೂಪಾಯಿ ಅಲ್ಲ, 10 ಸಾವಿರ ರೂಪಾಯಿಯಂತೆ.

ತಕ್ಷಣವೇ ಅವರು ಅಲ್ಲಿನ ಪಂಚಾಯತಿ ಸದಸ್ಯರಿಗೆ ವಿಷಯ ಮುಟ್ಟಿಸಿದರಂತೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿಗಳಿಗೂ ವಿಷಯ ತಿಳಿಸಿದರಂತೆ. ಅವರೂ ಕೂಡ ಸ್ಥಳಕ್ಕೆ ಬಂದರಂತೆ. ಆದ್ರೆ ಯಾರೊಬ್ಬರೂ ಆ ಹಣ ಸ್ವೀಕರಿಸಕ್ಕೆ ಮುಂದಾಗಲಿಲ್ವಂತೆ. ಕೊನೆಗೆ ಎಸ್ ಬಿ ಐ ಎಟಿಎಂ ಕೇಂದ್ರದಿಂದ ಹೆಚ್ಚು ಹಣ ಬಂದ ಕಾರಣ, ಆ ಹಣವನ್ನ ಬ್ಯಾಂಕ್ ಅಧಿಕಾರಿಗಳೇ ತೆಗೆದುಕೊಳ್ಳಬೇಕು ಎಂದು ಪಂಚಾಯತಿ ಸದಸ್ಯರು ಸೇರಿದಂತೆ ಸ್ಥಳೀಯರು ಆಗ್ರಹಿಸದರಂತೆ. ನಂತರ ಅಧಿಕಾರಿಗಳು ಹಣ ವಾಪಸ್ ಪಡೆದು ರಶೀದಿ ಕೊಟ್ಟರು ಎಂದು ವರದಿಯಾಗಿದೆ.

ಯುಎನ್ಐ ಜಿಎಸ್ಆರ್ 2256