Saturday, Sep 26 2020 | Time 22:29 Hrs(IST)
 • ಕೋವಿಡ್ ನಡುವೆಯೂ ಜಮ್ಮು-ಕಾಶ್ಮೀರದಲ್ಲಿ ಕಲ್ಲು ತೂರಾಟ, ಭಯೋತ್ಪಾದನೆ ನಿಗ್ರಹಿಸಿದ ಸೇನೆಗೆ ಸಿಆರ್ ಪಿಎಫ್ ಶ್ಲಾಘನೆ
 • ಅವಿಶ್ವಾಸ ನಿರ್ಣಯ ಡಿವಿಷನ್ ಹಾಕಲ್ಲ-ಧ್ವನಿಮತದ ಮೂಲಕ ನಡೆಸಲು ತೀರ್ಮಾನ: ಸ್ಪೀಕರ್ ಕಾಗೇರಿ
 • ಭೂ ಸುಧಾರಣಾ ಕಾಯ್ದೆ ವಿಚಾರದಲ್ಲಿ ಜೆಡಿಎಸ್ ದ್ವಂದ್ವ ನಿಲುವು-ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಕಾಯ್ದೆ ವಿರುದ್ಧ,ಮಗ ಮಾಜಿ ಮುಖ್ಯಮಂತ್ರಿ ಕಾಯ್ದೆ ಪರ ನಿಲುವು
 • ನಡ್ಡಾ ಹೊಸ ತಂಡ ರಚನೆ: 12 ಉಪಾಧ್ಯಕ್ಷರು, ಎಂಟು ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ ಬಿಜೆಪಿ ಹೊಸ ಪದಾಧಿಕಾರಿಗಳ ನೇಮಕ
 • ಲಡಾಕ್‌ ಸಂಸದರು ಮತ್ತು ಸಾರ್ವಜನಿಕ ಪ್ರತಿನಿಧಿಗಳನ್ನು ಭೇಟಿಯಾದ ಅಮಿತ್‌ ಶಾ
 • ವಿಶ್ವಸಂಸ್ಥೆಗೆ ಪರೋಕ್ಷ ಎಚ್ಚರಿಕೆ- ನಿರ್ಧಾರಗಳಿಂದ ಭಾರತವನ್ನು ಎಷ್ಟು ಕಾಲ ಹೊರಗಿಡಲು ಸಾಧ್ಯ? -ಪ್ರಧಾನಿ ಮೋದಿ
 • ವಿಶ್ವಸಂಸ್ಥೆಯಿಂದ ಭಾರತ ಇನ್ನೆಷ್ಟು ಕಾಲ ದೂರ ಇರಿಸುತ್ತೀರಿ: ಪ್ರಧಾನಿ ಮೋದಿ ತೀಕ್ಷ್ಣ ಪ್ರಶ್ನೆ
 • ಕಾಂಗ್ರೆಸ್-ಜೆಡಿಎಸ್ ಸಭಾತ್ಯಾಗದ ನಡುವೆ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ವಿಧೇಯಕಕ್ಕೆ ಅನುಮೋದನೆ
 • ಯಾವುದೇ ಸಾಂಕ್ರಾಮಿಕ ರೋಗ ವಿರುದ್ಧ ಹೋರಾಡಲು ವಿಜ್ಞಾನ ಸದಾ ಮುಂದುವರೆದಿದೆ- ತಜ್ಞರ ಪ್ರತಿಪಾದನೆ
 • ಬಿಜೆಪಿ ನೂತನ ಪದಾಧಿಕಾರಿಗಳ ಪಟ್ಟಿ ಪ್ರಕಟ: ಸಿ ಟಿ ರವಿ, ತೇಜಸ್ವಿ ಸೂರ್ಯಗೆ ಸ್ಥಾನ
 • ವ್ಯಭಿಚಾರ ಅಪರಾಧ ವಲ್ಲ : ಮುಂಬೈ ಹೈಕೋರ್ಟ್
 • ವಿಜಯಪುರದಲ್ಲಿ ತಗ್ಗು ಪ್ರದೇಶದ ಸೇತುವೆ ಮುಳುಗಡೆ
 • ಸರ್ಕಾರ ಕೃಷಿ ಮಸೂದೆ ಹಿಂಪಡೆದು, ಎಂಎಸ್‌ಪಿ ಗ್ಯಾರಂಟಿ ನೀಡಬೇಕು; ರಾಹುಲ್
 • 4008 ಕೋಟಿ ಹೆಚ್ಚುವರಿ ವೆಚ್ಚಕ್ಕೆ ಅನುಮತಿ ನೀಡುವ ಧನವಿನಿಯೋಗ ವಿಧೇಯಕಕ್ಕೆ ವಿಧಾನ ಪರಿಷತ್ ಅಂಗೀಕಾರ
 • ಜೆ ಪಿ ನಡ್ಡಾ ತಂಡದಲ್ಲಿ ರಾಜ್ಯದ ಸಂಸದ ತೇಜಸ್ವಿ ಸೂರ್ಯ, ಸಚಿವ ಸಿ ಟಿ ರವಿಗೆ ಸ್ಥಾನ
Health -Lifestyle Share

ನವೆಂಬರ್ 25 ರಿಂದ ಡಿಸೆಂಬರ್ 10 ರವರೆಗೆ ಕ್ಷಯರೋಗ ಪತ್ತೆ ಆಂದೋಲನ

ನವೆಂಬರ್ 25 ರಿಂದ ಡಿಸೆಂಬರ್ 10 ರವರೆಗೆ ಕ್ಷಯರೋಗ ಪತ್ತೆ ಆಂದೋಲನ
ನವೆಂಬರ್ 25 ರಿಂದ ಡಿಸೆಂಬರ್ 10 ರವರೆಗೆ ಕ್ಷಯರೋಗ ಪತ್ತೆ ಆಂದೋಲನ

ಬೆಂಗಳೂರು, ನ 20 [ಯುಎನ್ಐ] ಬೆಂಗಳೂರು ನಗರ ಜಿಲ್ಲೆಯಾದ್ಯಂತ ನವೆಂಬರ್ 25 ರಿಂದ ಡಿಸೆಂಬರ್ 10 ರವರೆಗೆ ಕ್ಷಯರೋಗ ಪತ್ತೆ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಶ್ರೀರೂಪ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ, ಸಕ್ರಿಯ ಪ್ರಕರಣ ಪತ್ತೆ ಆಂದೋಲನದ ಮೈಕ್ರೋ ಪ್ಲಾನ್ ಪೂರ್ವ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೊಳಚೆ ಪ್ರದೇಶಗಳು, ಜೈಲಿನಲ್ಲಿರುವ ಕೈದಿಗಳು, ವೃದ್ಧಾಶ್ರಮಗಳು, ಕಟ್ಟಡ ನಿರ್ಮಾಣ ಕಾರ್ಮಿಕರು, ನಿರಾಶ್ರಿತರು, ರಾತ್ರಿ ಆಶ್ರಯಗಳು, ಹೆಚ್‍ಐವಿ ಕೇಂದ್ರಗಳು, ವಸತಿ ಇಲ್ಲದವರು, ಬೀದಿ ಮಕ್ಕಳು, ಅನಾಥ ಆಶ್ರಮಗಳು, ಗಿರಣಿ ಕೆಲಸಗಾರರು, ನೇಕಾರಿಕ ಕಾರ್ಮಿಕರು, ಕಲ್ಲು ಕೊರಯುವವರು ಹಾಗೂ ಅಸಂಘಟಿತ ಕಾರ್ಮಿಕರನ್ನು ಒಳಗೊಂಡ ಹೆಚ್ಚಿನ ಸಾಂಧ್ರತೆಯಿರುವ ಕಡೆ ಪ್ರಚಾರ, ಪತ್ತೆ ಕಾರ್ಯಕ್ರಮ, ಟಿ.ಬಿ ಸೇವೆಗಳನ್ನು ಮನೆ ಬಾಗಿಲಿಗೆ ತಲುಪುವಂತೆ ಮಾಡುವ ಉದ್ದೇಶದಿಂದ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ.

ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 3,796 ರೋಗಿಗಳು ಪತ್ತೆಯಾಗಿದ್ದು, ಕ್ಷಯ ರೋಗಕ್ಕೆ ತುತ್ತಾಗುವ ಒಬ್ಬ ಕ್ಷಯರೋಗಿಯಿಂದ 10-15 ಜನರಿಗೆ ಹರಡುವ ಸಾಧ್ಯತೆಯಿರುವುದರಿಂದ ಸಾರ್ವಜನಿಕರಿಗೆ ಈ ರೋಗದ ಬಗ್ಗೆ ಅರಿವು ಮೂಡಿಸಿ ಚಿಕಿತ್ಸೆ ಪಡೆಯಲು ಪ್ರೋತ್ಸಾಹಿಸಬೇಕು ಎಂದು ಆರೋಗ್ಯ ಇಲಾಖೆಗೆ ಸೂಚಿಸಿದರು.

ಎರಡು ವಾರಕ್ಕಿಂತ ಹೆಚ್ಚು ಸಮಯ ಕೆಮ್ಮು, ಎರಡು ವಾರಕ್ಕಿಂತ ಹೆಚ್ಚು ಜ್ವರ, ಗಣನೀಯವಾಗಿ ತೂಕದ ನಷ್ಟ, ಕಳೆದ 6 ತಿಂಗಳಲ್ಲಿ ಯಾವುದೇ ಸಮಯದಲ್ಲಿ ಕಫದಲ್ಲಿ ರಕ್ತ ಬೀಳುವುದು, ಕಳೆದ 1 ತಿಂಗಳಿನಿಂದ ಎದೆ ನೋವು ಇದ್ದರೆ ಚಿಕಿತ್ಸೆ ಪಡೆಯಬೇಕು ಎಂದರು.ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಗಳಾದ ಡಾ.ಜಿ.ಎ.ಶ್ರೀನಿವಾಸ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳಾದ ಡಾ.ಕುಮಾರ್.ಎಂ.ವಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.ಯುಎನ್ಐ ವಿಎನ್ 1935

More News
ಮಧುಮೇಹ : ವಿಶ್ವದಲ್ಲೇ 2ನೇ ಸ್ಥಾನದಲ್ಲಿ ಭಾರತ

ಮಧುಮೇಹ : ವಿಶ್ವದಲ್ಲೇ 2ನೇ ಸ್ಥಾನದಲ್ಲಿ ಭಾರತ

24 Sep 2020 | 8:43 PM

ಕೋಲ್ಕತಾ, ಸೆ 24 (ಯುಎನ್‌ಐ) ಭಾರತವು ವಿಶ್ವದಲ್ಲೇ ಎರಡನೇ ಅತಿ ಹೆಚ್ಚು ಮಧುಮೇಹಿಗಳನ್ನು ಹೊಂದಿದ್ದು, 77 ದಶಲಕ್ಷ ಪ್ರಕರಣಗಳನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ.

 Sharesee more..
ಕೋವಿಡ್ 19 : ದೇಶಾದ್ಯಂತ ಒಂದೇ ದಿನ 86,508 ಸೋಂಕು ಪ್ರಕರಣ, 1,129 ಸಾವು

ಕೋವಿಡ್ 19 : ದೇಶಾದ್ಯಂತ ಒಂದೇ ದಿನ 86,508 ಸೋಂಕು ಪ್ರಕರಣ, 1,129 ಸಾವು

24 Sep 2020 | 3:55 PM

ನವದೆಹಲಿ, ಸೆ 24 (ಯುಎನ್‍ಐ) ಕಳೆದ 24 ಗಂಟೆಗಳಲ್ಲಿ ಭಾರತವು 86,508 ಕೋವಿಡ್ 19 ಪ್ರಕರಣದ ದಾಖಲಿಸಿದ್ದು, ಸೋಂಕಿತರ ಒಟ್ಟು ಸಂಖ್ಯೆ 57,32,519 ಕ್ಕೆ ತಲುಪಿದೆ ಎಂದು ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ಗುರುವಾರ ತಿಳಿಸಿವೆ.

 Sharesee more..

ಕೋವಿಡ್ 19 : ದೇಶಾದ್ಯಂತ ಒಂದೇ ದಿನ 83,347 ಹೊಸ ಪ್ರಕರಣ

23 Sep 2020 | 12:48 PM

 Sharesee more..