Monday, Jul 22 2019 | Time 07:08 Hrs(IST)
  • ಶಾಸಕರು ರಾಜಕೀಯ ವ್ಯಭಿಚಾರ ಮಾಡಿದ್ದಾರೆ : ದಿನೇಶ್ ಗುಂಡೂರಾವ್ ಗಂಭೀರ ಆರೋಪ
International Share

ನೈಋತ್ಯ ಚೀನಾದಲ್ಲಿ ಕಟ್ಟಡ ಕುಸಿತ : ಓರ್ವನಿಗೆ ಗಾಯ

ಗುಯಾಂಗ್, ಜುಲೈ 11 (ಯುಎನ್ಐ) ನೈಋತ್ಯ ಚೀನಾದ ಗಿಜೌ಼ ಪ್ರಾಂತ್ಯದ ಗಿಯಾಂಗ್ ನಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿದು ಓರ್ವ ವ್ಯಕ್ತಿ ಗಾಯಗೊಂಡಿದ್ದು ಇತರ ಐವರು ಸಿಲುಕಿದ್ದಾರೆ ಎಂದು ಸ್ಥಳೀಯ ಪ್ರಾಧಿಕಾರ ಗುರುವಾರ ತಿಳಿಸಿದೆ.
ಇಬ್ಬರನ್ನು ರಕ್ಷಿಸಲಾಗಿದ್ದು ಅವರ ಪೈಕಿ ಓರ್ವನಿಗೆ ಗಾಯಗಳಾಗಿವೆ. ಇತರ ಐವರು ಕಟ್ಟಡದ ಅವಶೇಷಗಳಡಿ ಸಿಲುಕಿದ್ದು ರಕ್ಷಣಾ ಕಾರ್ಯ ಮುಂದುವರಿದಿದೆ.
ಸ್ಥಳೀಯರು ಆ ಕಟ್ಟಡ ನಿರ್ಮಿಸಿದ್ದು ತನಿಖೆ ಪ್ರಗತಿಯಲ್ಲಿದೆ ಎಂದು ವರದಿಯಾಗಿದೆ.

ಯುಎನ್ಐ ಜಿಎಸ್ಆರ್ ಆರ್ ಕೆ 1042