Saturday, Mar 28 2020 | Time 22:42 Hrs(IST)
 • ಲಾಕ್‌ಡೌನ್: ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ನಿರ್ಬಂಧಗಳು ಸಡಿಲ
 • ಕೊರೊನಾ ನಿರ್ಣಾಯಕ ಹಂತದಲ್ಲಿ, ತುರ್ತು ಪರಿಸ್ಥಿತಿ ಘೋಷಣೆ ಅಗತ್ಯವಿಲ್ಲ : ಅಬೆ
 • ಬಾಂಗ್ಲಾದೇಶದಲ್ಲಿ ರಸ್ತೆ ಅಪಘಾತ : ಆರು ಸಾವು
 • ಒಂದೇ ದಿನ 194 ಹೊಸ ಖಚಿತ ಪ್ರಕರಣ ದಾಖಲು
 • ಮೋದಿ ನಾಡಿನಲ್ಲೂ ಕರೋನ ಸೋಂಕಿಗೆ ನಾಲ್ವರ ಬಲಿ
 • ಬಡವರಿಗೆ ಆಹಾರ ಒದಗಿಸಲು ನೆರವಾಗುವಂತೆ ಪರೋಪಕಾರಿಗಳಿಗೆ ಡಿಜಿಪಿ ಪ್ರವೀಣ್ ಸೂದ್ ಮನವಿ
 • ಕೋವಿಡ್-19 ತಡೆಯಲು ಗ್ರಾಮಗಳಿಗೆ ನಿರ್ಬಂಧ; ಪಿಐಎಲ್ ಸಲ್ಲಿಕೆ
 • ಕೊರೋನಾ ಪೀಡಿತರಿಗೆ ಪರಿಹಾರ ಕೋರಿ ಪಿಐಎಲ್ ಸಲ್ಲಿಕೆ
 • ಸಾಲ ವಸೂಲಿ- ಆಸ್ತಿ ಹರಾಜು ನಡೆಸುವಂತಿಲ್ಲ: ಹೈಕೋರ್ಟ್
 • ಕರ್ನಾಟಕದ ಕಾರ್ಮಿಕರನ್ನು ತೆರವುಗೊಳಿಸುವ ವದಂತಿ ಸುಳ್ಳು; ಗೋವಾ ಸಿಎಂ
 • ಕೋವಿಡ್-19; 15 ಸಾವಿರ ಆಹಾರ ಪೊಟ್ಟಣ ವಿತರಿಸಿದ ಟಿಟಿಡಿ
 • ಜನ ಸಾಮಾನ್ಯರಿಗೆ ಅಗತ್ಯ ವಸ್ತುಗಳಿಗೆ ತೊಂದರೆಯಾಗದು: ಯಡಿಯೂರಪ್ಪ
 • ಕೊರೋನಾ ಭೀತಿ: 8 ಲಕ್ಷ ಲೀ ಹಾಲು ಮಾರಾಟವಾಗುತ್ತಿಲ್ಲ: ಬಾಲಚಂದ್ರ ಜಾರಕಿಹೊಳಿ
 • ಮನೆ ವಿತರಣೆಗೆ ಸಿದ್ಧವಾಗಿರಲು ಹೋಟೆಲ್ ಮತ್ತು ಸೂಪರ್ ಮಾರ್ಕೆಟ್‍ಗಳಿಗೆ ಮೈಸೂರು ಜಿಲ್ಲಾಡಳಿತ ಸೂಚನೆ
 • ಕೋವಿಡ್ 19 : ಟಿಟಿಡಿಯಿಂದ 15 ಸಾವಿರ ಆಹಾರ ಪೊಟ್ಟಣ ವಿತರಣೆ
Karnataka Share

ನಿಜಗುಣಾನಂದ ಸ್ವಾಮಿ ಸೇರಿ ಪ್ರಗತಿಪರರಿಗೆ ಬೆದರಿಕೆ: ದೂರು ದಾಖಲು

ಬೆಂಗಳೂರು,ಜ. 24(ಯುಎನ್‌ಐ) ನಿಜಗುಣಾನಂದ ಸ್ವಾಮೀಜಿಗೆ ಅನಾಮಧೇಯ ವ್ಯಕ್ತಿಯೊಬ್ಬರು ಅಂಚೆ ಮೂಲಕ ಜೀವಬೆದರಿಕೆಯೊಡ್ಡಿ ಪತ್ರ ಕಳುಹಿಸಿದ್ದು, ಈ ಬಗ್ಗೆ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಸ್ವಾಮೀಜಿ ದೂರು ದಾಖಲಿಸಿದ್ದಾರೆ.
ದಾವಣಗೆರೆಯಿಂದ ಈ ಅನಾಮಧೇಯ ಪೋಸ್ಟ್‌ ಬಂದಿದ್ದು, ಜೇವರ್ಗಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿರುವ ಕುರಿತು ಲೇಖಕ, ಚಿಂತಕ ಯೋಗೇಶ್‌ ಮಾಸ್ಟರ್‌ ಸಾಮಾಜಿಕ ಜಾಲತಾಣದಲ್ಲಿ ಆ ಪತ್ರವನ್ನು ಹಂಚಿಕೊಂಡಿದ್ದಾರೆ.
ಪತ್ರದಲ್ಲಿ " ನಿಮ್ಮ ಸಂಹಾರಕ್ಕೆ ಮುಹೂರ್ತ ನಿಶ್ಚಯವಾಗಿದೆ. ನಿಮ್ಮ ಅಂತಿಮ ಯಾತ್ರೆಗೆ ಸಿದ್ಧರಾಗಿ. ನಿಮ್ಮನ್ನು ಮಾತ್ರವಲ್ಲ, ಮುಂದೆ ನೋಡಿ ನಿಮ್ಮ ಜೊತೆ ಅಂತಿಮ ಯಾತ್ರೆಗೆ ಇವರುಗಳನ್ನು ನೀವು ಸಿದ್ಧ ಮಾಡಬೇಕು” ಎಂದು 15 ಜನರ ಹೆಸರನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಪತ್ರದಲ್ಲಿ ಭಜರಂಗದಳದ ಮಾಜಿ ನಾಯಕರಾದ ಮಹೇಂದ್ರ ಕುಮಾರ್‌, ನಿಜಗುಣಾನಂದ ಸ್ವಾಮಿಗಳು, ನಿಡುಮಾಮಿಡಿ ವೀರಭದ್ರ ಚನ್ನಮಲ್ಲ ಸ್ವಾಮಿ, ಚಿತ್ರನಟ ಪ್ರಕಾಶ್‌ ರಾಜ್‌, ಜ್ಞಾನಪ್ರಕಾಶ್‌ ಸ್ವಾಮಿ, ನಟ ಚೇತನ್‌, ಹಿರಿಯ ಲೇಖಕಿ ಬಿ.ಟಿ ಲಲಿತಾನಾಯಕ್‌, ಪ್ರೊ.ಮಹೇಶ್‌ ಚಂದ್ರ ಗುರು, ಪ್ರೊ ಕೆ.ಎಸ್‌ ಭಗವಾನ್‌, ಹಿರಿಯ ಪತ್ರಕರ್ತರಾದ ದಿನೇಶ್‌ ಅಮೀನ್‌ ಮಟ್ಟು, ಹಿರಿಯ ಸಾಹಿತಿ ಚಂಪಾ, ಲೇಖಕರಾದ ಯೋಗೇಶ್‌ ಮಾಸ್ಟರ್‌(ಢುಂಡಿ ಗಣೇಶ್‌), ಅಗ್ನಿ ಶ್ರೀಧರ್‌, ಸಿಪಿಎಂ ನಾಯಕಿ ಬೃಂದಾ ಕಾರಟ್‌ ಮತ್ತು ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿಯವರು ಹೆಸರನ್ನು ಸೂಚಿಸಿ ಇಷ್ಟು ಜನರನ್ನು ಸಂಹಾರ ಮಾಡುತ್ತೇವೆ ಎಂದು ಬರೆಯಲಾಗಿದೆ.
ಯುಎನ್‌ಐ ಯುಎಲ್ ಎಎಚ್ 2200
More News
ಸಾಲ ವಸೂಲಿ- ಆಸ್ತಿ ಹರಾಜು ನಡೆಸುವಂತಿಲ್ಲ: ಹೈಕೋರ್ಟ್

ಸಾಲ ವಸೂಲಿ- ಆಸ್ತಿ ಹರಾಜು ನಡೆಸುವಂತಿಲ್ಲ: ಹೈಕೋರ್ಟ್

28 Mar 2020 | 9:41 PM

ಬೆಂಗಳೂರು, ಮಾ 28 (ಯುಎನ್ಐ) ದೇಶಾದ್ಯಂತ ಲಾಕ್ ಡೌನ್ ಆದೇಶ ಜಾರಿಯಲ್ಲಿರುವವರೆಗೆ ಸಾಲ‌ಗಾರರ ಆಸ್ತಿಪಾಸ್ತಿ ಅಥವಾ ವಾಹನಗಳ ಹರಾಜು ಪ್ರಕ್ರಿಯೆ ನಡೆಸುವಂತೆ ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

 Sharesee more..