Friday, Feb 28 2020 | Time 08:18 Hrs(IST)
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
National Share

ನೇಪಾಳದಲ್ಲಿ ಉಸಿರುಗಟ್ಟಿ ಎಂಟು ಕೇರಳಿಗರು ಸಾವು: ಮುಖ್ಯಮಂತ್ರಿ ವಿಜಯನ್ ಶೋಕ

ನೇಪಾಳದಲ್ಲಿ ಉಸಿರುಗಟ್ಟಿ ಎಂಟು ಕೇರಳಿಗರು ಸಾವು: ಮುಖ್ಯಮಂತ್ರಿ ವಿಜಯನ್ ಶೋಕ
ನೇಪಾಳದಲ್ಲಿ ಉಸಿರುಗಟ್ಟಿ ಎಂಟು ಕೇರಳಿಗರು ಸಾವು: ಮುಖ್ಯಮಂತ್ರಿ ವಿಜಯನ್ ಶೋಕ

ತಿರುವನಂತಪುರಂ, ಜ 21(ಯುಎನ್‍ಐ)- ನೇಪಾಳಕ್ಕೆ ಪ್ರವಾಸಕ್ಕಾಗಿ ತೆರಳಿದ್ದ ಎಂಟು ಕೇರಳಿಗರು ಮಂಗಳವಾರ ಉಸಿರುಗಟ್ಟಿ ಸತ್ತಿರುವ ಘಟನೆ ಕುರಿತಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ದು:ಖ ವ್ಯಕ್ತಪಡಿಸಿದ್ದಾರೆ.

ಮೃತರ ದೇಹಗಳನ್ನು ನೇಪಾಳದಿಂದ ತಂದು ಅವರ ಕುಟುಂಬಗಳಿಗೆ ತಲುಪಿಸುವಂತಾಗಲು ನೇಪಾಳದಲ್ಲಿನ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸುವಂತೆ ಅನಿವಾಸಿ ಕೇರಳಿಗರ ವ್ಯವಹಾರಗಳ ಇಲಾಖೆಗೆ ಸೂಚಿಸಿದ್ದಾರೆ.

‘ಇಲಾಖೆ ಮೃತದೇಹಗಳನ್ನು ತರಲು ನಿಯಮಗಳಂತೆ ಕ್ರಮಗಳನ್ನು ತೆಗೆದುಕೊಂಡಿದೆ.’ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ಮಕ್ ವಾನ್ ಪುರದ ದಮನ್ ನಲ್ಲಿನ ಹೋಟೆಲ್ ನಲ್ಲಿ ಇಂದು ಬೆಳಿಗ್ಗೆ ಅಸ್ವಸ್ಥರಾಗಿ ಬಿದ್ದಿದ್ದ ಎಂಟು ಮಂದಿಯನ್ನು ಕಠ್ಮಂಡುವಿನ ಹಾಮ್ಸ್ ಆಸ್ಪತ್ರೆಗೆ ದಾಖಲಿಸಿತಾದರೂ, ಆಗಲೇ ಎಲ್ಲರೂ ಮೃತಪಟ್ಟಿರುವುದಾಗಿ ವೈದ್ಯರು ಪ್ರಕಟಿಸಿದ್ದಾರೆ.

ಪ್ರವಾಸಕ್ಕೆ ಬಂದಿದ್ದ ಕೇರಳ ಮೂಲದವರು ತಮ್ಮ ಕೊಠಡಿ ಬೆಚ್ಚಗಿರಲು ಗ್ಯಾಸ್ ಹೀಟರ್ ಗಳನ್ನು ಬಳಸಿದ್ದು, ಇದರಿಂದ ಉಸಿರುಗಟ್ಟಿ ಎಲ್ಲರೂ ಸತ್ತಿರಬಹುದು ಎಂದು ಮಕ್ ವಾನ್ ಪುರ್ ಪೆÇಲೀಸ್ ವರಿμÁ್ಠಧಿಕಾರಿ ಸುಶೀಲ್ ಸಿಂಗ್ ರಥಾವುರ್ ತಿಳಿಸಿದ್ದಾರೆ.

ಸೋಮವಾರ ರಾತ್ರಿ ರೆಸಾರ್ಟ್‍ನಲ್ಲಿ ಭಾರತೀಯ ಪ್ರವಾಸಿಗರು ಎರಡು ಕೊಠಡಿಗಳನ್ನು ಕಾಯ್ದಿರಿಸಿದ್ದರು. ಮೃತಪಟ್ಟ ನಾಲ್ವರು ಪುರುಷರು, ನಾಲ್ವರು ಮಹಿಳೆಯರು ಸೇರಿ ಎಲ್ಲರೂ ಒಂದೇ ಕೊಠಡಿಯಲ್ಲಿದ್ದರು.

ಕೊಠಡಿಯಲ್ಲಿ ಎಂಟು ಮಂದಿ ಭಾರತೀಯ ಪ್ರವಾಸಿಗರು ಅಸ್ವಸ್ಥಗೊಂಡಿರುವುದನ್ನು ಗಮನಿಸಿದ ರೆಸಾರ್ಟ್ ಸಿಬ್ಬಂದಿ ಪೆÇಲೀಸರಿಗೆ ವಿಷಯ ತಿಳಿಸಿದ್ದಾರೆ. ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲು ಕಠ್ಮಂಡುವಿನಿಂದ ಹೆಲಿಕಾಪ್ಟರ್ ಅನ್ನು ನಿಯೋಜಿಸಲಾಗಿತ್ತು.

ಮೃತ ಕೇರಳಿಗರನ್ನು ಪ್ರಬಿನ್ ಕುಮಾರ್ ನಾಯರ್, ಶರಣ್ಯ, ರಂಜಿತ್ ಕುಮಾರ್ ಟಿ.ಬಿ, ಇಂದು ರಂಜಿತ್, ಶ್ರೀ ಭದ್ರಾ, ಅಬಿನಬ್ ಸೊರಯ, ಅಬಿ ನಾಯರ್ ಮತ್ತು ಬೈಷ್ಣಬ್ ರಂಜಿತ್ ಎಂದು ಗುರುತಿಸಲಾಗಿದೆ.

ಸಮುದ್ರ ಮಟ್ಟದಿಂದ 2,500 ಮೀಟರ್ ಎತ್ತರದಲ್ಲಿರುವ ದಮನ್, ಪ್ರಸಿದ್ಧ ಪ್ರವಾಸಿ ತಾಣವಾಗಿದೆ.

ಯುಎನ್‍ಐ ಎಸ್‍ಎಲ್‍ಎಸ್ 1648