Monday, Jun 1 2020 | Time 02:49 Hrs(IST)
International Share

ನೇಪಾಳದಲ್ಲಿ ಕೊರೊನಾ ಸೋಂಕಿತರ ಸಂಕ್ಯೆ 584 ಕ್ಕೆ ಏರಿಕೆ

ಕಠ್ಮಂಡು, ಮೇ 23 (ಯುಎನ್ಐ) ನೇಪಾಳದಲ್ಲಿ ಮತ್ತೆ 36 ಜನರಲ್ಲಿ ಕೊರೊನಾ ವೈರಾಣು ಸೋಂಕು ದೃಢಪಟ್ಟಿದ್ದು ಒಟ್ಟು ಸೋಂಕಿತರ ಸಂಖ್ಯೆ 584 ಕ್ಕೆ ಏರಿಕೆಯಾಗಿದೆ ಎಂದು ಅಲ್ಲಿನ ಆರೋಗ್ಯ ಮತ್ತು ಜನಸಂಖ್ಯಾ ಸಚಿವಾಲಯ ತಿಳಿಸಿದೆ.

ಬಂಕೆ ಜಿಲ್ಲೆಯಲ್ಲಿಯೇ ಶನಿವಾರ ಒಂದೇ ದಿನ 27 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ. ಸದ್ಯ 511 ಜನರು ಸೋಂಕಿನಿಂದ ಬಳಲುತ್ತಿದ್ದು 70 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ವಾಪಸ್ಸಾಗಿದ್ದಾರೆ.

ಪ್ರಸ್ತುತ 32,587 ಜನರನ್ನು ಪ್ರತ್ಯೇಕವಾಗಿರಿಸಲಾಗಿದ್ದು 511 ಜನರನ್ನು ವಿವಿಧ ಪ್ರತ್ಯೇಕತಾ ಕೇಂದ್ರಗಳಲ್ಲಿರಿಸಿ ನಿಗಾ ವಹಿಸಲಾಗಿದೆ.

ನೇಪಾಳದ ಒಟ್ಟು 77 ಜಿಲ್ಲೆಗಳ ಪೈಕಿ 41 ಜಿಲ್ಲೆಗಳು ಸೋಂಕಿನಿಂದ ಬಾಧಿತವಾಗಿದೆ. ಬಂಕೆ ಜಿಲ್ಲೆಯಲ್ಲಿ ಅತಿ ಹೆಚ್ಚು 142 ಪ್ರಕರಣಗಳು ವರದಿಯಾಗಿವೆ.

ಯುಎನ್ಐ ಜಿಎಸ್ಆರ್ 2314
More News
ವಿಶ್ವದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 60 ಲಕ್ಷಕ್ಕೂ ಹೆಚ್ಚು

ವಿಶ್ವದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 60 ಲಕ್ಷಕ್ಕೂ ಹೆಚ್ಚು

31 May 2020 | 6:08 PM

ನವದೆಹಲಿ, ಮೇ 31 (ಯುಎನ್ಐ)- ಜಾಗತಿಕ ಸಾಂಕ್ರಾಮಿಕ ಕೊರೊನಾ ವೈರಸ್ (ಕೋವಿಡ್ 19) ಸೋಂಕಿತರ ಸಂಖ್ಯೆ ವಿಶ್ವದಲ್ಲಿ 60 ಲಕ್ಷದಾಟಿದ್ದು, 3.64 ಲಕ್ಷಕ್ಕೂ ಹೆಚ್ಚು ಜನರು ಈ ಸಾಂಕ್ರಾಮಿಕ ರೋಗದಿಂದ ಸಾವನ್ನಪ್ಪಿದ್ದಾರೆ.

 Sharesee more..
ಜಿ7ಗೆ ಭಾರತವನ್ನೂ ಸೇರಿಸಬೇಕು; ಟ್ರಂಪ್

ಜಿ7ಗೆ ಭಾರತವನ್ನೂ ಸೇರಿಸಬೇಕು; ಟ್ರಂಪ್

31 May 2020 | 5:31 PM

ವಾಷಿಂಗ್ಟನ್ /ನವದೆಹಲಿ, ಮೇ 31 (ಯುಎನ್ಐ) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ನಡೆಯಬೇಕಿದ್ದ ಜಿ7 ಶೃಂಗ ಸಭೆಯನ್ನು ಮುಂದೂಡಿದ್ದು, ಅದನ್ನು 'ಔಟ್ ಡೇಟೆಟ್' ಎಂದು ಕರೆದಿದ್ದಾರೆ. ಜೊತೆಗೆ, ಜಿ 7 ತಂಡದಲ್ಲಿ ಭಾರತ, ಆಸ್ಟ್ರೇಲಿಯಾ, ರಷ್ಯಾ ಮತ್ತು ದಕ್ಷಿಣ ಕೊರಿಯಾವನ್ನು ಸೇರಿಸಬೇಕು ಎಂದು ಬೇಡಿಕೆಯಿಟ್ಟಿದ್ದಾರೆ.

 Sharesee more..