Monday, Jun 1 2020 | Time 02:56 Hrs(IST)
International Share

ನ್ಯೂಜಿಲೆಂಡ್ ನಲ್ಲಿ ದಾಖಲಾಗದ ಹೊಸ ಕರೋನ ಪ್ರಕರಣ

ವೆಲ್ಲಿಂಗ್ಟನ್, ಮೇ 23 (ಯುಎನ್‌ಐ) ನ್ಯೂಜಿಲೆಂಡ್ ನಲ್ಲಿ ಶನಿವಾರ ಯಾವುದೇ ಹೊಸ ಕರೋನ ಸೋಂಕು ಪ್ರಕರಣ ವರದಿಯಾಗಿಲ್ಲ ಎಂದು ಆರೋಗ್ಯ ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಿದೆ.

ಇದರರ್ಥ ನ್ಯೂಜಿಲೆಂಡ್‌ನ ಒಟ್ಟು ದೃಡಪಡಿಸಿದ ಮತ್ತು ಸಂಭವನೀಯ ಪ್ರಕರಣಗಳ ಸಂಖ್ಯೆ 1,504 ರಷ್ಟಿದೆ, ಅದರಲ್ಲಿ 1,154 ಪ್ರಕರಣಗಳು ದೃಡಪಟ್ಟಿದೆ ಎಂದು ಹೇಳಲಾಗಿದೆ. ನ್ಯೂಜಿಲೆಂಡ್ ನಲ್ಲಿ ಪ್ರಸ್ತುತ ಈವರೆಗೆ 1,455 ಜನರು ಕರೋನ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

ಒಬ್ಬ ವ್ಯಕ್ತಿ ಮಾತ್ರ ಆಸ್ಪತ್ರೆಯಲ್ಲಿ ಆರೈಕೆ ಪಡೆಯುತ್ತಿದ್ದಾನೆ ಮತ್ತು ಐಸಿಯುನಲ್ಲಿಲ್ಲ. ದೇಶದಲ್ಲಿ ಸಾವಿನ ಸಂಖ್ಯೆ 21 ರಷ್ಟಿದೆಇಲ್ಲಿಯವರೆಗೆ ಪೂರ್ಣಗೊಂಡ ಪರೀಕ್ಷೆಗಳ ಸಂಖ್ಯೆ 255,850, ಇದು ಹಿಂದಿಗಿಂತ ಇದು 5,604 ಹೆಚ್ಚಳವಾಗಿದೆ.
ಕರೋನ ಪ್ರಕರಣಗಳನ್ನು ಗುರುತಿಸಲು, ಪತ್ತೆಹಚ್ಚಲು, ಪರೀಕ್ಷಿಸಲು ಮತ್ತು ಪ್ರತ್ಯೇಕಿಸಲು ಸಹಾಯ ಮಾಡುವ ಮೊಬೈಲ್ ಅಪ್ಲಿಕೇಶನ್ ಅನ್ನು ಸಹ ಬುಧವಾರ ಪ್ರಾರಂಭಿಸಲಾಗಿದೆ.
ಯುಎನ್ಐ ಕೆಎಸ್ಆರ್ 0906
More News
ವಿಶ್ವದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 60 ಲಕ್ಷಕ್ಕೂ ಹೆಚ್ಚು

ವಿಶ್ವದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 60 ಲಕ್ಷಕ್ಕೂ ಹೆಚ್ಚು

31 May 2020 | 6:08 PM

ನವದೆಹಲಿ, ಮೇ 31 (ಯುಎನ್ಐ)- ಜಾಗತಿಕ ಸಾಂಕ್ರಾಮಿಕ ಕೊರೊನಾ ವೈರಸ್ (ಕೋವಿಡ್ 19) ಸೋಂಕಿತರ ಸಂಖ್ಯೆ ವಿಶ್ವದಲ್ಲಿ 60 ಲಕ್ಷದಾಟಿದ್ದು, 3.64 ಲಕ್ಷಕ್ಕೂ ಹೆಚ್ಚು ಜನರು ಈ ಸಾಂಕ್ರಾಮಿಕ ರೋಗದಿಂದ ಸಾವನ್ನಪ್ಪಿದ್ದಾರೆ.

 Sharesee more..
ಜಿ7ಗೆ ಭಾರತವನ್ನೂ ಸೇರಿಸಬೇಕು; ಟ್ರಂಪ್

ಜಿ7ಗೆ ಭಾರತವನ್ನೂ ಸೇರಿಸಬೇಕು; ಟ್ರಂಪ್

31 May 2020 | 5:31 PM

ವಾಷಿಂಗ್ಟನ್ /ನವದೆಹಲಿ, ಮೇ 31 (ಯುಎನ್ಐ) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ನಡೆಯಬೇಕಿದ್ದ ಜಿ7 ಶೃಂಗ ಸಭೆಯನ್ನು ಮುಂದೂಡಿದ್ದು, ಅದನ್ನು 'ಔಟ್ ಡೇಟೆಟ್' ಎಂದು ಕರೆದಿದ್ದಾರೆ. ಜೊತೆಗೆ, ಜಿ 7 ತಂಡದಲ್ಲಿ ಭಾರತ, ಆಸ್ಟ್ರೇಲಿಯಾ, ರಷ್ಯಾ ಮತ್ತು ದಕ್ಷಿಣ ಕೊರಿಯಾವನ್ನು ಸೇರಿಸಬೇಕು ಎಂದು ಬೇಡಿಕೆಯಿಟ್ಟಿದ್ದಾರೆ.

 Sharesee more..