Saturday, Nov 28 2020 | Time 16:42 Hrs(IST)
 • ಭಾರತ್ ಬಯೋಟೆಕ್ ವಿಜ್ಞಾನಿಗಳಿಗೆ ಪ್ರಧಾನಿ ಮೋದಿ ಅಭಿನಂದನೆ
 • ಬಿಬಿಐಎಲ್‌: ಕೋವ್ಯಾಕ್ಸಿನ್‌ ಪ್ರಗತಿಗೆ ವಿಜ್ಞಾನಿಗಳಿಗೆ ಮೋದಿ ಅಭಿನಂದನೆ
 • ಉತ್ತರ ಪ್ರದೇಶದಲ್ಲಿ ‘ಲವ್ ಜಿಹಾದ್’ ನಿಗ್ರಹ ಸುಗ್ರೀವಾಜ್ಞೆ ಇಂದಿನಿಂದ ಜಾರಿ
 • ಇಂದು ಪುಣೆ ತಲುಪಲಿರುವ ಪ್ರಧಾನಿ ಮೋದಿ
 • ಪಾಕ್ ನಿಂದ ಕಾಂಬೋಡಿಯಾಗೆ ವಿಮಾನದಲ್ಲಿ 10 ಗಂಟೆ ಪ್ರಯಾಣಿಸಲಿರುವ ಆನೆ !
 • ಜೈಡಸ್ ಕ್ಯಾಡಿಲಾ ಪ್ರಯತ್ನಗಳಿಗೆ ಸಂಪೂರ್ಣ ಬೆಂಬಲ: ಪ್ರಧಾನಿ ಮೋದಿ
 • ಬಿ ಐ ಎಸ್ ದೃಢೀಕೃತ ಹೆಲ್ಮಟ್ ಮಾತ್ರ ಧರಿಸಬೇಕು ತಪ್ಪಿದರೆ ಶಿಕ್ಷೆ ನಿಶ್ಚಿತ !
 • ಗುರುಗ್ರಾಮದಲ್ಲಿ ಡಿ 18ಕ್ಕೆ ಬಾಕ್ಸಿಂಗ್ ಸಂಸ್ಥೆಯ ಚುನಾವಣೆ
 • ಹೈದ್ರಾಬಾದ್ ; ‘ಕೋವಾಕ್ಸಿನ್’ ಲಸಿಕೆ ಅಭಿವೃದ್ದಿ ಪರಿಶೀಲಿಸುತ್ತಿರುವ ಪ್ರಧಾನಿ ಮೋದಿ
 • ಪುಟಿದೇಳುವ ನಿರೀಕ್ಷೆಯಲ್ಲಿ ಒಡಿಶಾ, ಜಮ್ ಶೆಡ್ಪುರ
 • ಮತ್ತೆ ಮಿಂಚುವ ಬಗ್ಗೆ ಭರವಸೆ ನೀಡಿದ ರಾಬ್ಬೀ ಫ್ಲವರ್
 • ಸರಣಿ ಜೀವಂತಕ್ಕೆ ಟೀಮ್ ಇಂಡಿಯಾ ಹಂಬಲ
 • ದೇಶದಲ್ಲಿ ಕೋವಿಡ್‍-19ನ 41,322 ಹೊಸ ಪ್ರಕರಣಗಳು ವರದಿ: ಒಟ್ಟು ಸಂಖ್ಯೆ 93,51,110ಕ್ಕೆ ಏರಿಕೆ
 • ಭಾರತ-ಹವಾಮಾನ ಬದಲಾವಣೆ ಜ್ಞಾನ ಪೋರ್ಟಲ್ ಗೆ ಪ್ರಕಾಶ್ ಜಾವಡೇಕರ್ ಚಾಲನೆ
 • ಚಂಡಮಾರುತದಿಂದ ಉಂಟಾದ ಪರಿಸ್ಥಿತಿ ಕುರಿತು ತಮಿಳುನಾಡು ಮುಖ್ಯಮಂತ್ರಿಯೊಂದಿಗೆ ಪ್ರಧಾನಿ ಚರ್ಚೆ
National Share

ನಾಯಿ ಮಾಂಸ ಮತ್ತು ಅದರ ಮಾರಾಟಕ್ಕೆ ನಾಗಾಲ್ಯಾಂಡ್ ಸರ್ಕಾರ ನಿಷೇಧ

ಕೊಹಿಮಾ, ಜುಲೈ 04 (ಯುಎನ್‌ಐ)-ಮಹತ್ವದ ಕ್ರಮವೊಂದರಲ್ಲಿ ನಾಯಿ ಮಾಂಸ ಭಕ್ಷಣೆ ಮತ್ತು ಮಾರಾಟವನ್ನು ನಾಗಾಲ್ಯಾಂಡ್ ಸರ್ಕಾರ ನಿಷೇಧಿಸಿದೆ.
ಬಿಜೆಪಿ ಸಂಸದೆ ಮೇನಕಾ ಗಾಂಧಿ ಹಾಗೂ ಮಾಜಿ ಕೇಂದ್ರ ಸಚಿವೆ ತಿಂಗಳ ಹಿಂದೆಯೇ ಬರೆದ ಪತ್ರದ ನಂತರ ಹೊರ ರಾಜ್ಯಗಳಿಂದ ನಾಯಿಗಳನ್ನು ಆಮದು ಮಾಡಿಕೊಳ್ಳುವ ಅಪಾಯಗಳನ್ನು ಪರಿಗಣಿಸಿ ನಾಗಾಲ್ಯಾಂಡ್ ಸರ್ಕಾರ ನಾಯಿ ಮಾಂಸವನ್ನು ರಾಜ್ಯದಲ್ಲಿ ನಿಷೇಧಿಸಿದೆ ಎಂದು ವರದಿಯಾಗಿದೆ. ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ, 1960 ರ ಅನುಸಾರವಾಗಿಯೂ ಈ ಕ್ರಮತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ನಿನ್ನೆ ನಡೆದ ನಾಗಾಲ್ಯಾಂಡ್ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿದೆ. ನಾಯಿಗಳು ಮತ್ತು ನಾಯಿ ಮಾಂಸದ ವಾಣಿಜ್ಯ ಆಮದು ಮತ್ತು ವ್ಯಾಪಾರವನ್ನು ನಿಷೇಧಿಸಿದೆ. ಅಲ್ಲದೆ, ಮತ್ತು ನಾಯಿ ಮಾಂಸದ ಮಾರಾಟಕ್ಕೂ ಸರ್ಕಾರ ತಕ್ಷಣವೇ ಜಾರಿಗೆ ಬರುವಂದತೆ ನಿಷೇಧಿಸಿದೆ ಎಂದು ಸರ್ಕಾರದ ವಕ್ತಾರರೂ ಆಗಿರುವ ಯೋಜನಾ ಮತ್ತು ಸಮನ್ವಯ ಮತ್ತು ಸಂಸದೀಯ ವ್ಯವಹಾರಗಳ ಸಚಿವ ನೀಬಾ ಕ್ರೋನು ತಿಳಿಸಿದ್ದಾರೆ. ನಾಗಾಲ್ಯಾಂಡ್‌ನಾದ್ಯಂತ ಮಾರುಕಟ್ಟೆಗಳಲ್ಲಿ ನಾಯಿ ಮಾಂಸ ವ್ಯಾಪಾರ ಮತ್ತು ಅದರ ಕಾನೂನು ಬಾಹಿರ ಭಕ್ಷಣೆ ಕುರಿತು ಭಾರತೀಯ ಪ್ರಾಣಿ ರಕ್ಷಣೆ ಒಕ್ಕೂಟ(ಎಫ್‌ಒಐಎಪಿಒ)ವು ನಾಗಾಲ್ಯಾಂಡ್ ಮುಖ್ಯಮಂತ್ರಿ ನೀಫಿಯು ರಿಯೊ, ಮುಖ್ಯ ಕಾರ್ಯದರ್ಶಿ ಟೆಮ್ಜೆನ್ ಟಾಯ್, ಪೊಲೀಸ್‍ ಮಹಾ ನಿರ್ದೇಶಕ ಟಿ. ಜಾನ್ ಲಾಂಗ್‌ಕುಮೆರ್ ಮತ್ತು ಆರೋಗ್ಯ ಇಲಾಖೆಗೆ ಸಲ್ಲಿಸಿದ್ದ ದೂರಿನ ಹಿನ್ನೆಲೆಯಲ್ಲಿ ಸಚಿವ ಸಂಪುಟ ನಿಷೇಧದ ನಿರ್ಧಾರ ತೆಗೆದುಕೊಂಡಿದೆ.
ಆದರೆ, ನಾಯಿ ಮಾಂಸವನ್ನು ನಿಷೇಧಿಸುವ ರಾಜ್ಯ ಸರ್ಕಾರದ ನಿರ್ಧಾರವು ದೇಶವು ‘ಒಂದು ರಾಷ್ಟ್ರ, ಒಂದೇ ಆಹಾರ’ ದತ್ತ ಸಾಗುತ್ತಿದೆಯೇ ಎಂಬ ಪ್ರಶ್ನೆಯೊಂದಿಗೆ ಜನರಿಗೆ ಆಶ್ಚರ್ಯವನ್ನುಂಟು ಮಾಡಿದೆ.
ಈ ಮಧ್ಯೆ, ಜಿಲ್ಲೆಯ ಚಾಂಗ್ಕಿ ಗ್ರಾಮದಲ್ಲಿ ನಾಯಿಯೊಂದಕ್ಕೆ ಗುಂಡು ಹಾರಿಸಿದ ಘಟನೆಯ ವರದಿಗಳ ಕುರಿತು ಮೊಕೊಕ್ಚುಂಗ್ ಪೊಲೀಸರು ಮಾಂಗ್ಕೊಲೆಂಬಾ ಪೊಲೀಸ್ ಠಾಣೆಯಲ್ಲಿ ಸು-ಮೊಟೊ ಪ್ರಕರಣವನ್ನು ದಾಖಲಿಸಿದ್ದಾರೆ.
ಯುಎನ್‍ಐ ಎಸ್ಎಲ್ಎಸ್ 1336