Monday, Jul 13 2020 | Time 04:46 Hrs(IST)
Special Share

ನ್ಯಾಯಧೀಶರ ನೇಮಕಾತಿಯಲ್ಲಿ ಸರ್ಕಾರದಿಂದ ಯಾವುದೇ ಹಸ್ತಕ್ಷೇಪ ಎದುರಾಗಿರಲಿಲ್ಲ; ನ್ಯಾ. ಗೊಗೊಯ್

ನ್ಯಾಯಧೀಶರ ನೇಮಕಾತಿಯಲ್ಲಿ ಸರ್ಕಾರದಿಂದ ಯಾವುದೇ ಹಸ್ತಕ್ಷೇಪ ಎದುರಾಗಿರಲಿಲ್ಲ; ನ್ಯಾ. ಗೊಗೊಯ್
ನ್ಯಾಯಧೀಶರ ನೇಮಕಾತಿಯಲ್ಲಿ ಸರ್ಕಾರದಿಂದ ಯಾವುದೇ ಹಸ್ತಕ್ಷೇಪ ಎದುರಾಗಿರಲಿಲ್ಲ; ನ್ಯಾ. ಗೊಗೊಯ್

ನವದೆಹಲಿ, ಮೇ 13(ಯುಎನ್ಐ) ದೇಶದ ಮುಖ್ಯ ನ್ಯಾಯಮೂರ್ತಿಗಳಾಗಿ ತಮ್ಮ ಸೇವಾವಧಿಯಲ್ಲಿ ಸುಪ್ರೀಂ ಕೋರ್ಟ್ ಹಾಗೂ ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ಸರ್ಕಾರದ ಕಡೆಯಿಂದ ಕೊಲಿಜಿಯಂ ಮೇಲೆ ಯಾವುದೇ ರೀತಿಯ ಹಸ್ತಕ್ಷೇಪ ಎದುರಾಗಿರಲಿಲ್ಲ ಎಂದು ಸುಪ್ರೀಂಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಹಾಗೂ ಹಾಲಿ ರಾಜ್ಯಸಭಾ ಸದಸ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಸ್ಪಷ್ಟಪಡಿಸಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು ತಮ್ಮ ಸೇವಾವಧಿಯಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳನ್ನಾಗಿ ನೇಮಿಸಲು 14 ಹೆಸರುಗಳನ್ನು ಕೊಲಿಜಿಯಂ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು. ಪ್ರಸ್ತಾವನೆಯನ್ನು ಒಪ್ಪಿಕೊಂಡ ಸರ್ಕಾರ, ಸಕಾಲದಲ್ಲಿ ಅನುಮೋದನೆ ನೀಡಿತ್ತು ಎಂದು ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.

ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ತಮಗೆ ಯಾವುದೇ ಸಮಸ್ಯೆಯಾಗಲಿಲ್ಲ. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಎಲ್ಲ ಶಿಫಾರಸ್ಸುಗಳನ್ನು ಕಾಲ ಬದ್ದವಾಗಿ ಇತ್ಯರ್ಥಪಡಿಲಾಯಿತು. ಸರ್ಕಾರದ ಕಡೆಯಿಂದ ಯಾವುದೇ ಸಮಸ್ಯೆ ಉಂಟಾಗಲಿಲ್ಲ. ನಮ್ಮ ಸಂವಿಧಾನ ನ್ಯಾಯಾಂಗದ ಸ್ವಾತಂತ್ರವನ್ನು ಖಾತರಿಪಡಿಸಿದೆ ಎಂದರು

ಸುಪ್ರೀಂ ಕೋರ್ಟ್ , ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿಯ ಕೊಲಿಜಿಯಂ ವ್ಯವಸ್ಥೆ ಅತ್ಯುತ್ತಮ ವ್ಯವಸ್ಥೆಯಾಗಿದ್ದು, ನ್ಯಾಯಾಂಗ ನೇಮಕಾತಿ ವಿಷಯದಲ್ಲಿ ಸರ್ಕಾರ ಹಸ್ತಕ್ಷೇಪ ತಡೆಯಲು ಈ ವ್ಯವಸ್ಥೆ ಪರಿಣಾಮಕಾರಿಯಾಗಿ ನೆರವಾಗುತ್ತದೆ ಎಂದರು.

ನೇಮಕಾತಿ ಪ್ರಕ್ರಿಯೆಗಳಲ್ಲಿ ಕಾರ್ಯಾಂಗವನ್ನು ಹೊರಗಿಡಲು ಕೊಲಿಜಿಯಂ ಅತ್ಯುತ್ತಮ ಮಾರ್ಗವಾಗಿದೆ ಎಂಬುದು ತಮ್ಮ ಅನುಭವವಾಗಿದೆ. ಕಾರ್ಯಾಂಗ ಸಮಾನ ಪಾತ್ರ ಹೊಂದಿದ್ದರೂ, ನ್ಯಾಯಾಂಗದ ದ್ವನಿ ಅಂತಿಮವಾಗಿದೆ ಎಂದರು.

ನ್ಯಾಯಾಧೀಶರಿಗೆ ನೀಡುವ ರಕ್ಷಣೆ ಮತ್ತು ವಿನಾಯಿತಿ ಬಲಪಡಿಸಬೇಕು ಇದರಿಂದ ಅವರು ತಮ್ಮ ಕರ್ತವ್ಯವನ್ನು ನಿರ್ಭಯವಾಗಿ ನಿರ್ವಹಿಸಬಹುದು ಎಂದು ನ್ಯಾಯಮೂರ್ತಿ ಗೊಗೊಯ್ ಹೇಳಿದರು.

ಯುಎನ್ಐ ಕೆವಿಆರ್ 2058

More News
ವಿಕಾಸ್ ದುಬೆ ಪ್ರಕರಣ; ಬ್ರಾಹ್ಮಣ ಸಮುದಾಯಕ್ಕೆ ಕಿರುಕುಳ ಬೇಡ; ಯೋಗಿ ಸರ್ಕಾರಕ್ಕೆ ಮಾಯಾವತಿ ಒತ್ತಾಯ

ವಿಕಾಸ್ ದುಬೆ ಪ್ರಕರಣ; ಬ್ರಾಹ್ಮಣ ಸಮುದಾಯಕ್ಕೆ ಕಿರುಕುಳ ಬೇಡ; ಯೋಗಿ ಸರ್ಕಾರಕ್ಕೆ ಮಾಯಾವತಿ ಒತ್ತಾಯ

12 Jul 2020 | 8:41 PM

ಲಕ್ನೋ, ಜುಲೈ ೧೨ (ಯುಎನ್‌ಐ) ಭೂಗತ ಪಾತಕಿ ವಿಕಾಸ್ ದುಬೆ ಪ್ರಕರಣ ಸಂಬಂಧ ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ವಾಸ್ತವಾಂಶಗಳ ಆಧಾರದ ಮೇಲೆ ಕ್ರಮ ಜರುಗಿಸಬೇಕು.

 Sharesee more..
ಜುಲೈ ೧೮ ರಂದು ದ್ವಿತೀಯ ಪಿಯುಸಿ ಫಲಿತಾಂಶ; ಎಸ್  ಸುರೇಶ್ ಕುಮಾರ್

ಜುಲೈ ೧೮ ರಂದು ದ್ವಿತೀಯ ಪಿಯುಸಿ ಫಲಿತಾಂಶ; ಎಸ್ ಸುರೇಶ್ ಕುಮಾರ್

12 Jul 2020 | 6:42 PM

ಕುಕ್ಕೆ ಸುಬ್ರಮಣ್ಯ,ಜುಲೈ ೧೨(ಯುಎನ್ಐ) ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಗಳು ಜುಲೈ ೧೮ ರಂದು ಪ್ರಕಟಿಸಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಭಾನುವಾರ ತಿಳಿಸಿದ್ದಾರೆ.

 Sharesee more..
ಅಜ್ಞಾತ ಭಕ್ತನಿಂದ ತಿರುಪತಿ ತಿಮ್ಮಪ್ಪನಿಗೆ  ೨೦ ಚಿನ್ನದ  ಬಿಸ್ಕೆಟ್  !

ಅಜ್ಞಾತ ಭಕ್ತನಿಂದ ತಿರುಪತಿ ತಿಮ್ಮಪ್ಪನಿಗೆ ೨೦ ಚಿನ್ನದ ಬಿಸ್ಕೆಟ್ !

12 Jul 2020 | 6:35 PM

ತಿರುಮಲ, ಜುಲೈ ೧೨(ಯುಎನ್‌ಐ) ತಿರುಮಲ- ತಿರುಪತಿ ದೇವಸ್ಥಾನ ಆಸ್ತಿ ಪಾಸ್ತಿಗಳ ಬಗ್ಗೆ ಸಂಪೂರ್ಣ ಅಧ್ಯಯನ ನಡೆಸಿದ ನಂತರ ಶ್ವೇತ ಪತ್ರ ಪ್ರಕಟಿಸಲಾಗುವುದು ಎಂದು ಟಿಟಿಡಿ ಇ ಓ ಅನಿಲ್ ಕುಮಾರ್ ಸಿಂಘಾಲ್ ಭಾನುವಾರ ತಿಳಿಸಿದ್ದಾರೆ.

 Sharesee more..
ದೇಶದಲ್ಲಿ 24 ಗಂಟೆಗಳಲ್ಲಿ 28 ಸಾವಿರಕ್ಕೂ ಹೆಚ್ಚು ಕೊರೊನಾ ಪೀಡಿತರು ಪತ್ತೆ

ದೇಶದಲ್ಲಿ 24 ಗಂಟೆಗಳಲ್ಲಿ 28 ಸಾವಿರಕ್ಕೂ ಹೆಚ್ಚು ಕೊರೊನಾ ಪೀಡಿತರು ಪತ್ತೆ

12 Jul 2020 | 6:19 PM

ನವದೆಹಲಿ, ಜುಲೈ 12 (ಯುಎನ್ಐ) ದೇಶದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಬಹಳ ವೇಗವಾಗಿ ಹೆಚ್ಚುತ್ತಿವೆ. ಕಳೆದ 24 ಗಂಟೆಗಳಲ್ಲಿ 28 ಸಾವಿರಕ್ಕೂ ಅಧಿಕ ಪ್ರಕರಣ ದಾಖಲಾಗಿದ್ದು, ಸೋಂಕಿತರ ಸಂಖ್ಯೆ 8.50 ಲಕ್ಷದ ಸನಿಹ ತಲುಪಿದೆ.

 Sharesee more..
ಕೋವಿಡ್: ಅಮಿತಾಬ್, ಅಭಿಷೇಕ್ ಆರೋಗ್ಯ ಸ್ಥಿರ

ಕೋವಿಡ್: ಅಮಿತಾಬ್, ಅಭಿಷೇಕ್ ಆರೋಗ್ಯ ಸ್ಥಿರ

12 Jul 2020 | 6:11 PM

ಮುಂಬೈ, ಜು 12 (ಯುಎನ್ಐ) ಕೋವಿಡ್ ಸೋಂಕು ದೃಢಪಟ್ಟಿರುವ ಬಾಲಿವುಡ್ ಬಿಗ್‌ ಬಿ ಅಮಿತಾಬ್ ಬಚ್ಚನ್ ಮತ್ತು ಪುತ್ರ, ನಟ ಅಭಿಷೇಕ್ ಬಚ್ಚನ್ ಅವರ ಆರೋಗ್ಯ ಸ್ಥಿರವಾಗಿದೆ ಎಂದ ನಾನಾವತಿ ಆಸ್ಪತ್ರೆಯ ಮೂಲಗಳು ತಿಳಿಸಿವೆ.

 Sharesee more..