Monday, Jun 24 2019 | Time 15:02 Hrs(IST)
 • ರಷ್ಯನ್‌ ಹೆಲಿಕಾಪ್ಟರ್ಸ್‌ ಕಂಪೆನಿಯಿಂದ ಪ್ರಸಕ್ತ ವರ್ಷ 200 ಹೆಲಿಕಾಪ್ಟರ್‌ಗಳ ಉತ್ಪಾದನೆ
 • ಮರಾಠವಾಡದಲ್ಲಿ ಮುಂದುವರಿದ ಮಳೆ, ರೈತರಲ್ಲಿ ಹರ್ಷ
 • ಲೋಕಸಭೆ; ರಾಷ್ಟ್ರಪತಿ ಭಾಷಣ ಮೇಲಿನ ವಂದನಾ ನಿರ್ಣಯ ಚರ್ಚೆ ಆರಂಭ; ಮೋದಿ ಸರ್ಕಾರ ಸಾಧನೆ ಕೊಂಡಾಡಿದ ಸಾರಂಗಿ
 • ಐಎಂಎ ವಂಚನೆ ಪ್ರಕರಣ: ಆರೋಪಿ ಮನ್ಸೂರ್ ಶರಣಾದರೆ ಸೂಕ್ತ ರಕ್ಷಣೆ - ಜಮೀರ್ ಅಹಮದ್ ಖಾನ್
 • ಮಹತ್ವದ ಕುಡಿಯುವ ನೀರು ಅಭಾವ ವಿಷಯ ಕುರಿತು ಪ್ರತ್ಯೇಕ ಚರ್ಚೆ ಅಗತ್ಯ: ವೆಂಕಯ್ಯ ನಾಯ್ಡು
 • ಶಮಿ ಹ್ಯಾಟ್ರಿಕ್‌ ಸಾಧನೆಯೇ ನನ್ನ ಸ್ಮರಣೆಗೆ ಕಾರಣ: ಚೇತನ್‌ ಶರ್ಮಾ
 • 100 ದಶಲಕ್ಷ ಮಂದಿಯಿಂದ ಇಂಡೋ-ಪಾಕ್‌ ಪಂದ್ಯ ವೀಕ್ಷಣೆ
 • ನೀರಿನ ಬಿಕ್ಕಟ್ಟು: ಜೈಲುಭರೋ ಚಳುವಳಿ ಸ್ಟಾಲಿನ್ ಎಚ್ಚರಿಕೆ
 • ಬಿಎಸ್ ಪಿ- ಎಸ್ ಪಿ ಮೈತ್ರಿ ಮುರಿದುಕೊಂಡ ಮಾಯಾವತಿ
 • ನಾಳೆ ಇಂಗ್ಲೆಂಡ್‌-ಆಸ್ಟ್ರೇಲಿಯಾ ವಿರುದ್ಧ ಹೈವೋಲ್ಟೇಜ್ ಕದನ
 • ಭಾರತೀಯ ವೈಮಾನಿಕ ಪ್ರದೇಶವನ್ನು ಪಾಕ್ ಎಂದಿಗೂ ಉಲ್ಲಂಘಿಸಿಲ್ಲ: ಏರ್ ಚೀಫ್‍ ಮಾರ್ಷಲ್‍ ಧನೋವಾ
 • ಬಾಂಗ್ಲಾದೇಶ: ರೈಲು ಹಳಿ ತಪ್ಪಿಏಳು ಸಾವು, 200 ಮಂದಿಗೆ ಗಾಯ
 • ಗ್ರಾಮ ವಾಸ್ತವ್ಯ- ಸರ್ಕಾರದ ಶೂನ್ಯ ಸಾಧನೆ : ಬಿಜೆಪಿಯಿಂದ ಕಿರು ಹೊತ್ತಿಗೆ
 • ಹೊಸ ವಿಮಾನ ಸೇರ್ಪಡೆಯಾಗುವವರೆಗೆ ಎಎನ್ -32 ವಿಮಾನ ಮುಂದುವರಿಕೆ: ವಾಯು ಪಡೆ ಮುಖ್ಯಸ್ಥ ಧನೋವಾ
 • ಪಾಕಿಸ್ತಾನಕ್ಕೆ ಶೊಯೆಬ್‌ ಅಕ್ತರ್‌ ನೀಡಿದ ಸಲಹೆ ಹೀಗಿದೆ
International Share

ನೀರವ್ ಮೋದಿಗೆ ಜಾಮೀನು ನೀಡಲು ಯುಕೆ ಹೈಕೋರ್ಟ್ ನಕಾರ

ನೀರವ್ ಮೋದಿಗೆ ಜಾಮೀನು ನೀಡಲು ಯುಕೆ ಹೈಕೋರ್ಟ್ ನಕಾರ
ನೀರವ್ ಮೋದಿಗೆ ಜಾಮೀನು ನೀಡಲು ಯುಕೆ ಹೈಕೋರ್ಟ್ ನಕಾರ

ಲಂಡನ್, ಜೂ 12 (ಯುಎನ್ಐ) ಭಾರತೀಯ ಬ್ಯಾಂಕುಗಳಿಗೆ ವಂಚನೆವೆಸಗಿ ತಲೆಮರೆಸಿಕೊಂಡು ಇಂಗ್ಲೆಂಡ್‌ನಲ್ಲಿರುವ ವಜ್ರದ ವ್ಯಾಪಾರಿ ನೀರವ್ ಮೋದಿಗೆ ಜಾಮೀನು ನೀಡಲು ಬುಧವಾರ ಯುಕೆ ಹೈಕೋರ್ಟ್ ನಿರಾಕರಿಸಿದೆ

ಜಾಮೀನು ನೀಡಿದರೆ ತನಿಖೆಗೆ ಅಡ್ಡಿಯಾಗುವ ಸಾಧ್ಯತೆ ಇದೆ ಎಂದು ಹೇಳಿ ನೀರವ್ ಮೋದಿ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

ಸಾಕ್ಷಿಗಳಿಗೆ ಪ್ರಭಾವ ಬೀರುವ ಕುರಿತಂತೆ ಅರ್ಜಿದಾರರು ಮತ್ತು ಅವರ ಪರವಾಗಿ ಕಾರ್ಯನಿರ್ವಹಿಸುವವರು, ಬಲವಾದ ಪುರಾವೆಗಳನ್ನು ನೀಡಿದ್ದಾರೆ. ಜಾಮೀನು ನೀಡಿದರೆ, ತನಿಖೆಗೆ ಹಸ್ತಕ್ಷೇಪ ಮತ್ತು ಅಡಚಣೆ ಉಂಟಾಗಬಹುದು ಎಂದು ನ್ಯಾಯಾಧೀಶರು ಬುಧವಾರ ಹೇಳಿ, ಜಾಮೀನು ಅರ್ಜಿಯನ್ನು ವಜಾಗೊಳಿಸಿದರು.

ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ)ಗೆ ಸುಮಾರು 2 ಬಿಲಿಯನ್ ಡಾಲರ್‌ಗಳಷ್ಟು ಹಣವನ್ನು ವಂಚನೆ ಮಾಡಿದ ಮತ್ತು ಅಕ್ರಮ ಹಣ ವರ್ಗಾವಣೆ ಮಾಡಿದ ಪ್ರಕರಣದಲ್ಲಿ ನೀರವ್ ಮೋದಿ ಪ್ರಮುಖ ಆರೋಪಿಯಾಗಿದ್ದಾರೆ. ಬ್ರಿಟನ್‌ನಿಂದ ಭಾರತಕ್ಕೆ ಹಸ್ತಾಂತರಿಸುವಂತೆ ಅಲ್ಲಿನ ಕೆಳ ನ್ಯಾಯಾಲಯ ನೀಡಿದ ಆದೇಶದ ವಿರುದ್ಧ ನೀರವ್ ಮೇಲ್ಮನವಿ ಸಲ್ಲಿಸಿದ್ದಾರೆ.

ಯುಎನ್ಐ ಎಎಚ್ ಕೆಎಸ್‌ಆರ್ 1654